ಆ್ಯಮ್ಸ್ಟರ್ಡ್ಯಾಮ್ ನಗರವನ್ನು ನೋಡದಿದ್ದರೆ ಯೂರೋಪಿನ ಪ್ರವಾಸ ಅಪೂರ್ಣವೆಂದೇ ಹೇಳಬಹುದು. ಹೆಚ್ಚಿನ ಸಂಖ್ಯೆಯ ಕಾಲುವೆಗಳನ್ನು ಹೊಂದಿರುವುದರಿಂದ ಹಾಗೂ ಇಲ್ಲಿಯೂ ಪ್ರವಾಸಿಗರಿಗಾಗಿ ಅನೇಕ ರೀತಿಯ ದೋಣಿ ವಿಹಾರದ ಅನುಕೂಲವಿರುವುದರಿಂದ ಆ್ಯಮ್ಸ್ಟರ್ಡ್ಯಾಮ್ ನಗರವನ್ನು ‘ಉತ್ತರದ ವೆನಿಸ್’ ಎಂದು ಕರೆಯಲಾಗುತ್ತದೆ. ಕಾಲುವೆಗಳ ನಗರ ವೆನಿಸ್ ಇಟಲಿಯಲ್ಲಿರುವುದಾದರೆ, ಆ್ಯಮ್ಸ್ಟರ್ಡ್ಯಾಮ್ ನೆದರ್ಲೆಂಡ್ಸ್ ಅಥವಾ ಹಾಲೆಂಡ್ನ ಉತ್ತರ ಭಾಗದ ಡಚ್ ಪ್ರಾಂತ್ಯದಲ್ಲಿದೆ. ಕಲೆ ಹಾಗೂ ಸಾಂಸ್ಕೃತಿಕ ಮಹತ್ವದ ಕಾರಣದಿಂದಾಗಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವಾಗಿಯೂ ಈ ಪ್ರದೇಶ ಗುರುತಿಸಿಕೊಂಡಿದೆ.

ನೆದರ್ಲೆಂಡ್ಸ್ನ ವಾಣಿಜ್ಯ ರಾಜಧಾನಿ ಹಾಗೂ ಯುರೋಪ್ನ ಪ್ರಮುಖ ಹಣಕಾಸು ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ಆ್ಯಮ್ಸ್ಟರ್ಡ್ಯಾಮ್ ಅನ್ನು ವಿಶ್ವದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅನೇಕ ದೊಡ್ಡ ಡಚ್ ಸಂಸ್ಥೆಗಳು ಈ ನಗರದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ. ಇದಲ್ಲದೆ ಪ್ರಪಂಚದ ಅನೇಕ ದೊಡ್ಡ ಕಂಪನಿಗಳು ಇಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸಿವೆ. ವಿಶ್ವದ ಬಹುಮುಖ್ಯ ಕಂಪನಿಗಳಾದ ಉಬರ್, ನೆಟ್ಫ್ಲಿಕ್ಸ್ ಮತ್ತು ಟೆಸ್ಲಾ ಮುಂತಾದವು ತಮ್ಮ ಯುರೋಪಿಯನ್ ಪ್ರಧಾನ ಕಚೇರಿಯನ್ನು ಈ ನಗರದಲ್ಲಿ ಸ್ಥಾಪಿಸಿವೆ. 1602ರಲ್ಲಿ ಸ್ಥಾಪನೆಯಾದ ಆ್ಯಮ್ಸ್ಟರ್ಡ್ಯಾಮ್ ಸ್ಟಾಕ್ ಎಕ್ಸ್ಚೇಂಜ್ ವಿಶ್ವದ ಅತ್ಯಂತ ಹಳೆಯ ಸೆಕ್ಯುರಿಟೀಸ್ ಮಾರುಕಟ್ಟೆ ಎಂಬ ಖ್ಯಾತಿಯನ್ನು ಹೊಂದಿದೆ.

ಉತ್ತಮ ಪರಿಸರ ಮತ್ತು ಮೂಲಸೌಕರ್ಯ ಹಾಗೂ ಗುಣಮಟ್ಟದ ಜೀವನಶೈಲಿಯಲ್ಲಿ ಆ್ಯಮ್ಸ್ಟರ್ಡ್ಯಾಮ್ ಅನ್ನು ಅತ್ಯುತ್ತಮ ನಗರವೆಂದು ಪರಿಗಣಿಸಲಾಗಿದೆ. ಇಲ್ಲಿನ ಬಂದರು ಯುರೋಪ್ನಲ್ಲಿ ಐದನೇ ಅತಿ ದೊಡ್ಡ ಬಂದರು ಆಗಿದೆ. ಇಲ್ಲಿನ ವಿಮಾನ ನಿಲ್ದಾಣವಾದ ಶಿಫೋಲ್, ನೆದರ್ಲೆಂಡ್ಸ್ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಯುರೋಪ್ನಲ್ಲಿ ಮೂರನೇ ಮತ್ತು ವಿಶ್ವದಲ್ಲಿ 11 ನೇ ಸ್ಥಾನದಲ್ಲಿದೆ. ಸುಮಾರು 180 ರಾಷ್ಟ್ರೀಯತೆಗಳನ್ನು ಪ್ರತಿನಿಧಿಸುವ ಈ ಡಚ್ ರಾಜಧಾನಿಯು ಪ್ರಪಂಚದ ಬಹುಸಂಸ್ಕೃತಿಯ ನಗರಗಳಲ್ಲಿ ಒಂದಾಗಿದೆ. ಆದರೆ ಅದೇ ಒಂದು ದೊಡ್ದ ಸಮಸ್ಯೆಯಾಗಿ ಪರಿಣಮಿಸಿ,
ಆ್ಯಮ್ಸ್ಟರ್ಡ್ಯಾಮ್ನಲ್ಲಿ ವಲಸೆ ಸಮಸ್ಯೆ ಮತ್ತು ಜನಾಂಗೀಯ ತಿಕ್ಕಾಟಗಳು ಬಿಡಿಸಲಾಗದ ಕಗ್ಗಂಟಾಗಿದೆ.

ಆ್ಯಮ್ಸ್ಟರ್ಡ್ಯಾಮ್ ನಗರವು ನೆದರ್ಲೆಂಡ್ಸ್ನ ಸಾಂಸ್ಕೃತಿಕ ರಾಜಧಾನಿಯೂ ಆಗಿದೆ. 17ನೇ ಶತಮಾನದ ಸುಪ್ರಸಿದ್ಧ ವರ್ಣ ಚಿತ್ರ ಕಲಾಕಾರರಾದ ರೆಂಬ್ರಾಂಟ್ ಮತ್ತು ವಿನ್ಸೆಂಟ್ ವ್ಯಾನ್ಗಾಗ್, ತತ್ವಶಾಸ್ತ್ರಜ್ಞರಾದ ಬರೂಚ್ ಸ್ಪಿನೋಜಾ, ಜಾನ್ ಲಾಕ್, ರೆನೆ ಡೆಸ್ಕರ್ಟೆಸ್ ಮೊದಲಾದವರು ನೆಲೆ ಕಂಡಿದ್ದು ಆ್ಯಮ್ಸ್ಟರ್ಡ್ಯಾಮ್ನಲ್ಲಿಯೇ. ವಿಶ್ವ ಪ್ರಸಿದ್ಧ ರಿಜ್ಕ್ಸ್ ಮ್ಯೂಸಿಯಂ, ವ್ಯಾನ್ ಗಾಗ್ ಮ್ಯೂಸಿಯಂ, ಆನ್ನೆ ಫ್ರಾಂಕ್ ಹೌಸ್ನಂತಹ ಕಲೆ ಮತ್ತು ಸಂಸ್ಕೃತಿಯ ಮಹತ್ವದ ಸ್ಥಳಗಳಿಗೆ ಭೇಟಿ ನೀಡದೆ ಆ್ಯಮ್ಸ್ಟರ್ಡ್ಯಾಮ್ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಹಳೆಯ ಕೋಟೆಗಳು, ಸುಂದರವಾದ ಜಲ ಸಾರಿಗೆಯ ಕಾಲುವೆಗಳು, ಸುಂದರ ಬೀದಿಗಳು, ಜಗತ್ಪ್ರಸಿದ್ಧ ವಸ್ತುಸಂಗ್ರಹಾಲಯಗಳು ಈ ನಗರದ ಆಕರ್ಷಣೆಗಳಲ್ಲಿ ಮುಖ್ಯವಾದವು.

12ನೇ ಶತಮಾನದಲ್ಲಿ ಆ್ಯಮ್ಸ್ಟೆಲ್ ನದಿಯ ತಟದಲ್ಲಿದ್ದ ಒಂದು ಸಣ್ಣ ಮೀನುಗಾರಿಕಾ ಗ್ರಾಮವು 17ನೇ ಶತಮಾನದ ಡಚ್ ಸುವರ್ಣ ಯುಗದಲ್ಲಿ ಆ್ಯಮ್ಸ್ಟರ್ಡ್ಯಾಮ್ ಎಂಬ ದೊಡ್ಡ ನಗರವಾಗಿ ಬೆಳೆದು, ವಿಶ್ವದ ಪ್ರಮುಖ ಬಂದರುಗಳಲ್ಲಿ ಒಂದಾಯಿತು. 17ನೇ ಶತಮಾನದಲ್ಲಿ ಆ್ಯಮ್ಸ್ಟೆಲ್ ನದಿಗೆ ಕಟ್ಟಿದ ಅಣೆಕಟ್ಟೆಯಿಂದಾಗಿ ನಗರವು ಪ್ರವಾಹಪೀಡಿತವಾಗುವುದು ತಪ್ಪಿತಲ್ಲದೆ, ಕಾಲುವೆಗಳನ್ನು ನಿರ್ಮಿಸಿ ನೀರು ಹರಿಸುವುದರ ಮೂಲಕ ನಗರದ ಆಕರ್ಷಣೆಯನ್ನೂ ಹೆಚ್ಚಿಸಿ ಪ್ರವಾಸಿ ತಾಣವನ್ನಾಗಿ ಮಾಡಿದ ನಗರ ನಿರ್ಮಾತೃಗಳ ಮುಂದಾಲೋಚನೆಯನ್ನು ಮೆಚ್ಚಲೇಬೇಕು. ಆ್ಯಮ್ಸ್ಟರ್ಡ್ಯಾಮ್ನ ಪ್ರಮುಖ ಆಕರ್ಷಣೆಗಳಲ್ಲಿ ಈ ಐತಿಹಾಸಿಕ ಕಾಲುವೆಗಳು ಸೇರಿವೆ. ಬಗೆಬಗೆಯ ಹೆಸರುಗಳನ್ನು ಹೊಂದಿರುವ ಕಾಲುವೆಗಳು ನಗರದ ತುಂಬಾ ಹರಡಿಕೊಂಡಿವೆ. ಈ ಕಾಲುವೆಗಳಲ್ಲಿ ನೌಕಾ ವಿಹಾರ ಮಾಡುವುದು ಪ್ರವಾಸಿಗರಿಗೆ ಸಂತಸದಾಯಕ ಅನುಭವವನ್ನು ನೀಡುತ್ತದೆ. ವಿವಿಧ ಬಗೆಯ ದೋಣಿಗಳು, ಕ್ರೂಸ್ಗಳು ಪ್ರವಾಸಿಗರ ಬಜೆಟ್ಟಿಗೆ ತಕ್ಕಂತೆ ಸೇವೆ ಒದಗಿಸುತ್ತವೆ.

ಆ್ಯಮ್ಸ್ಟರ್ಡ್ಯಾಮ್ ಯುರೋಪಿನ ಅತ್ಯಂತ ಸುಸ್ಥಿರ ನಗರಗಳಲ್ಲಿ ಒಂದಾಗಿದೆ. ಅದರ ಸುಂದರವಾದ, ತಟದಲ್ಲಿ ಮರಗಳಿಂದ ಕೂಡಿದ ಕಾಲುವೆಗಳು, ಪ್ರಸಿದ್ಧ ಉದ್ಯಾನವನಗಳು ಪ್ರವಾಸಿಗರಿಗೆ ಅಹ್ಲಾದಕರ ಅನುಭವವನ್ನು ನೀಡುವಲ್ಲಿ ಸಹಕರಿಸುತ್ತವೆ. ಸೈಕ್ಲಿಂಗ್ ಆ್ಯಮ್ಸ್ಟರ್ಡ್ಯಾಮ್ ನಗರದ ಒಂದು ಬಹು ಮುಖ್ಯ ಸಾರಿಗೆ ವ್ಯವಸ್ಥೆಯಾಗಿದ್ದು, ಒಟ್ಟಾರೆ ನಾಲ್ಕು ನೂರು ಕಿಲೋಮೀಟರ್ ಉದ್ದವಿರುವ ಹಲವಾರು ಬೈಕಿಂಗ್ ಪಥಗಳು ಮತ್ತು ಲೇನ್ಗಳು ನಗರದಾದ್ಯಂತ ಹರಡಿಕೊಂಡಿವೆ. ಎಲ್ಲಿ ನೋಡಿದರಲ್ಲಿ ಸೈಕಲ್ಗಳು ಅಸಂಖ್ಯ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಸೈಕಲ್ಗಳ ಪಾರ್ಕಿಂಗ್ಗಾಗಿಯೇ ಮೀಸಲಾದ ಸ್ಥಳಗಳು ಎಲ್ಲೆಡೆ ಕಂಡು ಬರುತ್ತವೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಸೈಕಲ್ ಬಳಕೆದಾರರನ್ನು ಹೊಂದಿರುವ ನಗರವಾಗಿ ಆ್ಯಮ್ಸ್ಟರ್ಡ್ಯಾಮ್
ಪ್ರಸಿದ್ಧವಾಗಿದೆ. ಪರಿಸರ ಪ್ರಜ್ಞೆಯ ಮನೋಭಾವವು ಇಲ್ಲಿನ ಜನರ ಜೀವನ ವಿಧಾನದಲ್ಲಿ ಆಳವಾಗಿ ಬೇರೂರಿದೆ. ಸ್ಥಳೀಯರಿಂದ ಹಾಗೂ ಪ್ರವಾಸಿಗರಿಂದ ಸದಾ ತುಂಬಿರುವ ನಗರ ಉಲ್ಲಾಸಮಯ ವಾತಾವರಣದಿಂದ ಕೂಡಿರುತ್ತದೆ.

ನೆದರ್ಲೆಂಡ್ಸ್ ದೇಶವು ಅತ್ಯುತ್ತಮ ಸಾರಿಗೆ ಸಂಪರ್ಕ ಜಾಲವನ್ನು ಹೊಂದಿದೆ. ರೈಲಿನ ಮೂಲಕ, ಟ್ಯಾಕ್ಸಿಗಳ ಮೂಲಕ, ಬಾಡಿಗೆ ಬೈಕುಗಳು ಅಥವಾ ಬಸ್ನಲ್ಲಿ ಪ್ರಯಾಣವನ್ನು ಸಂಯೋಜಿಸಿ ಇಡೀ ದೇಶವನ್ನು ಸುತ್ತಲು ಸಾಧ್ಯ. ಆ್ಯಮ್ಸ್ಟರ್ಡ್ಯಾಮ್ಗೆ ಭೇಟಿ ನೀಡಿದ ಅನುಭವ ಬಹುಕಾಲ ನಮ್ಮ ಮನದಲ್ಲಿ ಸುಂದರ ನೆನಪುಗಳಾಗಿ ಉಳಿಯುತ್ತದೆ.

ಆ್ಯಮ್ಸ್ಟರ್ಡ್ಯಾಮ್ ತಲುಪಲು ಹತ್ತಿರದ ವಿಮಾನ ನಿಲ್ದಾಣ ಶಿಫೋಲ್ - ನಗರ ಕೇಂದ್ರ ಭಾಗದಿಂದ ಹದಿನಾರು ಕಿಲೋಮೀಟರ್ ದೂರವಿದೆ. ರೋಟರ್ದಾಮ್ (ಸುಮಾರು 60 ಕಿ.ಮೀ)ಹಾಗೂ ಐಂಡೋವೆನ್ (ಸುಮಾರು 110 ಕಿ.ಮೀ) ವಿಮಾನ ನಿಲ್ದಾಣಗಳಿಂದಲೂ ರಸ್ತೆ ಅಥವಾ ರೈಲು ಮಾರ್ಗವಾಗಿ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.