ಭಾನುವಾರ, ಜನವರಿ 26, 2020
24 °C

ಸೌಂದರ್ಯ ಸ್ಪರ್ಧೆ ಆಡಿಷನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ ‘ಮಿಸೆಸ್ ಇಂಡಿಯಾ ಐಯಾಮ್ ಫವರ್ ಪುಲ್ ಕರ್ನಾಟಕ– 2020’ ಸೌಂದರ್ಯ ಸ್ಪರ್ಧೆಯ ಅಂತಿಮ ಆಡಿಷನ್‌ ಈಚೆಗೆ ನಗರದಲ್ಲಿ ನಡೆಯಿತು.

ಆಡಿಷನ್‌ನಲ್ಲಿ ಒಟ್ಟು 40 ಮಂದಿ ಭಾಗವಹಿಸಿದ್ದರು. ಈ ಪೈಕಿ 20 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಯಿತು. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದ ಮಹಿಳೆಯರು ಭಾಗವಹಿಸಿದ್ದರು.

ನಟ ಜೆಕೆ,  ಮಿಸೆಸ್ ಗ್ಲೋಬೆಲ್ ಯೂನಿವರ್ಸಲ್ ಸವಿತಾ ರೆಡ್ಡಿ, ಸಂತೋಷ್ ರೆಡ್ಡಿ, ಶ್ವೇತಾ ಮಯೂರಿ, ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್  ಚೈತನ್ಯ ಮಿಸೆಸ್ ಇಂಡಿಯಾ ಟೂರಿಸಂ, ಮಿಸೆಸ್ ವರ್ಲ್ಡ್ ವೈಡ್ ಶ್ವೇತಾ ನಿರಂಜನ್, ಮಿಸೆಸ್ ಇಂಡಿಯಾ ಮಧುರ ವಿ ಆಚಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು. 

ಮಹಿಳೆಯರ ಪ್ರತಿಭೆ ಗುರುತಿಸಿ ಮಾಡೆಲಿಂಗ್, ಜಾಹೀರಾತು, ಸಿನಿಮಾ ಮತ್ತಿತರ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ನಂದಿನಿ ನಾಗರಾಜ್ ಈ ಸ್ಪರ್ಧೆ ಆಯೋಜಿಸಿದ್ದರು. 

ಪ್ರತಿಕ್ರಿಯಿಸಿ (+)