ಹೂವಿನ ಧಾರಣೆ ತೀವ್ರ ಕುಸಿತ, ಮಾಂಸದ ದರ ಯಥಾಸ್ಥಿತಿ

7
ತರಕಾರಿ, ಹಣ್ಣು ಬೆಲೆ ಏರಿಳಿತ

ಹೂವಿನ ಧಾರಣೆ ತೀವ್ರ ಕುಸಿತ, ಮಾಂಸದ ದರ ಯಥಾಸ್ಥಿತಿ

Published:
Updated:
Deccan Herald

ಚಾಮರಾಜನಗರ: ಎರಡು ವಾರಗಳಿಂದ ಇಳಿಮುಖವಾಗಿ ಸಾಗುತ್ತಿದ್ದ ಹೂವಿನ ಧಾರಣೆ ಈ ವಾರ ಮತ್ತಷ್ಟು ಕುಸಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಎಲ್ಲ ಹೂವುಗಳ ಬೆಲೆ ಅರ್ಧ ಪಟ್ಟು ಇಳಿಕೆಯಾಗಿದೆ.

ಹಣ್ಣುಗಳ ಹಾಗೂ ತರಕಾರಿ ಬೆಲೆಯಲ್ಲಿ ಕೊಂಚ ಏರಿಳಿತ ಕಂಡು ಬಂದಿದ್ದು, ಮಾಂಸಗಳ ಮಾರುಕಟ್ಟೆಯಲ್ಲಿ ಮೀನು, ಮಟನ್‌, ಚಿಕನ್‌ ದರಗಳಲ್ಲಿ ಬದಲಾವಣೆಯಾಗಿಲ್ಲ 

ಹೂವು ಯಾರಿಗೂ ಬೇಡ: ಕಳೆದ ವಾರ ₹60 ಇದ್ದ ಸುಗಂಧರಾಜ ಸೋಮವಾರ ₹30ಕ್ಕೆ ಇಳಿದಿದೆ. ₹300 ರಷ್ಟಿದ್ದ ಒಂದು ಕೆ.ಜಿ ಕನಕಾಂಬರ ಹೂವಿನ ಬೆಲೆ ಈ ವಾರ ₹200 ಆಗಿದೆ. ಮಲ್ಲಿಗೆ ಬೆಲೆಯೂ ₹100 ಇತ್ತು ಈಗ ₹40 ಆಗಿದೆ. ಗುಲಾಬಿ 100ಕ್ಕೆ ₹100 ಇತ್ತು ಏಕಾಏಕಿ ₹60ಕ್ಕೆ ಇಳಿದಿದೆ. 

ಚೆಂಡು ಹೂವನ್ನು ಕೇಳುವವರಿಲ್ಲ. ಅದನ್ನು ಬೆಳೆದ ರೈತರು ಈಗ ಸಮರ್ಪಕ ಬೆಲೆ ಸಿಗದ ಕಾರಣ ಗಿಡಗಳನ್ನು ಕಿತ್ತುಹಾಕುತ್ತಿದ್ದಾರೆ. ಕೆಜಿ ಚೆಂಡು ಹೂವಿನ ಬೆಲೆ ₹3 ಕಡಿಮೆಯಾಗಿದೆ. ಈಗಿನ ದರ ₹2. ಅಲ್ಲದೆ, ಹೋದ ವಾರ ₹30ರಷ್ಟಿದ್ದ ಸೇವಂತಿಗೆ ₹10 ಕುಸಿತ ಕಂಡಿದೆ. 

‘ಮುಂದಿನ ವಾರದ ಆರಂಭದಲ್ಲಿ ಅಮಾವಾಸ್ಯೆ ಸೇರಿದಂತೆ ಹಬ್ಬಗಳು ಬರಲಿದೆ. ಈ ವೇಳೆಗೆ ಬೆಲೆ ಶೇ 50ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ಹಣ್ಣುಗಳ ಧಾರಣೆ ಕೊಂಚ ಏರಿಳಿತ: ಬೆಳಗಿನ ಸಮಯದಲ್ಲಿ ಬಿಸಿಲಿನ ತಾಪ ಇರುವುದರಿಂದ ಹಣ್ಣುಗಳಿಗೆ ಕೊಂಚ ಬೇಡಿಕೆ ಇದೆ. ಇದರಿಂದ ಧಾರಣೆಯಲ್ಲಿ ಏರಿಳಿತವಾಗುತ್ತಿದೆ. ಮೂಸಂಬಿ, ಸೇಬು, ದ್ರಾಕ್ಷಿಗೆ ಸ್ವಲ್ಪ ಬೇಡಿಕೆ ಇದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. 

ಏಲಕ್ಕಿ ಬಾಳೆ ಕುಸಿತ: ‘ಏಲಕ್ಕಿ ಬಾಳೆ ಕಳೆದ ವಾರ ₹70 ಇತ್ತು ಈ ವಾರ ₹60 ಆಗಿದೆ. ಹಬ್ಬ ಮತ್ತು ಶುಭ ಸಮಾರಂಭಗಳ ಸಂದರ್ಭದಲ್ಲಿ ಬೇಡಿಕೆ ಇತ್ತು. ಆದ್ದರಿಂದ ಮಳಿಗೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಈಗ ಎಲ್ಲ ಕಾರ್ಯಕ್ರಮಗಳು ಮುಗಿದಿವೆ. ಉಳಿದ ಏಲಕ್ಕಿ ಬಾಳೆ ಹಣ್ಣುಗಳನ್ನು ಮಾರಾಟಗಾರರು ಮಾರುಕಟ್ಟೆಗೆ ಹೆಚ್ಚಾಗಿ ತರುತ್ತಿದ್ದಾರೆ ಆದ್ದರಿಂದ, ಇದರ ಧಾರಣೆ ಕೊಂಚ ಕಡಿಮೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಎಸ್‌.ಮಧು ‘ಪ್ರಜಾವಾಣಿ’ಗೆ ವಿವರಿಸಿದರು. 

ಬದಲಾವಣೆ ಕಾಣದ ತರಕಾರಿ: ತೊಂಡೆಕಾಯಿ ಮತ್ತು ಬೀನ್ಸ್‌ ಕಳೆದ ವಾರ ₹30ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ₹ 5 ಕುಸಿತ ಕಂಡಿದೆ. ಈ ವಾರ ₹25ಕ್ಕೆ ಮಾರಾಟವಾಗುತ್ತಿದೆ. ಎಲ್ಲ ತರಕಾರಿಗಳ ಧಾರಣೆ ಹಾಪ್‌ಕಾಮ್ಸ್‌ನಲ್ಲಿ ₹ 25ರೊಳಗೆಯೇ ಇದೆ.

ಮೊಟ್ಟೆ ದರ ಏರಿಕೆ: ಕಳೆದ ವಾರ 100 ಮೊಟ್ಟೆಗಳ ಧಾರಣೆ ₹340 ಇತ್ತು. ಸೋಮವಾರ ₹358ಕ್ಕೆ ಏರಿಕೆಯಾಗಿದೆ. 

ಮಟನ್‌, ಚಿಕನ್‌ ಯಥಾಸ್ಥಿತಿ: ಮಾಂಸದ ಮಾರುಕಟ್ಟೆಯಲ್ಲಿ ಮಟನ್‌ ಮತ್ತು ಚಿಕನ್‌ ಧಾರಣೆ ಕಳೆದ ವಾರದಷ್ಟೇ ಮುಂದುವರಿದದ್ದು,  ಒಂದು ಕೆ.ಜಿ ಚಿಕನ್‌ಗೆ ₹130 ಇದ್ದು, ಮಟನ್‌ಗೆ ₹400 ಇದೆ. 

ಪಾಪ್ಲೆಟ್‌ ಮೀನಿಗೆ ಬೇಡಿಕೆ

ಮೀನುಗಳ ಅಂಗಡಿಯಲ್ಲಿ ಪಾಪ್ಲೆಟ್‌, ಕಾಟ್ಲಾ, ಜಿಲೇಬಿ ಎಂಬ ಮೂರು ಬಗೆಯ ಮೀನುಗಳು ಮಾರಾಟಕ್ಕಿವೆ. ಗಾತ್ರ ಹಾಗೂ ಒಳಪದರದ ಮಾಂಸದ ಆಧಾರದಡಿ ಬೆಲೆ ನಿರ್ಧಾರವಾಗುತ್ತದೆ.ಈಗ ಮಾರುಕಟ್ಟೆಯಲ್ಲಿ ಪಾಪ್ಲೆಟ್‌ ಮೀನಿಗೆ ಬೇಡಿಕೆ ಇದ್ದು ಕೆಜಿ ಮೀನಿಗೆ ₹200ರಿಂದ ₹260 ಬೆಲೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !