ಬಟುಮಿ (ಜಾರ್ಜಿಯಾ): ಫಿಡೆ ಮಹಿಳಾ ವಿಶ್ವಕಪ್ ಇತಿಹಾಸಲ್ಲೇ ಮೊದಲ ಬಾರಿ ಭಾರತದ ಆಟಗಾರ್ತಿಯೊಬ್ಬರ ಕಿರೀಟ ಧಾರಣೆಗೆ ಮುಹೂರ್ತ ನಿಗದಿಯಾಗಿದೆ. ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಶನಿವಾರ ಆರಂಭವಾಗುವ ಫೈನಲ್ನಲ್ಲಿ ಯುವ ತಾರೆ ದಿವ್ಯಾ ದೇಶಮುಖ್ ಅವರನ್ನು ಎದುರಿಸಲಿದ್ದು ಈ ಹಣಾಹಣಿ ಕುತೂಹಲ ಮೂಡಿಸಿದೆ.

ವಿಶ್ವಕಪ್ ಫೈನಲ್ ತಲುಪಿದ್ದರಿಂದ ಇಬ್ಬರೂ ಆಟಗಾರ್ತಿಯರು ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆಯನ್ನೂ ಸಂಪಾದಿಸಿದ್ದಾರೆ. ಅನುಭವದ ಆಧಾರದಲ್ಲಿ 38 ವರ್ಷ ವಯಸ್ಸಿನ ಹಂಪಿ ಫೈನಲ್ನಲ್ಲಿ ತಮಗಿಂತ ಅರ್ಧದಷ್ಟು ವಯಸ್ಸಿನ ಆಟಗಾರ್ತಿಯ ವಿರುದ್ಧ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.

ಹಂಪಿ ಅವರು ದೀರ್ಘ ಪಂದ್ಯಗಳಲ್ಲಿ ತಪ್ಪಿಲ್ಲದೇ ಆಡುವ ಸಾಮರ್ಥ್ಯ ಹೊಂದಿರುವವರು. ದಿವ್ಯಾ ಅವರದು ಅಕ್ರಮಣಕಾರಿ ಶೈಲಿಯ ಆಟ. ಹೀಗಾಗಿ ಹೋರಾಟ ನಿರೀಕ್ಷಿಸಬಹುದಾಗಿದೆ.

ಗುರುವಾರ ನಡೆದ ಸೆಮಿಫೈನಲ್ನ ಎರಡನೇ ಸೆಟ್ ರ್ಯಾಪಿಡ್ನ ಮೊದಲ ಆಟವನ್ನು ಚೀನಾದ ಟಿಂಗ್ಜೀ ಲೀ ಗೆದ್ದಾಗ, ಹಂಪಿ ಅವರಿಗೆ ನಂತರದ ಆಟವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿತ್ತು. ಡ್ರಾ ಆದರೂ ಅವರು ಹೊರಬೀಳುತ್ತಿದ್ದರು. ಆದರೆ ಧೃತಿಗೆಡದೇ ಆಡಿ ಗೆದ್ದ ಅವರು 3–3 ಸಮಮಾಡಿಕೊಂಡರು. ನಂತರ ಅತಿವೇಗದ ನಡೆಗಳ ಅಗತ್ಯವಿರುವ ಬ್ಲಿಟ್ಝ್ನ ಎರಡೂ ಪಂದ್ಯ ಗೆದ್ದು ಸಂಭ್ರಮಿಸಿದ್ದರು.

19 ವರ್ಷ ವಯಸ್ಸಿನ ದಿವ್ಯಾ ಇನ್ನೊಂದು ಸೆಮಿಫೈನಲ್ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ಚೀನಾದ ಇನ್ನೋರ್ವ ಆಟಗಾರ್ತಿ ಝೊಂಗ್ಯಿ ತಾನ್ ಅವರನ್ನು ಸೋಲಿಸಿ ಒಂದು ದಿನ ಮೊದಲೇ ಫೈನಲ್ ತಲುಪಿದ್ದರು.

22 ವರ್ಷಗಳ ಹಿಂದೆ ಗ್ರ್ಯಾಂಡ್ಮಾಸ್ಟರ್ ಆಗಿದ್ದ ಹಂಪಿ, ಹಾಲಿ ವಿಶ್ವ ಮಹಿಳಾ ರ್ಯಾಪಿಡ್ ಚಾಂಪಿಯನ್ ಸಹ ಆಗಿದ್ದಾರೆ. ವಯಸ್ಸು ತಮಗೆ ಬರೇ ಸಂಖ್ಯೆಯಷ್ಟೇ ಎಂಬುದನ್ನು ಆಂಧ್ರದ ಆಟಗಾರ್ತಿ ಸಾಬೀತುಪಡಿಸಿದ್ದಾರೆ. ಹಲವು ವರ್ಷಗಳಿಂದ ಆಡುತ್ತಿದ್ದರೂ ಅವರ ದೃಢಸಂಕಲ್ಪ ಮತ್ತು ಛಾತಿ ಒಂದಿಷ್ಟೂ ಮಸುಕಾಗಿಲ್ಲ.

ದಿವ್ಯಾ ಈಗಾಗಲೇ ತಮಗಿಂತ ಪ್ರಬಲ ಆಟಗಾರ್ತಿಯರನ್ನು ಮಣಿಸಿ  ‘ಜಯಂಟ್ ಕಿಲ್ಲರ್’ ಎನಿಸಿದ್ದಾರೆ. ಇವರಲ್ಲಿ ಎರಡನೇ ಶ್ರೇಯಾಂಕದ ಚೀನಾ ಆಟಗಾರ್ತಿ ಝಿನೆರ್ ಝು, ಸ್ವದೇಶದ ದ್ರೋಣವಲ್ಲಿ ಹಾರಿಕ ಒಳಗೊಂಡಿದ್ದಾರೆ. ಸೆಮಿಫೈನಲ್ನಲ್ಲಿ ಅವರು ಮಾಜಿ ವಿಶ್ವಚಾಂಪಿಯನ್, ಚೀನಾದ ಝೊಂಗ್ಯಿ ತಾನ್ ವಿರುದ್ಧ ಮತ್ತೊಂದು ಅಚ್ಚರಿಯ ಗೆಲುವು ಸಾಧಿಸಿದ್ದಾರೆ.

‘ನಾನು ಇನ್ನೂ ಚೆನ್ನಾಗಿ ಆಡಲು ಅವಕಾಶವಿತ್ತು. ಸೆಮಿಫೈನಲ್ನ ಎರಡನೇ ಕ್ಲಾಸಿಕಲ್ ಆಟ ತಡವಾಗಿ (101 ನಡೆ) ಗೆಲ್ಲುವ ಮೊದಲೇ ನನಗೆ ನಿರ್ದಿಷ್ಟ ಸಂದರ್ಭವೊಂದರಲ್ಲಿ ಪಂದ್ಯ ಮುಗಿಸುವ ಅವಕಾಶ ಒದಗಿತ್ತು. ಆದರೆ ಅದನ್ನು ಗ್ರಹಿಸಲಿಲ್ಲ’ ಎಂದು ಅವರು ಹೇಳಿದ್ದರು.

‘ಮೊದಲ ಗೆಲುವಿನ ಅವಕಾಶ ಕೈತಪ್ಪಿದ ನಂತರ ಪಂದ್ಯ ಡ್ರಾ ಆಗಬಹುದೆಂದು ಭಾವನೆ ಮೂಡಿತು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು’ ಎಂದರು.

ಪ್ರಿಕ್ವಾರ್ಟರ್ಫೈನಲ್ನಲ್ಲಿ, ಮಾಜಿ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ಅವರ ವಿರುದ್ಧ ಗೆಲ್ಲಬೇಕಾದರೆ ಹಂಪಿ ಟೈಬ್ರೇಕರ್ ಆಡಬೇಕಾಯಿತು. ನಂತರ ಚೀನಾದ ಯುಕ್ಸಿನ್ ಸಾಂಗ್ ವಿರುದ್ಧ ಪರಿಪೂರ್ಣ ಅಚ್ಚುಕಟ್ಟಾದ ಆಟವಾಡಿ ಗೆದ್ದರು. ಆದರೆ ಅವರು ತಮ್ಮ ಉತ್ತಮ ಆಟವನ್ನು ಸೆಮಿಫೈನಲ್ಗೆ ಕಾಪಿಟ್ಟಂತೆ ಕಂಡಿತು. ಚೀನಾದ ಟಿಂಗ್ಜೀ ವಿರುದ್ಧ ರ್ಯಾಪಿಡ್ ಟೈಬ್ರೇಕ್ ಪಂದ್ಯಗಳ ನಂತರವೂ ಸ್ಕೋರ್ 3–3 ಸಮನಾದ ನಂತರ ಅವರು ಐದು ನಿಮಿಷಗಳ ಅವಧಿಯ ಎರಡೂ ಬ್ಲಿಟ್ಝ್ ಪಂದ್ಯಗಳಲ್ಲಿ ಎದುರಾಳಿಯನ್ನು ಸದೆಬಡಿದರು.

ಫೈನಲ್ ಮಾದರಿ

ಇತರ ಸುತ್ತುಗಳ ರೀತಿಯಲ್ಲೇ, ಫೈನಲ್ನಲ್ಲೂ ಮೊದಲ ಎರಡು ದಿನ (ಶನಿವಾರ ಮತ್ತು ಭಾನುವಾರ) ಸಾಂಪ್ರದಾಯಿಕ ರೀತಿಯ ಪಂದ್ಯ ನಡೆಯಲಿದೆ. ಸ್ಕೋರ್ 1–1 ಸಮಬಲವಾದಲ್ಲಿ ಮಾತ್ರ ವಿಜೇತರನ್ನು ನಿರ್ಧರಿಸಲು ಮೂರನೇ ದಿನ ಅಲ್ಪಾವಧಿಯ ಟೈಬ್ರೇಕ್ ಪಂದ್ಯಗಳನ್ನು ಆಡಬೇಕಾಗುತ್ತದೆ.

ಈ ವಿಶ್ವಕಪ್ನಲ್ಲಿ ಮೊದಲ ಮೂರು ಸ್ಥಾನ ಪಡೆದವರು ಮುಂದಿನ ವರ್ಷ ನಡೆಯಲಿರುವ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯುತ್ತಾರೆ.

ಸೆಮಿಫೈನಲ್ನಲ್ಲಿ ಸೋತ ಚೀನಾದ ಆಟಗಾರ್ತಿರಾದ ಟಿಂಗ್ಜಿ ಲೀ ಅಥವಾ ಝೊಂಗ್ಯಿ ತಾನ್ ಶನಿವಾರ ಮೂರನೇ ಸ್ಥಾನಕ್ಕಾಗಿ ಆಡಲಿದ್ದಾರೆ. ಗೆದ್ದ ಆಟಗಾರ್ತಿ ಕೂಡ ಕ್ಯಾಂಡಿಡೇಟ್ಸ್ಗೆ ಅರ್ಹತೆ ಪಡೆಯಲಿದ್ದಾರೆ. ಎಂಟು ಮಂದಿಗಷ್ಟೇ ಅವಕಾಶವಿರುವ ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತರು ಹಾಲಿ ವಿಶ್ವ ಚಾಂಪಿಯನ್ಗೆ ‘ಚಾಲೆಂಜರ್’ ಆಗುತ್ತಾರೆ. ಈಗ ಚೀನದ ವೆನ್ಜುನ್ ಜು ಅವರು ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.

‘ಪ್ರಶಸ್ತಿ ಭಾರತದ ಪಾಲಾಗುವುದು ಖಚಿತವಾಗಿರುವುದರಿಂದ ಇದು ಚೆಸ್ ಅಭಿಮಾನಿಗಳಿಗೆ ಅತ್ಯಂತ ಸಂಭ್ರಮದ ಗಳಿಗೆ. ಆದರೆ ಆಟಗಾರ್ತಿಯಾಗಿ ನನಗೆ ಕಠಿಣ ಪಂದ್ಯವೂ ಎದುರಾಗಲಿದೆ. ಇಡೀ ಟೂರ್ನಿಯಲ್ಲಿ ದಿವ್ಯಾ ಅಮೋಘವಾಗಿ ಆಡಿದ್ದಾರೆ.
– ಕೋನೇರು ಹಂಪಿ (ಫಿಡೆ ವೆಬ್ಸೈಟ್ ಸಂದರ್ಶನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.