ಶನಿವಾರ, ಭಾನುವಾರದ ರಜಾ ದಿನಗಳ ಜತೆ ಸೋಮವಾರ ಗಣರಾಜ್ಯೋತ್ಸವ ಇರುವುದರಿಂದ ಮೂರು ದಿನ ರಜಾ ಸಿಗುತ್ತಿದೆ. ಹೀಗಾಗಿ ಅನೇಕರು ಪ್ರವಾಸದ ಯೋಜನೆಯನ್ನು ಮಾಡಿರುತ್ತಾರೆ

ಈ ವಾರ ಮೂರು ದಿನಗಳು ರಜಾ ಸಿಗುತ್ತಿರುವ ಕಾರಣ ಅನೇಕರು ತುಸು ದೀರ್ಘ ಪ್ರವಾಸವನ್ನೇ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನಿಂದ ಎಲ್ಲೆಲ್ಲಿಗೆ ಹೋಗಬಹುದು ಎಂದು ನೋಡುವುದಾದರೆ,

ಕಾಶ್ಮೀರ, ಮನಾಲಿ

ಉತ್ತರ ಭಾರತದ ಕಾಶ್ಮೀರ, ಮನಾಲಿಯಲ್ಲೀಗ ಹಿಮ ಬೀಳುತ್ತಿದೆ. ರಸ್ತೆ, ಮನೆಗಳೆಲ್ಲ ಹಿಮದಿಂದ ಆವೃತವಾಗಿವೆ. ಹಿಮದಲ್ಲಿ ಮಿಂದೇಳಬೇಕು, ಮೋಜು ಮಸ್ತಿ ಮಾಡಬೇಕು ಎನ್ನುವವರಿಗೆ ಈ ಸಮಯ ಸೂಕ್ತವಾಗಿದೆ. ವಿಮಾನದ ಮೂಲಕ ಶ್ರೀನಗರ ತಲುಪಬಹುದು. ಆದರೆ ಭಾರಿ ಹಿಮಪಾತವಾಗುತ್ತಿರುವ ಕಾರಣ ವಿಮಾನ ಹಾರಾಟದ ಸಮಯದ ಬಗ್ಗೆ ಗಮನವಿರಲಿ.

ರಾಜಸ್ಥಾನ

ಭರ್ತಿ ಮೂರು ದಿನಗಳ ಕಾಲ ರಜೆ ಇರುವುದರಿಂದ ರಾಜಸ್ಥಾನಕ್ಕೆ ಭೇಟಿ ನೀಡಬಹುದು. ಜೈಪುರ, ಉದಯಪುರಕ್ಕೂ ಭೇಟಿ ನೀಡಬಹುದು. ರಾಜಸ್ಥಾನಿ ಸಂಸ್ಕೃತಿ, ರಾಜರ ಕಾಲದ ಮಹಲ್ಗಳನ್ನು ಕಣ್ತುಂಬಿಕೊಂಡು, ವಿಶೇಷ ತಿನಿಸುಗಳನ್ನು ಸವಿಯಬಹುದು.

ಪುದುಚೇರಿ

ಮೂರು ದಿನಗಳಲ್ಲಿ ಆರಾಮದಲ್ಲಿ ಭೇಟಿ ನೀಡಿ ವಾಪಸ್ಸಾಗಬಹುದಾದ ತಾಣ ಎಂದರೆ ಪುದುಚೇರಿ. ಬಂಗಾಳಕೊಲ್ಲಿಯ ಅಂಚಿನಲ್ಲಿರುವ ಈ ನಗರ ಪ್ರೆಂಚರ ಆಳ್ವಿಕೆಯ ಕುರುಹುಗಳನ್ನು ಉಳಿಸಿಕೊಂಡಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದಾಗ ಬೇರೆಯ ದೇಶಕ್ಕೆ ಹೋದಂತ ಅನುಭವವಾಗುತ್ತದೆ.

ಮುನ್ನಾರ್, ಕೊಡೈಕೆನಾಲ್

ಚುಮು ಚುಮು ಚಳಿಯ ನಡುವೆ ಹಸಿರ ಪರಿಸರದಲ್ಲಿ ಕಾಲಕಳೆಯಲು ತಮಿಳುನಾಡಿನ ಮುನ್ನಾರ್, ಕೊಡೈಕೆನಾಲ್ ಉತ್ತಮ ಸ್ಥಳಗಳಾಗಿವೆ. ಟೀ ತೋಟಗಳು ನಡುವೆ ಓಡಾಡಿ, ಎತ್ತರದ ಗುಡ್ಡಗಳ ಮೇಲೆ ನಿಂತು ಸೂರ್ಯೋದಯವನ್ನು ವೀಕ್ಷಿಸಬಹುದು.

ದೇವಸ್ಥಾನಗಳಿಗೆ ಭೇಟಿ

ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎನ್ನುವಂತಿದ್ದರೆ ಇರುವ ರಜಾ ದಿನಗಳಲ್ಲಿ ಧರ್ಮಸ್ಥಳ, ಮುರ್ಡೇಶ್ವರ, ಗೋಕರ್ಣ, ಅಯೋಧ್ಯೆ, ತಿರುಪತಿ, ಕಾಶಿ, ವಾರಾಣಸಿ, ಪುರಿ ಇಂತಹ ಸ್ಥಳಗಳಿಗೆ ಭೇಟಿ ನೀಡಬಹುದು.

ಮೇಕ್ಟ್ರಿಪ್ ವರದಿ ಹೇಳಿದ್ದಿಷ್ಟು

ಗಣರಾಜ್ಯೋತ್ಸವದ ಪ್ರಯಕ್ತ ಇರುವ ರಜಾದಿನಗಳಲ್ಲಿ ಅತಿ ಹೆಚ್ಚು ಜನರು ಗೋವಾ, ಥೈಲ್ಯಾಂಡ್, ಮಲೇಷ್ಯಾ, ಸಿಂಗಪುರ, ವಿಯೆಟ್ನಾಂಗೆ ತೆರಳಲು ಬುಕಿಂಗ್ ಮಾಡಿದ್ದಾರೆ ಎಂದು ಮೇಕ್ಮೈ ಟ್ರಿಪ್ ವರದಿ ಬಹಿರಂಗ ಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೇಕ್ ಮೈ ಟ್ರಿಪ್ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, ದೀರ್ಘ ರಜಾ ದಿನಗಳ ಸಂದರ್ಭದಲ್ಲಿ ವಿಶ್ರಾಂತಿ ಹಾಗೂ ಮನರಂಜನೆಗಾಗಿ ಜನ ತಮ್ಮಿಷ್ಟದ ಜಾಗಕ್ಕೆ ಹೋಗಲು ಬಯಸುತ್ತಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.