ಜೋಯಿಡಾ ತಾಲೂಕಿನ ಉಳವಿ ಕ್ಷೇತ್ರ ವಚನಕಾರ ಚನ್ನವೀರಶೈವ ಧರ್ಮೀಯರ ಪುಣ್ಯಕ್ಷೇತ್ರ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿರುವ ಉಳವಿಯ ಚನ್ನಬಸವೇಶ್ವರ ದೇವಸ್ಥಾನ ಉತ್ತರ ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಒಂದು.

ಉಳವಿಗೆ ಹೋಗಲು ದಾಂಡೇಲಿಯನ್ನು ತಲುಪಿ ಅಲ್ಲಿಂದ ಕಾಳಿ ನದಿಯನ್ನು ದಾಟಿ ಹೋಗಬೇಕು. ದಾಂಡೇಲಿಯಿಂದ ಸುಮಾರು 11 ಕಿ.ಮೀ ಸಾಗಿದರೆ ಪೊಟೋಲಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಎರಡು ಮಾರ್ಗಗಳ ಮೂಲಕ ಉಳವಿಗೆ ಹೋಗಬಹುದು.

ಒಂದು ಗೂಂಡ್ಯ, ಸಿಂಥೇರಿ ರಾಕ್ನ ಒಳಮಾರ್ಗ, ಇನ್ನೊಂದು ಕುಂಬರವಾಡ ಮತ್ತು ಜೋಯಿಡಾ ಮಾರ್ಗ.

ಬಸವಣ್ಣನವರ ಅಕ್ಕ ನಾಗಲಾಂಬಿಕೆ ಮಗ ಚನ್ನಬಸವಣ್ಣ ತಮ್ಮ ಹನ್ನೆರಡನೇ ವರ್ಷದಲ್ಲಿ ಅನುಭವ ಮಂಟಪದ ಚರ್ಚಾ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಪಕಾಲದಲ್ಲಿಯೇ ವೀರಶೈವ ಧರ್ಮದ ಸಾಂಪ್ರದಾಯಿಕ ವಚನಗಳನ್ನು ಪರಿಷ್ಕರಿಸಿ, ಷಟ್ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದವರು. ಕಿರಿಯ ವಯಸ್ಸಿನಲ್ಲಿಯೇ ಅಪಾರ ವಿದ್ವತ್ ಅನುಭವ, ಅಧ್ಯಾತ್ಮಿಕ, ತರ್ಕ, ಉನ್ನತ ವಿಚಾರಧಾರೆಯಿಂದ, ಪ್ರಬುದ್ಧ ವಚನಗಳನ್ನು ರಚಿಸಿ ಸಮಾಜದಲ್ಲಿನ ಅಜ್ಞಾನ, ಅಸಮಾನತೆ, ಅಸ್ಪಶೃತ್ಯೆಯಂತಹ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಶ್ರಮಿಸಿದವರು.

ಕಲ್ಯಾಣದ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪುಗಳಾಗಿ ವಿವಿಧೆಡೆಗೆ ಚದುರಿ ಹೋದರು. ತಾಯಿ ನಾಗಲಾಂಬಿಕೆ ಅವರೊಂದಿಗೆ ಚನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಗುಂಪೊಂದು ಉಳವಿಗೆ ಬಂದು ನೆಲೆಸಿತು. ಅವರು ತಮ್ಮ 24ನೇ ವರ್ಷದಲ್ಲಿ ಇಲ್ಲಿಯೇ ಜೀವಂತ ಸಮಾಧಿಯಾದರೆಂದು ಹೇಳಲಾಗಿದೆ. ಅವರ ಸಮಾಧಿ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ.

ಇಲ್ಲಿನ ಚನ್ನಬಸವಣ್ಣನವರ ಸಮಾಧಿಗೆ ನಿತ್ಯ ಮುಂಜಾನೆ 6.00 ರಿಂದ 7.30ರವರೆಗೆ ರುದ್ರಾಭಿಷೇಕ ನಡೆಯುತ್ತದೆ. ನಂತರ 12.00 ಗಂಟೆಯವರೆಗೆ ಇತರ ಅಭಿಷೇಕ ಹಾಗೂ ಪೂಜೆಗಳು ನಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ.

ಉಳವಿ ಸಮೀಪ ವಚನಕಾರ ಹರಳಯ್ಯ ಚಿಲುಮೆ, ಅಕ್ಕ ನಾಗಮ್ಮನವರ ಗವಿ, ವಿಭೂತಿ ಕಣಜ, ಆಕಳ ಗವಿ, ರುದ್ರಾಕ್ಷಿ ಮಂಟಪ, ಪಂಚಲಿಂಗೇಶ್ವರ ಗವಿ, ಮಹಾಮನೆ ಗವಿ, ಕಿನ್ನರಿ ಬೊಮ್ಮಯನ ನದಿ ಹಾಗೂ ಚನ್ನಬಸವ ಜಲಪಾತ ಇತ್ಯಾದಿಗಳು 12 ಕಿಮೀ ದೂರದಲ್ಲಿವೆ. ಇಲ್ಲಿಗೆ ಹೋಗಲು ಉಳವಿಯಿಂದ ಬಾಡಿಗೆ ವಾಹನಗಳು ಸಿಗುತ್ತವೆ.

ಉಳವಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಐದು ಸುಸಜ್ಜಿತವಾದ ವಸತಿ ಗೃಹಗಳಿವೆ. ಇವುಗಳಲ್ಲಿ ತಂಗಲು ರೂ 50 ರಿಂದ ರೂ250 ರವರೆಗೆ ಬಾಡಿಗೆ ಇದೆ.

ನಿತ್ಯ ದಾಸೋಹಈ ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಇಲ್ಲಿನ ಚನ್ನಬಸವ ಪ್ರಸಾದ ನಿಲಯದಲ್ಲಿ ಮಧ್ಯಾಹ್ನ 12:30 ರಿಂದ 3:00 ಗಂಟೆವರೆಗೆ ಮತ್ತು ರಾತ್ರಿ 8:30 ರಿಂದ 9:30 ರವರೆಗೆ ಹೀಗೆ ನಿತ್ಯ ಎರಡು ಹೊತ್ತು ಉಚಿತ ಅನ್ನ ಸಂತರ್ಪಣೆ ವ್ಯವಸ್ಥೆ ಇದೆ.

ಪ್ರತಿ ವರ್ಷ ಮಾಘ ಮಾಸದ ಭಾರತ ಹುಣ್ಣಿಮೆಯಂದು ವಾರ್ಷಿಕ ರಥೋತ್ಸವ ಮತ್ತು ಜಾತ್ರೆ ನಡೆಯುತ್ತದೆ. ಜತೆಗೆ ದೇವಸ್ಥಾನದಲ್ಲಿ ದಾನಿಗಳ ಸಹಾಯದಿಂದ ನಿರ್ಮಿಸಲಾದ ಬೆಳ್ಳಿಯ ರಥವಿದ್ದು, ಭಕ್ತರು ನಿರ್ದಿಷ್ಟ ಶುಲ್ಕ ಪಾವತಿಸಿ ದೇವಸ್ಥಾನದ ಆವರಣದಲ್ಲಿ ರಥ ಸೇವೆಯನ್ನು ಮಾಡಬಹುದು.

ಉಳವಿಗೆ ದಾರಿ
ಉಳವಿಗೆ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಾರವಾರ, ದಾಂಡೇಲಿ, ಗೋವಾದ ಪಣಜಿ, ವಾಸ್ಕೊ, ಮಡಗಾಂವ್, ಮಹಾರಾಷ್ಟ್ರದ ಇಚಲಕರಂಜಿ ಸೇರಿದಂತೆ ಅನೇಕ ಪ್ರಮುಖ ಊರುಗಳಿಂದ ನೇರ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಬರುವವರು ಸಮೀಪದ ಸಿಂಥೇರಿ ರಾಕ್, ಕಾಳಿನದಿ, ಅಣಸಿ ಸಂರಕ್ಷಿತ ಅರಣ್ಯ, ಸೂಪಾ ಜಲಾಶಯಗಳನ್ನು ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ನಂಬರ್ಗಳು: 08383-250801, 250806 ಅಥವಾ ವೈಬ್ಸೈಟ್ : contact@channabasava.com ಗೆ ಭೇಟಿ ನೀಡಬಹುದು.

ಸೇವಾ ವಿವರ
ರುದ್ರಾಭಿಷೇಕ - 250 ರೂ
ಲಘು ರುದ್ರ - 150 ರೂ
ಪಂಚಾಭಿಷೇಕ - 50 ರೂ
ಜಡೆ (ಜವುಳ) - 15 ರೂ
ತೆಂಗಿನಕಾಯಿ ತುಲಾಭಾರ - 15ರೂ
ದೀಡ ನಮಸ್ಕಾರ - 11ರೂ
ನಿತ್ಯ ರುದ್ರಾಭಿಷೇಕ ಸೇವೆ - 5001ರೂ
ನಿತ್ಯ ದಾಸೋಹ ಸೇವೆ - 5001ರೂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.