ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ ಭಕ್ತಿಯ ಸೆಲೆ, ಕಲೆಯ ನೆಲೆ. ಕನ್ನಡದ ಮೊದಲ ರಾಜವಂಶ ಕದಂಬರ ಕೊಡುಗೆ. ವರದಾ ನದಿ ದಡದಲ್ಲಿ ನೆಲೆಸಿರುವ ಮಧುಕೇಶ್ವರ, ಕದಂಬರ ಕಾಲದ ಗತ ವೈಭವದಿಂದ ಇಂದಿನ ಸಾಮಾನ್ಯ ಸ್ಥಿತಿಯ ಎಲ್ಲ ಕಾಲಾನುಘಟ್ಟಕ್ಕೆ ಮೂಕ ಸಾಕ್ಷಿಯಾಗಿ ನೆಲೆ ನಿಂತವನು.

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ~ ಎಂದು ಆದಿ ಕವಿ ಪಂಪ ವರ್ಣಿಸಿದ ಐತಿಹಾಸಿಕ ಕ್ಷೇತ್ರ ಬನವಾಸಿಯಲ್ಲಿ ಮೌರ್ಯರು, ಶಾತವಾಹನರು, ಪಲ್ಲವರು ಆಳ್ವಿಕೆ ನಡೆಸಿದ್ದರು. ಆದರೆ ಅದರ ಖ್ಯಾತಿ ವಿಸ್ತರಿಸಿದ್ದು ಕದಂಬರ ಆಡಳಿತದಲ್ಲಿ (4ನೇ ಶತಮಾನ).

ಮಧು ವರ್ಣದ ಐದಡಿ ಎತ್ತರದ ಭವ್ಯ ಲಿಂಗರೂಪಿ ಮಧುಕೇಶ್ವರ ಇಲ್ಲಿನ ಪ್ರಧಾನ ದೇವತೆ. ಐದು ಕಲ್ಲಿನ ಪೀಠದ ಮೇಲೆ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಪರಮೇಶ್ವರನ ಐದು ಮುಖಗಳನ್ನು ಇದು ಪ್ರತಿನಿಧಿಸುತ್ತದೆ. ಪ್ರತಿ ಪೀಠದ ನಾಲ್ಕೂ ದಿಕ್ಕುಗಳಲ್ಲಿ ಐದೈದು ಪದ್ಮದಳಗಳಿವೆ. ಐದು ಪೀಠಗಳ ನೂರು ಪದ್ಮದಳ ಹಾಗೂ ಮೇಲಿನ ಗೋಲಾಕಾರದ ಲಿಂಗ ಸೇರಿ 101 ದಳಗಳ ದಿವ್ಯಲಿಂಗವಾಗಿದೆ. ದೇವಾಲಯದ ಗರ್ಭಗುಡಿ, ಕಲ್ಲಿನ ಕಂಬಗಳು, ಬೃಹತ್ ನಂದಿ ವಿಗ್ರಹ, ಅಮ್ಮನವರ ಗುಡಿ ಕದಂಬ ವಾಸ್ತುಶೈಲಿಯ ಕುರುಹುಗಳಾಗಿ ಉಳಿದುಕೊಂಡಿವೆ.

ದೇವಸ್ಥಾನದ ಉತ್ತರ ದ್ವಾರದ ಮೇಲ್ಭಾಗದಲ್ಲಿ ಕದಂಬ ರಾಜ ಮನೆತನದ ಲಾಂಛನ ಕಾಣಬಹುದಾಗಿದೆ. ದೇವಾಲಯದ ಆವಾರದಲ್ಲಿ ಮಹಾರಾಷ್ಟ್ರದ ಕೇಳ್ಕರ ಮಹಾರಾಣಿ ದಾನ ನೀಡಿದ ಬೃಹತ್ ಗಂಟೆ, ಎರಡನೇ ಶತಮಾನದ ನಾಗಮೂರ್ತಿ ವಿಗ್ರಹ, 16ನೇ ಶತಮಾನದಲ್ಲಿ ಸೋದೆ ಅರಸರು ಕೊಡುಗೆ ನೀಡಿದ ತ್ರೈಲೋಕ್ಯ ಮಂಟಪ, ಕಲ್ಲಿನ ಮಂಚ ಕಣ್ಸೆಳೆಯುತ್ತವೆ. ಕ್ರಿ.ಶ. 1608ರಲ್ಲಿ ಸೋದೆ ಅರಸು ರಾಮಚಂದ್ರ ನಾಯಕ ಕದಂಬರ ವಿಶೇಷ ಉತ್ಸವ ವಸಂತೋತ್ಸವ ಆಚರಣೆ ನಿಮಿತ್ತ ದಾನವಾಗಿ ನೀಡಿದ ರಥ ದೇವಾಲಯಕ್ಕೆ ಬರುವವರನ್ನು ಸ್ವಾಗತಿಸುತ್ತದೆ. 40 ಅಡಿ ಎತ್ತರ, 26 ಅಡಿ ಅಗಲದ ಈ ತೇರು ಭವ್ಯವಾಗಿದೆ.

ದೇವಾಲಯದಲ್ಲಿ ಶೈವಾಗಮ ಪದ್ಧತಿಯಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಶಿವರಾತ್ರಿಯಂದು ಸಾವಿರಾರು ಭಕ್ತರು ಆಗಮಿಸುತ್ತಾರೆ. ಯುಗಾದಿ, ರಥೋತ್ಸವ, ಕೃಷ್ಣಾಷ್ಟಮಿ, ನವರಾತ್ರಿ, ಕಾರ್ತಿಕ ಮಾಸದ ನಿತ್ಯ ದೀಪೋತ್ಸವ ವಿಶೇಷ ಉತ್ಸವಗಳು. ದೇವಾಲಯದ ತೀರ್ಥ ಸೇವಿಸಿದರೆ ಚರ್ಮರೋಗ ಗುಣವಾಗುತ್ತದೆ, ಬೇಡಿದ್ದನ್ನು ಕರುಣಿಸುತ್ತಾನೆ ಮಧುಕೇಶ್ವರ ಎಂಬುದು ಭಕ್ತರ ನಂಬಿಕೆ.

ಇಲ್ಲಿಗೆ ಬಂದವರು ಅರ್ಧ ಕಿಲೋಮೀಟರ್ ದೂರದ ಆದಿ ಮಧುಕೇಶ್ವರ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡುತ್ತಾರೆ. ಸಮೀಪ ಇರುವ ಗುಡ್ನಾಪುರದಲ್ಲಿ ಸಹ ಕದಂಬರ ಕಾಲದ ನೆನಪುಗಳಿವೆ. ರಾಣಿ ಅರಮನೆ ಕುರುಹು, ಪ್ರಸಿದ್ಧ ಗುಡ್ನಾಪುರ ಶಾಸನಗಳನ್ನು ಕಾಣಬಹುದಾಗಿದೆ.

ಅರೆ ಮಲೆನಾಡು ಹಾಗೂ ಬಯಲು ಸೀಮೆ ಸಂಸ್ಕೃತಿಯ ಮಿಶ್ರಣದ ಬನವಾಸಿ ಪಟ್ಟಣ ಶಿರಸಿ ಮತ್ತು ಸೊರಬದಿಂದ 24 ಕಿಮೀ ಸಮಾನ ದೂರದಲ್ಲಿದೆ. ಸೊರಬದಿಂದ ಪ್ರತಿ ಅರ್ಧ ತಾಸು, ಶಿರಸಿಯಿಂದ ಪ್ರತಿ ಒಂದು ತಾಸಿಗೆ ಬಸ್ ಸೌಕರ್ಯವಿದೆ. ಹುಬ್ಬಳ್ಳಿಯಿಂದ ಸ್ವಂತ ವಾಹನದಲ್ಲಿ ಬರುವವರು ಮಳಗಿ, ದಾಸನಕೊಪ್ಪ ಮಾರ್ಗವಾಗಿ ಬನವಾಸಿ ತಲುಪಬಹುದು. ಪ್ರವಾಸಿಗರಿಗೆ ದೇವಸ್ಥಾನದಲ್ಲಿ ಮಧ್ಯಾಹ್ನ ದಾಸೋಹ ವ್ಯವಸ್ಥೆ ಇದ್ದು, ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ, ಯಾತ್ರಿ ನಿವಾಸದಲ್ಲಿ ವಸತಿ ಸೌಲಭ್ಯ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.