ಮಹಿಳಾ ದಿನಾಚರಣೆಗಾಗಿ ಉಚಿತ ಕೊಡುಗೆ: ವಂಡರ್‌ಲಾ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರು

ರಾಮನಗರ: ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಮಹಿಳಾ ದಿನಾಚರಣೆ ಅಂಗವಾಗಿ ಪಾರ್ಕ್‌ಗೆ ವಿಶೇಷ ಕೊಡುಗೆ ಘೋಷಿಸಿದ್ದು, ಇದನ್ನು ನೆಚ್ಚಿ ಬಂದ ಸಾವಿರಾರು ಮಹಿಳೆಯರು ಟಿಕೆಟ್ ಸಿಗದೆ ನಿರಾಸೆಯಿಂದ ವಾಪಸ್ ಆದರು.
ಮಹಿಳಾ ದಿನದ ಅಂಗವಾಗಿ ವಂಡರ್‌ಲಾ ಮಂಗಳವಾರ ಇಡೀ ಪಾರ್ಕ್ ಅನ್ನು ಸ್ತ್ರೀಯರಿಗಾಗಿ ಮೀಸಲಿಟ್ಟಿತ್ತು. ಅಂತೆಯೇ ಒಂದು ಟಿಕೆಟ್ ಕೊಂಡಲ್ಲಿ ಮತ್ತೊಬ್ಬ ಮಹಿಳೆಗೆ ಉಚಿತ ಪ್ರವೇಶದ ಕೊಡುಗೆ ನೀಡಿತ್ತು. ಸಾಕಷ್ಟು ಮುಂಚೆಯೇ ಆನ್‌ಲೈನ್ ಬುಕ್ಕಿಂಗ್ ಆರಂಭ ಆಗಿತ್ತು. ಬುಕ್ಕಿಂಗ್ ಹೆಚ್ಚಾದ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆಯೇ ಆನ್‌ಲೈನ್ ಬುಕ್ಕಿಂಗ್ ನಿಲ್ಲಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.