ಪ್ರತಿ ವರ್ಷ ಫೆಬ್ರುವರಿಯಿಂದ ಮಾರ್ಚ್‌ವರೆಗೂ ಲಂಡನ್, ಮಿಲಾನ್ ಮತ್ತು ಪ್ಯಾರಿಸ್‌ನಲ್ಲಿ ನಡೆಯುವ ಫ್ಯಾಷನ್ ಸಪ್ತಾಹಗಳು ಇಡೀ ಜಗತ್ತಿನ ಫ್ಯಾಷನ್ ಕ್ಷೇತ್ರಕ್ಕೆ ಮೈಲಿಗಲ್ಲು ಆಗುತ್ತವೆ.ಫೆಬ್ರುವರಿ 15ರಿಂದ 19ರವರೆಗೆ ಲಂಡನ್ ಸಪ್ತಾಹದೊಂದಿಗೆ ಈ ಮಹಾಮೇಳ ಆರಂಭವಾಗಿ, ಫೆ.19ರಿಂದ 25ರವರೆಗೆ ಮಿಲಾನ್ ಸಪ್ತಾಹ, ಫೆ.25ರಿಂದ ಮಾರ್ಚ್ 5ರವರೆಗೆ ಪ್ಯಾರಿಸ್ ಸಪ್ತಾಹದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಅಲ್ಲಿ ಪರಿಚಯಗೊಳ್ಳುವ, ಪ್ರದರ್ಶನಗೊಳ್ಳುವ ಹೊಸ ಉಡುಗೆ ತೊಡುಗೆಗಳು ಮುಂದೆ ಅನೇಕ ವರ್ಷಗಳ ‘ಟ್ರೆಂಡ್’ ಆಗಿ ಉಳಿಯುತ್ತವೆ. ಅದಕ್ಕಾಗಿಯೇ ಜಗತ್ತಿನ ಫ್ಯಾಷನ್ ವಿನ್ಯಾಸಕರು, ವಸ್ತ್ರ ವಿನ್ಯಾಸಕರು, ಸ್ಟೈಲಿಸ್ಟ್‌ಗಳು ಈ ಮೂರೂ ವಾರ್ಷಿಕ ಸಪ್ತಾಹಗಳ ಮೇಲೆ ಕಣ್ಣು ನೆಟ್ಟಿರುತ್ತಾರೆ.

ಬಣ್ಣಗಳಲ್ಲಿ ಮಿಂದೆದ್ದ ರ‍್ಯಾಂಪ್

ಈ ಬಾರಿ ಲಂಡನ್ ಮತ್ತು ಮಿಲಾನ್ ಫ್ಯಾಷನ್ ಸಪ್ತಾಹದಲ್ಲಿ ಜಗತ್ತಿನ ಗಮನ ಸೆಳೆದದ್ದು ಪುರುಷರ ಉಡುಪುಗಳ ಬಣ್ಣ. ಸಾಮಾನ್ಯವಾಗಿ ಪುರುಷರಿಗೆ ಕೆಲವೇ ಆಯ್ದ ಬಣ್ಣಗಳು ಸೀಮಿತವಾಗಿವೆ. ರೆಟ್ರೊ ಶೈಲಿಯಲ್ಲಿ ಗಾಢ ಬಣ್ಣಗಳು ಬಳಕೆಯಾದರೂ ಕೆಲವು ಬಣ್ಣಗಳನ್ನು ಪುರುಷರ ವಾರ್ಡ್‌ರೋಬ್‌ನಿಂದ ದೂರವೇ ಇಡಲಾಗಿತ್ತು. ಆದರೆ ಲಂಡನ್ ಮತ್ತು ಮಿಲಾನ್ ಫ್ಯಾಷನ್ ಸಪ್ತಾಹಗಳು ಈ ‘ಸಂಪ್ರದಾಯ’ವನ್ನು ಮುರಿದಿರುವುದು ಗಮನಾರ್ಹ.

ವಿಶೇಷವಾಗಿ ‘ಫ್ಲಾರಾಸೆಂಟ್’ ಬಣ್ಣಗಳಿಗೆ ಮತ್ತು ಹೆಣ್ಣು ಮಕ್ಕಳ ಬಣ್ಣ ಎಂದೇ ಗುರುತಿಸಿಕೊಳ್ಳುತ್ತಿದ್ದ ತಿಳಿ ಗುಲಾಬಿ, ಮೆಜೆಂಟಾ, ರಾಣಿ ಪಿಂಕ್, ನೇರಳೆಯ ವಿವಿಧ ಛಾಯೆಗಳು, ತಿಳಿಗೇಸರಿ ಬಣ್ಣಗಳ ಸೂಟ್‌ಗಳು ಈ ಎರಡೂ ಕಡೆ ರ‍್ಯಾಂಪ್‌ಗಳಲ್ಲಿ ಮಿಂಚಿದವು. ಈ ಉಡುಗೆಗಳು ಪ್ರದರ್ಶನಗೊಂಡದ್ದು ‘ಸ್ಟ್ರೀಟ್‌ವೇರ್’ ವಿಭಾಗದಲ್ಲಿ.

ಮಿಲಾನ್ ಫ್ಯಾಷನ್ ಸಪ್ತಾಹದ ಫೋಟೊಗಳನ್ನು ನೀವೂ ಕಣ್ತುಂಬಿಕೊಳ್ಳಿ. ನಿಮ್ಮ ವಾರ್ಡ್‌ರೋಬ್‌ಗೆ ಈ ಬಣ್ಣಗಳ ಪ್ಯಾಂಟ್, ಶರ್ಟ್, ಸೂಟ್ ಸೇರ್ಪಡೆ ಮಾಡುವುದಿದ್ದರೆ ಹೊಸ ಟ್ರೆಂಡ್ ಆರಂಭಿಸಿದ ಹೆಗ್ಗಳಿಕೆ ನಿಮ್ಮದಾಗುತ್ತದೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.