ಗುರುವಾರ , ಫೆಬ್ರವರಿ 25, 2021
19 °C
ಯೋಧರ ಕುಟುಂಬಕ್ಕೆ ನೆರವು ನೀಡುವ ಉದ್ದೇಶ

ಮಹಿಳೆಯರಿಂದ ಬೈಕ್ ಜಾಥಾ ಜ.26ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯೋಧರು ಮತ್ತು ಅವರ ಕುಟುಂಬಕ್ಕೆ ನೆರವು ನೀಡುವ ಉದ್ದೇಶ
ದಿಂದ ಇದೇ 26ರಂದು ಬೆಂಗಳೂರಿನಿಂದ ಕೋಲಾರಕ್ಕೆ ಮಹಿಳೆಯರು ಬೈಕ್ ಜಾಥಾ ಹಮ್ಮಿಕೊಂಡಿದ್ದಾರೆ.

‘ಶಿ ಫಾರ್ ಸೊಸೈಟಿ’ ಎಂಬ ಸರ್ಕಾರೇತರ ಸಂಸ್ಥೆ ಈ ಜಾಥಾ ಏರ್ಪಡಿಸಿದೆ. ಮಹಿಳೆಯರೇ ಇರುವ ಈ ಸಂಸ್ಥೆ ಈವರೆಗೆ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗಣರಾಜ್ಯೋತ್ಸವ ಅಂಗವಾಗಿ ಸಂಸ್ಥೆಯು ಈಗ ಜಾಥಾ ಏರ್ಪಡಿಸಿದ್ದು, ಕೋಲಾರದಲ್ಲಿ 100 ಯೋಧರ ಕುಟುಂಬಗಳಿಗೆ ಸೌರ ಫಲಕಗಳನ್ನು ವಿತರಿಸುವ ಉದ್ದೇಶ ಹೊಂದಿದೆ. ದೇಶಕ್ಕೆ ಸೈನಿಕರ ಕೊಡುಗೆ ಬಗ್ಗೆ ಜಾಗೃತಿ ಮೂಡಿಸುವ,
ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲು ಪ್ರೋತ್ಸಾಹಿಸುವ ಕಾರ್ಯವನ್ನೂ ಈ ಜಾಥಾ ಮೂಲಕ ಮಾಡಲಾಗುತ್ತದೆ.

‘ಕೋಲಾರದಲ್ಲಿ 500ಕ್ಕೂ ಹೆಚ್ಚು ಸೈನಿಕ ಕುಟುಂಬಗಳಿವೆ. ನಾಲ್ಕು-ಐದನೇ ತಲೆಮಾರಿನಿಂದ ಈ ಕುಟುಂಬಗಳ ಸದಸ್ಯರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತದೆ. ಇದಕ್ಕಾಗಿ ಆಯ್ದ 100 ಕುಟುಂಬಗಳಿಗೆ ಸೌರ ಫಲಕಗಳನ್ನು ವಿತರಿಸಿ
ಸೌರವಿದ್ಯುತ್ ಉತ್ಪಾದನೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಸಂಸ್ಥೆ ಹೇಳಿದೆ.

ಜಾಥಾದಲ್ಲಿ ಪಾಲ್ಗೊಳ್ಳಲು ಈಗಾಗಲೇ 100ಕ್ಕೂ ಹೆಚ್ಚು‌‌ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ. ಜ.15ರ ವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಮಾಹಿತಿಗೆ www.sheforsociety.com ವೆಬ್ ಸೈಟ್ ಸಂಪರ್ಕಿಸಬಹುದು.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು