ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ಸಿಂಹಾಸನ ದರ್ಶನ ಭಾಗ್ಯ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಿಶ್ವದ ಏಕೈಕ ಹಸ್ತಿ ದಂತ ಸಿಂಹಾಸನವನ್ನು ಇಂದು ನೋಡುವ ಭಾಗ್ಯ ಭಕ್ತಾದಿಗಳಿಗೆ ಒದಗಿಸಲಿದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶ್ರೀರಾಮಚಂದ್ರಾಪುರ ಮಠ.

30ರ ದಶಕದಲ್ಲಿ ನಿರ್ಮಿಸಲಾಗಿದೆ ಈ ಅದ್ಭುತ ಸಿಂಹಾಸನವನ್ನು. ಶ್ರೀಮಠದ  ಅಂದಿನ ಪೀಠಾಧಿಪತಿಗಳಾದ ಶ್ರೀರಾಮಚಂದ್ರ ಭಾರತೀಯವರು ಸಾಕಿದ ಆನೆಯ ಮರಣಾನಂತರ ಅದರ ದಂತದಿಂದ ಇದನ್ನು ನಿರ್ಮಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಉಳಿದ ದಿನಗಳಲ್ಲಿ ಇದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ.

 ಶ್ರೀಮಠದ ಶ್ರೀದೇವರ ಮಹಾರಥೋತ್ಸವ ನಡೆಯುವ ರಾಮನವಮಿಯಂದು ಸಾರ್ವಜನಿಕರ ದರ್ಶನಕ್ಕೆ ಇದು ಮುಕ್ತ. ೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಸಂಘಟಿಸುತ್ತಾ ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ಮಹಾತ್ಮ ಗಾಂಧೀಜಿ ಕೂಡ ಈ ಸಿಂಹಾಸನದ ದರ್ಶನ ಪಡೆದಿದ್ದರು. ಅಂದಿನ ಕಾಂಗ್ರೆಸ್ ಸೆನೆಟ್ ಸಭೆಯಲ್ಲಿ ಇದನ್ನು ದರ್ಶನಕ್ಕೆ ಇಡಲಾಗುತ್ತಿದ್ದುದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT