ಬುಧವಾರ, ಅಕ್ಟೋಬರ್ 23, 2019
21 °C

ಪವಿತ್ರ ಆರ್ಥಿಕತೆ ಸತ್ಯಾಗ್ರಹ -ನಟ ಕಿಶೋರ್‌ ಬೆಂಬಲ

Published:
Updated:
Prajavani

ಪವಿತ್ರ ಆರ್ಥಿಕತೆಗಾಗಿ ಗ್ರಾಮಸೇವಾ ಸಂಘ ಆರಂಭಿಸಿರುವ ಸತ್ಯಾಗ್ರಹದಲ್ಲಿ ಸಂಘದ ಕಾರ್ಯಕರ್ತರ ಜೊತೆ ಚಿತ್ರನಟ ಕಿಶೋರ್‌ ಭಾಗವಹಿಸಿದ್ದರು. ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಸಿಗ್ನಲ್‌ ಬಳಿ ಶನಿವಾರ ಸಂಜೆ ಜನರ ಸತ್ಯಾಗ್ರಹದ ದೀಕ್ಷೆ ಹಾಗೂ ಆರ್ಥಿಕ ಸಹಕಾರ ಕೋರುವ ಸಂದೇಶ ಪತ್ರ ಹಿಡಿದು ಅವರು ಸತ್ಯಾಗ್ರಹ‌ ನಡೆಸಿದರು.  

‘ಸ್ಥಳೀಯ ಸಂಪನ್ಮೂಲಗಳ ಕೇಂದ್ರಿತವಾದ ಆರ್ಥಿಕ ವ್ಯವಸ್ಥೆ ನಮ್ಮದಾಗಬೇಕಿದೆ. ಪರಿಸರ ರಕ್ಷಿಸುವ ಪ್ರಯತ್ನದೊಂದಿಗೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡುವ ಕೆಲಸ ನಮ್ಮಿಂದಾಗಬೇಕಿದೆ‘ ಎಂದು ಕಿಶೋರ್‌ ಅಭಿಪ್ರಾಯಪಟ್ಟರು.  

ಸತ್ಯಾಗ್ರಹದ ಭಾಗವಾಗಿ ಭಾನುವಾರ ಸಂಜೆ ನಡೆದ ಮುಶೈರಾದಲ್ಲಿ ಭಾಗವಹಿಸಿದ್ದ ಕವಿಗಳು ಉರ್ದು, ಕನ್ನಡ, ಬೆಂಗಾಲಿ, ಹಿಂದಿ ಕವಿತೆಗಳನ್ನು ವಾಚಿಸಿದರು.ಅಕ್ಟೋಬರ್ 2ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)