ಸೋಮವಾರ, ನವೆಂಬರ್ 18, 2019
23 °C

ಭಾರತೀಯ ಸಹೋದ್ಯೋಗಿ ಹತ್ಯೆ: ಪಾಕ್‌ ಸಂಜಾತನಿಗೆ 22 ವರ್ಷ ಜೈಲು

Published:
Updated:

ಲಂಡನ್: ಇಲ್ಲಿನ ‘ದಿ ಪೌಂಡ್‌ಲ್ಯಾಂಡ್’ ಸೂಪರ್‌ಮಾರ್ಕೆಟ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೈದರಾಬಾದ್‌ನ ನದೀಂ ಉದ್ದಿನ್ ಹಮೀದ್ ಮೊಹಮ್ಮದ್ (24) ಎಂಬಾತನನ್ನು ಹತ್ಯೆ ಮಾಡಿದ್ದಕ್ಕಾಗಿ ಆತನ ಸಹೋದ್ಯೋಗಿ ಪಾಕಿಸ್ತಾನ ಸಂಜಾತ ಅಕಿಬ್ ಪರ್ವೇಜ್‌ಗೆ (27) ಇಲ್ಲಿನ ನ್ಯಾಯಾಲಯ 22 ವರ್ಷ ಶಿಕ್ಷೆ ವಿಧಿಸಿದೆ. 

ತನ್ನ ಪತ್ನಿ ಸೈಮಾ ಮುನಿರ್ ಜತೆ ಮೊಹಮ್ಮದ್ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ಭಾವಿಸಿದ್ದ ಪರ್ವೇಜ್, ಮೇ ತಿಂಗಳಲ್ಲಿ ಮೊಹಮ್ಮದ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.

ಪ್ರತಿಕ್ರಿಯಿಸಿ (+)