ಶನಿವಾರ, ಫೆಬ್ರವರಿ 22, 2020
19 °C

ಮತಗಟ್ಟೆ ಸಮೀಕ್ಷೆಗಳು ಬಹಿರಂಗ: ಎಲ್ಲಿ ಯಾರಿಗೆ ಮುನ್ನಡೆ?

Published:
Updated:
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಾದ ಗೋಕಾಕ, ಕಾಗವಾಡ, ಅಥಣಿ, ಯಲ್ಲಾಪುರ, ವಿಜಯನಗರ, ರಾಣೆಬೆನ್ನೂರು, ಹಿರೆಕೇರೂರು, ಹುಣಸೂರು, ಕೆ.ಆರ್‌.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಮಹಾಲಕ್ಷ್ಮಿ ಲೇಜೌಟ್‌, ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೂ ಮತದಾನ ನಡೆಯಲಿದೆ.
 • 07:22 pm

  ಬಿಜೆಪಿ ಸರ್ಕಾರ ಸುರಕ್ಷಿತ ಎಂದ ಸಮೀಕ್ಷೆಗಳು

 • 06:38 pm

  ಸಿವೋಟರ್ ಸಮೀಕ್ಷೆ: ಬಿಜೆಪಿಗೆ ಮುನ್ನಡೆ

  ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 9ರಿಂದ 12, ಕಾಂಗ್ರೆಸ್‌ಗೆ 3ರಿಂದ 6 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ. ಈ ಮಾಹಿತಿಯನ್ನು ಟಿವಿ9 ಸುದ್ದಿ ವಾಹಿನಿ ಪ್ರಸಾರ ಮಾಡಿದೆ.

 • 07:01 pm

  ಪಬ್ಲಿಕ್ ಟಿವಿ ಸಮೀಕ್ಷೆ

  ಪಬ್ಲಿಕ್ ಟಿವಿ ಸುದ್ದಿ ವಾಹಿನಿ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ 8–10, ಕಾಂಗ್ರೆಸ್‌ಗೆ 3–5, ಜೆಡಿಎಸ್‌ಗೆ 1–2, ಇತರರಿಗೆ 0–1 ಸ್ಥಾನಗಳಲ್ಲಿ ಮುನ್ನಡೆ ಸಾಧ್ಯ.

 • 07:05 pm

  ಜೆಡಿಎಸ್ ಸಮೀಕ್ಷೆ ಏನು ಹೇಳುತ್ತೆ?

  ಜೆಡಿಎಸ್ ಸಮೀಕ್ಷೆ– ಬಿಜೆಪಿ 5–6, ಕಾಂಗ್ರೆಸ್ 5–6, ಜೆಡಿಎಸ್‌ 4–5, ಇತರರು 0–1. (ಮಾಹಿತಿ ಸುವರ್ಣ ವಾಹಿನಿ)

 • 07:03 pm

  ಬಿಜೆಪಿ ಸಮೀಕ್ಷೆ

  ಬಿಜೆಪಿ ಸಮೀಕ್ಷೆ: ಬಿಜೆಪಿ 10–12, ಕಾಂಗ್ರೆಸ್ 2–4, ಜೆಡಿಎಸ್ 1–2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ.

 • 06:58 pm

  ಯಾರಿಗೆ ಒಲಿಯಲಿದೆ ಶಿವಾಜಿನಗರ

  ಶಿವಾಜಿನಗರ: ಬಿಜೆಪಿ–ಕಾಂಗ್ರೆಸ್ ಸಮಬಲದ ಹೋರಾಟ

 • 06:56 pm

  ಕೆ.ಆರ್.ಪೇಟೆ: ಬಿಜೆಪಿ, ಜೆಡಿಎಸ್‌ ಜಿದ್ದಾಜಿದ್ದಿ

  ಕೆ.ಆರ್‌.ಪೇಟೆ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ. 

 • 06:52 pm

  ಹೊಸಕೋಟೆ ಕ್ಷೇತ್ರ

  ಹೊಸಕೋಟೆ– ಎಂಟಿಬಿ ನಾಗರಾಜ್ ಮುನ್ನಡೆ

 • 06:50 pm

  ಕಾಗವಾಡ ಕ್ಷೇತ್ರ

  ಕಾಗವಾಡ– ಕಾಂಗ್ರೆಸ್‌ನ ರಾಜು ಕಾಗೆ ಮುನ್ನಡೆ

 • 06:49 pm

  ವಿಜಯನಗರ ಉಪಚುನಾವಣೆ

  ವಿಜಯನಗರದಲ್ಲಿ ಆನಂದ್‌ಸಿಂಗ್ ಮುನ್ನಡೆ ಸಾಧ್ಯತೆ.

 • 06:47 pm

  ಗೋಕಾಕ, ಅಥಣಿಯಲ್ಲಿ ಮುನ್ನಡೆ

  ಗೋಕಾಕ– ರಮೇಶ ಜಾರಕಿಹೊಳಿ 
  ಅಥಣಿ– ಮಹೇಶ್ ಕುಮಠಳ್ಳಿ

 • 06:42 pm

  ಎಲ್ಲಿ ಯಾರು ಮುನ್ನಡೆ

  ಮಹಾಲಕ್ಷ್ಮೀ ಲೇಔಟ್‌– ಗೋಪಾಲಯ್ಯ,
  ಕೆ.ಆರ್.ಪುರಂ– ಭೈರತಿ ಬಸವರಾಜ್.

 • 06:39 pm

  ಸಿವೋಟರ್ ಸಮೀಕ್ಷೆ: ಎಲ್ಲಿ ಯಾರು ಮುನ್ನಡೆ?

  ಹಿರೇಕೆರೂರು– ಬಿ.ಸಿ.ಪಾಟೀಲ್, ಯಲ್ಲಾಪುರ– ಶಿವರಾಮ ಹೆಬ್ಬಾರ್, ಯಶವಂತಪುರ– ಸೋಮಶೇಖರ್.
   

 • 06:20 pm

  ರಾಣೆಬೆನ್ನೂರು ಶೇ 67, ಹಿರೇಕೆರೂರು ಶೇ 72

  ಉಪಚುನಾವಣೆ 2019. ಸಂಜೆ 5 ಗಂಟೆಗೆ ಶೇಕಡಾವಾರು ಮತದಾನ ಪ್ರಮಾಣ. 
  ರಾಣೆಬೆನ್ನೂರು  ಶೇ 67.92, ಹಿರೇಕೆರೂರು ಶೇ 72.42.

 • 05:42 pm

  ಹೊಸಕೋಟೆ: 5 ಗಂಟೆ ವೇಳೆಗೆ ಶೇ 76.19

  ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ. ಸಂಜೆ 5.00ರ ವೇಳೆಗೆ ಶೇ 76.19 ರಷ್ಟು ಮತದಾನ.

 • 05:34 pm

  ಕೆ.ಆರ್.ಪುರಂ: ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಜಟಾಪಟಿ

  ಬೆಂಗಳೂರಿನ ಕೆ.ಆರ್‌.ಪುರಂ ಕ್ಷೇತ್ರದ ದೇವಸಂದ್ರ ವಾರ್ಡ್‌ ಬೂತ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

  ಕಾಂಗ್ರೇಸ್‌ ಎಜೆಂಟ್‌ರನ್ನು ಬೂತ್ ಒಳಗೆ ಬಿಡದಂತೆ ಕಾರ್ಪೊರೇಟರ್ ತಾಕೀತು ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ವಾರ್ಡ್ ಬಳಿ ಕೆಲ ಕಾಲ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು.

  ಪೊಲೀಸರು ಗುಂಪು ಚದುರಿಸಿ ಅಗತ್ಯ ಬಂದೋಬಸ್ತ್ ಒದಗಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.

 • 05:32 pm

  ಕೆ.ಆರ್.ಪೇಟೆ: ಸಂಜೆ 5 ಗಂಟೆ ವೇಳೆಗೆ ಶೇ 75.87

  ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ) ಉಪಚುನಾವಣೆ. ಸಂಜೆ 5 ಗಂಟೆ ವೇಳೆಗೆ ಶೇ 75.87ರಷ್ಟು ಮತದಾನ.

 • 05:29 pm

  ಹುಣಸೂರು: 5 ಗಂಟೆ ವೇಳೆಗೆ ಶೇ 74.47

  ಹುಣಸೂರು ವಿಧಾನಸಭೆ ಉಪಚುನಾವಣೆ 2019. ಸಂಜೆ 5.00 ಗಂಟೆವರೆಗೆ ಶೇ 74.47 ಮತದಾನವಾಗಿದೆ.

 • 05:27 pm

  ಚಿಕ್ಕಬಳ್ಳಾಪುರ: 5ರ ವೇಳೆಗೆ ಶೇ 79.8

  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ -2019
  ಮಧ್ಯಾಹ್ನ 5 ಗಂಟೆಯವರೆಗೆ ಶೇ 79.8 ರಷ್ಟು ಮತದಾನವಾಗಿದೆ.

 • 05:24 pm

  ಅಥಣಿ, ಕಾಗವಾಡ, ಗೋಕಾಕ: 5ರ ಹೊತ್ತಿನ ಮತದಾನ ಪ್ರಮಾಣ

  ಬೆಳಗಾವಿ ಜಿಲ್ಲೆಯ ವಿವಿಧೆಡೆ ಸಂಜೆ 5ರ ವೇಳೆಗೆ ಉಪಚುನಾವಣೆ ಮತದಾನ ಸರಾಸರಿ ಪ್ರಮಾಣ. ಅಥಣಿ ಶೇ 70.73, ಕಾಗವಾಡ ಶೇ 69.76, ಗೋಕಾಕ ಶೇ 66.64

 • 04:32 pm

  ಕೆ.ಆರ್.ಪೇಟೆ ವರನಿಂದ ಮತದಾನ

  ಕೆ.ಆರ್.ಪೇಟೆ ತಾಲ್ಲೂಕು ಚೌಡೇನಹಳ್ಳಿಯಲ್ಲಿ ವರನೊಬ್ಬ ಮತಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.

 • 04:30 pm

  ಮತ ಚಲಾಯಿಸಿದ ಮೊಯಿಲಿ ದಂಪತಿ

  ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿರುವ ಮತಗಟ್ಟೆಯಲ್ಲಿ ವೀರಪ್ಪ ಮೊಯಿಲಿ ಅವರು ಪತ್ನಿ ಮಾಲತಿ ದಂಪತಿ ಮತ ಚಲಾಯಿಸಿದರು.

 • 04:19 pm

  ಹೆರಿಗೆ ನೋವಿನ ನಡುವೆಯೂ ಮತದಾನ

  ಚಿಕ್ಕಬಳ್ಳಾಪುರ: ಗರ್ಭಿಣಿಯೊಬ್ಬರು ಹೆರಿಗೆ ನೋವಿನ ನಡುವೆಯೂ ಮತಗಟ್ಟೆಗೆ ಬಂದು ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಮತದಾರರಿಗೆ ಮಾದರಿಯಾದ ಘಟನೆ ತಾಲ್ಲೂಕಿನ ದ್ವಾರಗಾನಹಳ್ಳಿಯಲ್ಲಿ ನಡೆದಿದೆ. 
  ದ್ವಾರಗಾನಹಳ್ಳಿ ನಿವಾಸಿ ಆರ್.ವಿ.ಝಾನ್ಸಿ ಅವರಿಗೆ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನೋವಿನ ನಡುವೆಯೂ ಮತಗಟ್ಟೆ ಸಂಖ್ಯೆ 95ಕ್ಕೆ ತೆರಳಿ ಮತ ಚಲಾಯಿಸಿದ ಝಾನ್ಸಿ ಅವರು ಬಳಿಕ ಆಸ್ಪತ್ರೆಗೆ ಹೋಗಿ ದಾಖಲಾದರು.

 • 04:18 pm

  ರಾಜ್ಯದ ವಿವಿಧೆಡೆ ಮತದಾನ ವಿವರ

 • 04:16 pm

  ಏಜೆಂಟ್‌ನನ್ನು ಹೊರಹಾಕಿದ ಎಸ್‌ಐ

  ಚಿಕ್ಕಬಳ್ಳಾಪುರ: ತಾಲ್ಲೂಕಿನ ರೆಡ್ಡಿಗೊಲ್ಲರಹಳ್ಳಿಯ ಮತಗಟ್ಟೆ ಸಂಖ್ಯೆ 43ರಲ್ಲಿ ಕಾಂಗ್ರೆಸ್ ಏಜೆಂಟ್ ಆಗಿದ್ದ ಬಿ.ಎ.ಚೇತನ್ ಕುಮಾರ್ ಅವರನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ ಎಂಬ ಕಾರಣಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ಚೇತನ್ ಗೌಡ ಅವರು ಮತಗಟ್ಟೆಯಿಂದ ಹೊರಗೆ ಕಳುಹಿಸಿದರು.

  ಇದರಿಂದಾಗಿ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಮತಗಟ್ಟೆಗೆ ಬಂದ ಎಸ್ಪಿ ಅಭಿನವ್ ಖರೆ ಅವರು ಗೊಂದಲ ತಿಳಿಗೊಳಿಸಿ ಚೇತನ್‌ ಕುಮಾರ್ ಅವರಿಗೆ ಮತಗಟ್ಟೆಯಲ್ಲಿ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರು.

 • 03:36 pm

  ಹುಣಸೂರು: 3ರವರೆಗೆ ಶೇ 57.44

  ಹುಣಸೂರು ವಿಧಾನಸಭೆ ಉಪಚುನಾವಣೆ. ಮಧ್ಯಾಹ್ನ 3.00 ಗಂಟೆವರೆಗೆ ಶೇ 57.44 ಮತದಾನ ನಡೆದಿದೆ.

 • 03:30 pm

  ಅಥಣಿ, ಕಾಗವಾಡ, ಗೋಕಾಕ: 3ರ ಹೊತ್ತಿನ ಮತದಾನ ಪ್ರಮಾಣ

  ಬೆಳಗಾವಿ ಜಿಲ್ಲೆಯಲ್ಲಿ ಉಪ ಚುನಾವಣೆ. ಮಧ್ಯಾಹ್ನ 3ರವೆಗಿನ ಮತದಾನ ಪ್ರಮಾಣ.

  ಅಥಣಿ- ಶೇ 56.05
  ಕಾಗವಾಡ- ಶೇ 51.41
  ಗೋಕಾಕ- ಶೇ 53.30

 • 03:27 pm

  ಕೆ.ಆರ್.ಪೇಟೆ: 3ರ ವೇಳೆಗೆ ಶೇ 59.86 ಮತದಾನ

  ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ  59.86 ಮತದಾನ ನಡೆದಿದೆ

 • 03:25 pm

  ಚಿಕ್ಕಬಳ್ಳಾಪುರ: 3ರ ವೇಳೆಗೆ ಶೇ 60.43

  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ -2019.
  ಮಧ್ಯಾಹ್ನ 3 ಗಂಟೆಯವರೆಗೆ ಶೇ 60.43 ರಷ್ಟು ಮತದಾನವಾಗಿದೆ.

 • 03:17 pm

  ಯಲ್ಲಾಪುರ: 3 ಗಂಟೆ ವೇಳೆಗೆ ಶೇ 56.21

  ಯಲ್ಲಾಪುರ ಕ್ಷೇತ್ರದಲ್ಲಿ 3 ಗಂಟೆಯವರೆಗೆ ಶೇ 56.21 ಮತದಾನ

 • 02:49 pm

  ಕೆ.ಆರ್.ಪುರದ ಕಲ್ಕೆರೆಯಲ್ಲಿ ಶತಾಯುಷಿ ಸಲ್ಲಮ್ಮ ಮತದಾನ ಮಾಡಿದರು

 • 02:48 pm

  ಉಪಚುನಾವಣೆ ನಡೆಯುತ್ತಿರುವ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಮಂದಗತಿಯಲ್ಲೇ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ಬಳಿಕ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಮತಗಟ್ಟೆಗಳಲ್ಲಿ ಸಿಬ್ಬಂದಿ ಹೇಳಿದ್ದಾರೆ

 • 02:33 pm

  ವಿಧಾನಸಭೆ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಜನರು ಆಸಕ್ತಿಯನ್ನೇ ತೋರಿಸುತ್ತಿಲ್ಲ. ಬೆಂಗಳೂರು ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಸರಾಸರಿ ಶೇ 32.51ರಷ್ಟು ಮತದಾನವಾಗಿದೆ.

 • 02:27 pm

  ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸೂಲಿಬೆಲೆ ಮತಗಟ್ಟೆ ಸಂಖ್ಯೆ 61ರಲ್ಲಿ ಮತಯಂತ್ರ ದೋಷದಿಂದ ಮತದಾನ ಸ್ಥಗಿತ

 • 02:25 pm

  ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಮಧ್ಯಾಹ್ನ 1.00 ಗಂಟೆಯವರೆಗೆ ಶೇಕಡಾ 33.24% ರಷ್ಟು ಮತದಾನ

  ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಮಧ್ಯಾಹ್ನ 1.00 ಗಂಟೆಯವರೆಗೆ ಶೇಕಡಾ 33.24% ರಷ್ಟು ಮತದಾನವಾಗಿದೆ.

 • 02:14 pm

  15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮಧ್ಯಾಹ್ನದ ವೇಳೆಗೆ ಶೇ 40ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 • 02:10 pm

  ಶಿವಾಜಿನಗರದ ಉರ್ದು ಶಾಲೆಯ ಸಮೀಪ ಮತದಾನ ಮಾಡುವ ಸಲುವಾಗಿ ಅಂಗಡಿ ಬಾಗಿಲು ಮುಚ್ಚಿಸುವಂತೆ ಕೆಲವು ಕಾರ್ಯಕರ್ತರು ಒತ್ತಾಯಿಸಿದರು‌. ಆಗ ಅಲ್ಲಿ ಸಂಚಾರ ದಟ್ಟಣೆ ಉಂಟಾಯಿತು, ಪೊಲೀಸರ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

 • 01:15 pm

  ಯಲ್ಲಾಪುರ: ಈ ಚಿತ್ರ ಹಂಚಿಕೊಂಡಿರುವ ಮತದಾರನ ಗುರುತು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಸಿಇಒ ಎಂ. ರೋಷನ್ ತಿಳಿಸಿದ್ದಾರೆ.

 • 01:15 pm

  ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರಿಗೆ ಮತ ಹಾಕಿರುವ ಮತಯಂತ್ರದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • 01:05 pm

  ಅಥಣಿ ಕ್ಷೇತ್ರದ ಸತ್ತಿ ಗ್ರಾಮದಲ್ಲಿ ಜನರು ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದಾರೆ.

 • 01:02 pm

  ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನೀರಸ ಮತದಾನ. ಬಹುತೇಕ ಮತಗಟ್ಟೆಗಳು ಖಾಲಿ ಖಾಲಿ ಹೊಡೆಯುತ್ತಿವೆ. ಮಧ್ಯಾಹ್ನ ಒಂದು ಗಂಟೆಯಾದರೂ ಶೇ 20 ರಷ್ಟು ಮತದಾನ.

 • 01:00 pm

   ಚಿಕ್ಕಬಳ್ಳಾಪುರದಲ್ಲಿ ಮತದಾನ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ತಾಲ್ಲೂಕಿನ ಪೋಶೆಟ್ಟಿಹಳ್ಳಿಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. 

 • 12:55 pm

  ಈ ಬಾರಿ ಶಿವಾಜಿನಗರ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಐದು ಮತಗಟ್ಟೆಗಳು ಒಂದೆಡೆ ಇರುವ ಶಿವಾಜಿನಗರ ಪೊಲೀಸ್ ಠಾಣೆ ಸಮೀಪದ ಸರ್ಕಾರಿ ನಫೀಸಾ ಶಾಲೆಯ ಆವರಣಕ್ಕೆ ಬಂದು ಮತದಾರರಿಗೆ ಶುಭಾಶಯ ತಿಳಿಸಿದ ಬಳಿಕ 'ಪ್ರಜಾವಾಣಿ' ಜತೆಗೆ ಮಾತನಾಡಿದರು

 • 12:51 pm

  ಬೆಂಗಳೂರಿನ ಶಿವಾಜಿ ನಗರದಲ್ಲಿ ಶಾಂತಿಯುತ ಮತದಾನ, ಕೆ.ಆರ್‌.ಪುರದಲ್ಲಿ ಕೆಲವು ಕಡೆ ಗಲಾಟೆ

 • 12:20 pm

  ಹಿರೇಕೆರೂರು- ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಾಡಲು ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ

 • 12:11 pm

  ಕಾಗವಾಡ ಕ್ಷೇತ್ರದ ಐನಾಪುರದಲ್ಲಿ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗಿದೆ

 • 12:06 pm

  ಎಲ್ಲಾ 15 ಕ್ಷೇತ್ರಗಳಲ್ಲೂ ಬೆಳಗ್ಗೆ 11.30ರ ಸುಮಾರಿಗೆ ಶೇ 20ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

 • 12:04 pm

  ಹೊಸಪೇಟೆ: ಮತದಾನದ ಸಂದರ್ಭದಲ್ಲಿ ಸಿಹಿ‌ ಹಂಚಿದ ಪಕ್ಷೇತರ ಅಭ್ಯರ್ಥಿ ಕವಿರಾಜ್ ಅರಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

 • 11:36 am

  ಹೊಸಪೇಟೆ: ಬಿಜೆಪಿ ಅಭ್ಯರ್ಥಿಗೆ ಮತದಾರರ ಜತೆ ಮಾತನಾಡಲು ಬಿಟ್ಟಿರುವುದು ತಪ್ಪು ಎಂದು ಕಾಂಗ್ರೆಸ್ ಮುಖಂಡ ನಿಂಬಗಲ್ ರಾಮಕೃಷ್ಣ ಮತ್ತು ಆಜಾದ್‌ ತಹಶೀಲ್ದಾರ್ ಡಿ.ಜೆ.ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡರು.

 • 11:34 am

  ಉಪಚುನಾವಣೆ ನಡೆಯುತ್ತಿರುವ ಶಿವಾಜಿನಗರ ಕ್ಷೇತ್ರದಲ್ಲಿ ಮತದಾನ ನಾಲ್ಕು ಗಂಟೆ ಕಳೆದರೂ ಬಿರುಸುಗೊಂಡಿಲ್ಲ. ಮತಗಟ್ಟೆಗಳಲ್ಲಿ ಸರದಿಯ ಸಾಲು ಕಾಣುತ್ತಿಲ್ಲ.

 • 11:03 am

  90 ವರ್ಷ ವಯಸ್ಸಿನ ರಾಮು ಮಡಿವಾಳ ಅವರು ಕಾಗವಾಡ ಕ್ಷೇತ್ರದ ಶಿರಗುಪ್ಪಿಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ನೆರವಿನಲ್ಲಿ ವ್ಹೀಲ್ ಚೇರಲ್ಲಿ ಬಂದು ಮತ ಚಲಾಯಿಸಿದರು.

 • 10:59 am

  ಗೋಕಾಕ ವಿಧಾನಸಭಾ ಕ್ಷೇತ್ರದ ನ್ಯೂ ಇಂಗ್ಲಿಷ್ ಶಾಲೆ ಮತಕೇಂದ್ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮತ ಚಲಾಯಿಸಿದರು.

 • 10:57 am

  ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು.

 • 10:43 am

  15 ವಿಧಾನಸಭಾ ಕ್ಷೇತ್ರಗಳಲ್ಲೂ ಬೆಳಗ್ಗೆ 10.30ರ ಸುಮಾರಿಗೆ ಮತದಾನ ಚುರುಕುಗೊಂಡಿದೆ.

 • 10:33 am

  ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 • 10:30 am

  ಹೊಸಪೇಟೆಯ ಮುದ್ಲಾಪುರ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ

 • 10:27 am

  ಹೊಸಕೋಟೆ ತಾಲ್ಲೂಕಿನ ಮೈಲಾಪುರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ

 • 09:56 am

  ಅಥಣಿಯ ಅಬ್ದುಲ್ ಕಲಾಂ ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ.

 • 09:49 am

  ಗೋಕಾಕ ವಿಧಾಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 

 • 09:46 am

  ಕೆ.ಆರ್.ಪೇಟೆ: ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 6.20ರಷ್ಟು ಮತದಾನ.

 • 09:41 am

  ಗೋಕಾಕ: ಮತದಾನದ ಮೊದಲ ಎರಡು ಗಂಟೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಕೇವಲ ಶೇ 6.11 ರಷ್ಟು ಮತದಾನವಾಗಿದೆ. ನಿಧಾನವಾಗಿ ಮತದಾರರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಚಳಿಯ ಕಾರಣದಿಂದಾಗಿ ಜನರು ಆಗಮಿಸಲು ವಿಳಂಬವಾಗಿದೆ.

 • 09:38 am

  ಕೆ.ಆರ್‌.ಪೇಟೆಯ ಬಂಡಿಹೊಳೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮತಗಟ್ಟೆ ಮುಂದೆ 40 ನಿಮಿಷ ಕಾದು ಕುಳಿತು ಮೊದಲು ಮತ ಹಾಕಿದರು.

 • 09:35 am

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಬೂಕನಕೆರೆಯಲ್ಲಿ ಮತದಾನ ವಿಳಂಬವಾಗಿದೆ. ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ 40 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ.

 • 09:31 am

  ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತಗಟ್ಟೆಯ ಬಳಿ ಅನರ್ಹರನ್ನು ಸೋಲಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಸಂದೇಶ ನೀಡುವ ಭಿತ್ತಿಪತ್ರವನ್ನು ಕೆಲವರು ಪ್ರದರ್ಶನ ಮಾಡಿದರು.

 • 09:30 am

  ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ‌ ಶರವಣ ಅವರು ತಮ್ಮ ಪತ್ನಿ ಜತೆಗೆ ಬಂದು ಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸಹ ಮತದಾನಕ್ಜೆ ಸಿದ್ಧತೆ ನಡೆಸಿದ್ದಾರೆ.

 • 09:29 am

  ಶಿವಾಜಿನಗರ ಮತ್ತು ಕೆ.ಆರ್ ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ನಿಧಾನವಾಗಿ ಚುರುಕು ಪಡೆಯುತ್ತಿದೆ.

 • 09:25 am

  ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಪತ್ನಿ ಡಾ.ಪ್ರೀತಿ, ತಂದೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಅವರೊಂದಿಗೆ ತಮ್ಮ ಹುಟ್ಟೂರು ಪೇರೇಸಂದ್ರದಲ್ಲಿ ಮತ ಚಲಾಯಿಸಿದರು.

 • 09:24 am

  ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಂಡಗೋಡ ತಾಲ್ಲೂಕಿನಲ್ಲಿ ಮತದಾನ ಪ್ರಕ್ರಿಯೆ ಶಾಂತ ರೀತಿಯಿಂದ ಆರಂಭವಾಗಿದೆ. ಒಟ್ಟು 88ಮತಗಟ್ಟೆಗಳಲ್ಲಿ ಎಲ್ಲಿಯೂ ಮತಯಂತ್ರದ ಸಮಸ್ಯೆ ಕಂಡುಬಂದಿಲ್ಲ. ಗ್ರಾಮೀಣ ಭಾಗಗಳಲ್ಲಿ ತುಸು ಮಂದಗತಿಯಲ್ಲಿ ಮತದಾನ ನಡೆಯುತ್ತಿದೆ. ಪಟ್ಟಣದ 15 ಮತಕೇಂದ್ರಗಳಲ್ಲಿ ಜನರ ಸಾಲು ಇದೆ.

 • 09:22 am

   ಚಿಕ್ಕಬಳ್ಳಾಪುರದ ಮತಗಟ್ಟೆ ಸಂಖ್ಯೆ 147ರಲ್ಲಿ ಸಂಪೂರ್ಣ ಅಂಗವಿಕಲ ಸಿಬ್ಬಂದಿ ಚುನಾವಣೆ ಕಾರ್ಯ ನಿರ್ವಹಿಸುತ್ತಿದ್ದಾರೆ

 • 08:32 am

  ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಮತಲಾಯಿಸಿದರು. 

 • 08:30 am

  ಕಾಗವಾಡ ಕ್ಷೇತ್ರದ ಉಗಾರ ಖುರ್ದ್ ಎಸ್ ಎಚ್ ವಿ ಪಿಯು ಕಾಲೇಜು ಮತಗಟ್ಟೆ ಸಂಖ್ಯೆ 194ರಲ್ಲಿ ವ್ಹೀಲ್ ಚೇರ್ ಇಲ್ಲದಿರುವುದರಿಂದ ಅಂಗವಿಕಲ ವ್ಯಕ್ತಿಯನ್ನು ತಂದೆ ಎತ್ತಿಕೊಂಡು ಹೋಗಿ ಮತ ಹಾಕಿಸಿದರು.

 • 08:29 am

  ಚಿಕ್ಕಬಳ್ಳಾಪುರ: ಕ್ಷೇತ್ರ ವ್ಯಾಪ್ತಿಯಲ್ಲಿ 99,449 ಪುರುಷ, 1,00,747 ಮಹಿಳೆಯರು ಸೇರಿದಂತೆ ಒಟ್ಟು 2,00,218 ಮತದಾರರಿದ್ದಾರೆ. ಮತದಾನಕ್ಕಾಗಿ 254 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,253 ಮತಗಟ್ಟೆ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

 • 08:29 am

  ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮತದಾನ ಬೆಳಿಗ್ಗೆ 7ಕ್ಕೆ ಆರಂಭಗೊಂಡಿದ್ದು, ಚಳಿಯ ನಡುವೆ ಮಂದಗತಿಯ ಮತದಾನ ನಡೆಯುತ್ತಿದೆ. ಸ್ಪರ್ಧಾ ಕಣದಲ್ಲಿರುವ ಒಂಬತ್ತು ಅಭ್ಯರ್ಥಿಗಳ ‘ಭವಿಷ್ಯ’ವನ್ನು ಮತದಾರರು ನಿರ್ಧಾರ ಮಾಡಲಿದ್ದಾರೆ.

 • 08:27 am

  ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ತಮ್ಮ ಪತ್ನಿ ಪದ್ಮಾವತಿಯೊಂದಿಗೆ ಮೇಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.

 • 08:26 am

  ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಚುರುಕುಗೊಂಡಿದೆ. ಕ್ಷೇತ್ರದಲ್ಲಿ 274 ಮತಗಟ್ಟೆಗಳಿದ್ದು, ಒಟ್ಟು 2,27,974 ಮತದಾರರಿದ್ದಾರೆ. ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅನರ್ಹ ಶಾಸಕ ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಸ್ಪರ್ದಿಸಿದ್ದಾರೆ

 • 08:22 am

  ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಎಲ್ಲಾ ಮತದಾರ ಬಂಧುಗಳೇ, ದಯವಿಟ್ಟು ಇಂದು (ಡಿಸೆಂಬರ್ 5, 2019) ಮತದಾನ ಮಾಡಿ, ಪ್ರಜಾಪ್ರಭುತ್ವ ಉಳಿಸಿ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

 • 08:18 am

  ಹೊಸಕೋಟೆಯ ಮತಗಟ್ಟೆಯೊಂದರಲ್ಲಿ ಜನರು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವುದು.

 • 08:17 am

  ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಕುಮಾರ್‌ ಗುಟ್ಟೂರ್‌ ಇಲ್ಲಿನ ಸ್ಥಳೀಯ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು.

 • 08:10 am

  ಕಾಗವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಮತ ಚಲಾಯಿಸಿದರು.

 • 08:04 am

  ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.

 • 07:49 am

  ಯಲ್ಲಾಪುರ ಹಾಗೂ ಬನವಾಸಿ ಭಾಗದ ತಲಾ‌ ಒಂದು ಮತಗಟ್ಟೆಯಲ್ಲಿ ಅಣಕು ಮತದಾನದ ವೇಳೆ ಇವಿಎಂನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಮತಯಂತ್ರವನ್ನು ಬದಲಾಯಿಸಿ, ಮತದಾನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಚುನಾವಣಾಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

 • 07:45 am

  ಯಲ್ಲಾಪುರ: ಮಲೆನಾಡಿನ ಭಾಗದಲ್ಲಿ ‌ಚಳಿ ಇರುವ ಕಾರಣ ಮತದಾನ ಮಂದಗತಿಯಲ್ಲಿ ಸಾಗಿದೆ. ಕ್ಷೇತ್ರದಲ್ಲಿ 1,72,630 ಮತದಾರರಿದ್ದಾರೆ. ಕೋಟೆಮನೆಯಲ್ಲಿ ಬುಡಕಟ್ಟು ಮತಗಟ್ಟೆ, ಇಂದೂರಿನಲ್ಲಿ ಅಂಗವಿಕಲರ‌ ಮತಗಟ್ಟೆ, ಬಸವ ನಗರದಲ್ಲಿ ಸಖಿ ಮತಗಟ್ಟೆಗಳನ್ನು‌ ವಿಶೇಷವಾಗಿ ಶೃಂಗರಿಸಲಾಗಿದೆ.

 • 07:45 am

  ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭವಾಗಿದೆ. ಯಲ್ಲಾಪುರ,‌ಮುಂಡಗೋಡ ತಾಲ್ಲೂಕು, ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಒಳಗೊಂಡಿರುವ ಕ್ಷೇತ್ರದಲ್ಲಿ, ನಿಗದಿಪಡಿಸಿರುವ 231 ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ. ಕ್ಷೇತ್ರದಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

 • 07:25 am

  ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಟಾಸ್ಕರ್‌ ಟೌನ್‌ನಲ್ಲಿರುವ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮತದಾನ ಮಾಡಲು ಜನರು ಸಾಲುಗಟ್ಟಿ ನಿಂತಿರುವುದು.

 • 07:16 am

  ಬೆಳಗಾವಿ ಜಿಲ್ಲೆಯ ಅಥಣಿ, ಗೋಕಾಕ ಹಾಗೂ ಕಾಗವಾಡ ಮತ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಅಥಣಿಯಲ್ಲಿ 8, ಗೋಕಾಕದಲ್ಲಿ 11 ಹಾಗೂ ಕಾಗವಾಡದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆ ಆರಂಭವಾಗಿದೆ.