ಹೆಬ್ಬಾಳದ ವೈಟ್ ಆರ್ಕಿಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಇಂಪೀರಿಯಲ್ ಬ್ಲೂ ‘ರಾಕ್ ಆ್ಯಂಡ್ ಲಾಲ್ ಸೂಪರ್ ಹಿಟ್ ನೈಟ್ಸ್’ ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಭರಪೂರ ರೋಮಾಂಚನ ನೀಡಿತು.

ಕಿರುತೆರೆ ರಿಯಾಲಿಟಿ ಷೋದಲ್ಲಿ ಡಾ.ಗುಲಾಟಿ ಮತ್ತು ಗುಟ್ಟಿ ಪಾತ್ರಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸುನಿಲ್ ಗ್ರೋವರ್ ಮತ್ತು ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಜೋಡಿ ವಿಶಾಲ್–ಶೇಖರ್ ಶನಿವಾರ ಸಂಜೆ ಬೆಂಗಳೂರಿನ ಪ್ರೇಕ್ಷಕರಿಗೆ ಹಾಸ್ಯ ಮತ್ತು ಸಂಗೀತದ ಮೂಲಕ ಡಬಲ್ ಧಮಾಕಾ ಮನರಂಜನೆ ನೀಡಿದರು.

ವಿಶಾಲ್–ಶೇಖರ್ ಜೋಡಿಯ ಗುಲಾಬೋ ಗೀತೆ ಮತ್ತು ಬಾಲಿವುಡ್ ಹಾಡುಗಳಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ ಪ್ರೇಕ್ಷಕರು ನಂತರ ಸುನಿಲ್ ಗ್ರೋವರ್ ಅವರ ಸರಿಸಾಟಿ ಇಲ್ಲದ ಹಾಸ್ಯ ಚಟಾಕಿಗಳಿಗೆ ನಕ್ಕು ಹಗುರಾದರು.

ಹೆಬ್ಬಾಳದ ವೈಟ್ ಆರ್ಕಿಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಸಂಜೆ ಹೀರೊ ಕಂಪನಿಯ ಸಹಯೋಗದಲ್ಲಿ ನಡೆದ ಇಂಪೀರಿಯಲ್ ಬ್ಲೂ ‘ರಾಕ್ ಆ್ಯಂಡ್ ಲಾಲ್ ಸೂಪರ್ ಹಿಟ್ ನೈಟ್ಸ್’ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಭರಪೂರ ರೋಮಾಂಚನ ನೀಡಿತು.

ಇದಕ್ಕೂ ಮೊದಲು ಹೆಬ್ಬಾಳದ ಮ್ಯಾರಿಯಟ್ ಕೋರ್ಟ್‌ಯಾರ್ಡ್‌ನಲ್ಲಿ ನಡೆದ ಸುದ್ದಿಗೋಷ್ಠಿಗೆ ವಿಶಾಲ್–ಶೇಖರ್ ಜತೆಗೆ ಬಂದ ಗ್ಯಾರೇಜ್ ಮೆಕ್ಯಾನಿಕ್ ರೀತಿ ದೊಗಲೆ ‘ಡಂಗ್ರಿ’ ಧಿರಿಸನ್ನು ನೇತು ಹಾಕಿಕೊಂಡ ಕನ್ನಡಧಾರಿಯನ್ನು ಗುರುತಿಸಲು ಅಲ್ಲಿದ್ದ ಯಾರಿಗೂ ಸಾಧ್ಯವಾಗಲಿಲ್ಲ. ‘ನಾನು ಸುನಿಲ್ ಗ್ರೋವರ್’ ಎಂದು ಪರಿಚಯಿಸಿಕೊಂಡಾಗ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ. ಮುಂದೆ ಕುಳಿತಿದ್ದ ಹಿರಿಯ ಪತ್ರಕರ್ತರೊಬ್ಬರು ‘ನಿಜವಾಗಿಯೂ ನೀವು ಕಪಿಲ್ ಶರ್ಮಾ ಕಾಮಿಡಿ ಷೋದಲ್ಲಿ ನಗುವಿನ ಕಚಗುಳಿ ಇಡುವ ಸುನಿಲ್ ಗ್ರೋವರ್ ತಾನೇ?’ ಎಂದು ಸಂದೇಹಪಟ್ಟರು.

‘ಖಂಡಿತ! ನಾನೇ ಡಾ.ಗುಲಾಟಿ ಮತ್ತು ಗುಟ್ಟಿ ಪಾತ್ರಧಾರಿ ಎಂದು ಪಕ್ಕದಲ್ಲಿದ್ದ ವಿಶಾಲ್–ಶೇಖರ್ ಅವರ ತಲೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳುತ್ತೇನೆ. ನಿಮಗಿನ್ನೂ ಸಂಶಯ ಉಳಿದುಕೊಂಡಿದ್ದರೆ, ಬೇಕಾದರೆ ನನ್ನ ಹೋಟೆಲ್ ರೂಂಗೆ ಕೂಡ ಬರಬಹುದು. ಆ ಪೋಷಾಕು ಧರಿಸಿ, ಅದು ನಾನೇ ಎಂದು ಪ್ರೂವ್ ಮಾಡಬಲ್ಲೆ’ ಎಂದು ಹಾಸ್ಯಚಟಾಕಿಯೊಂದಿಗೆ ಮಾತಿಗೆ ಶುರುವಿಟ್ಟುಕೊಂಡರು.

‘ಒಂದೆರೆಡು ಡೈಲಾಗ್ ಹೇಳಬಾರದೇಕೆ’ ಎಂಬ ಬೇಡಿಕೆ ರೂಪದ ಒತ್ತಾಸೆಗೆ ಮುಗುಳ್ನನಗುತ್ತಲೇ ನಯವಾಗಿ ನಿರಾಕರಿಸಿದ ಅವರು, ಸಂಜೆ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಬನ್ನಿ. ಅದಕ್ಕೆ ದುಡ್ಡಾಗುತ್ತದೆ’ಎಂದು ಕಣ್ಣು ಮಿಟುಕಿಸಿದರು.

‘ಗುವಹಾಟಿಯಲ್ಲಿ ನವೆಂಬರ್‌ನಲ್ಲಿ ಆರಂಭವಾದ ಜನರಿಗೆ ಸಂಗೀತ ಮತ್ತು ಹಾಸ್ಯದ ಮಿಶ್ರಣವನ್ನು ಉಣಬಡಿಸುವ ಉದ್ದೇಶದಿಂದಇಂಪೀರಿಯಲ್ ಬ್ಲೂ ಆಯೋಜಿಸಿರುವ6ನೇ ‘ರಾಕ್ ಆಂಡ್ ಲಾಲ್’ ಅಂಗವಾಗಿ ಬೆಂಗಳೂರಿಗೆ ಬಂದಿದ್ದೇವೆ.ಬೆಂಗಳೂರು ನಮಗೆ ಹೊಸದಲ್ಲ. ಇಲ್ಲಿಯ ಪ್ರೇಕ್ಷಕರ ಎದುರು ಸಂಗೀತ ಕಾರ್ಯಕ್ರಮ ನೀಡುವುದು ಸಂತಸದ ವಿಷಯ’ ಎಂದು ವಿಶಾಲ್ ಡಡ್ಲಾನಿ ಮೈಕ್ ಕೈಗೆತ್ತಿಕೊಂಡರು.

ಶೇಖರ್

ಗುವಹಾಟಿ, ಜೋರ್ಹಟ್, ಅಸಾನೋಲ್ ಮತ್ತು ಜೈಪುರ ಸುತ್ತಿಕೊಂಡುಅಂಬಾಲ,ಕೋಲ್ಕತ್ತ, ಮಂಗಳೂರು,ಹೈದರಾಬಾದ್‌ಗೆ ತೆರಳಲಿದ್ದು ವಿಶಾಖಪಟ್ಟಣದಲ್ಲಿ ಕೊನೆಗೊಳ್ಳಲಿದೆ. ಸೂಪರ್ಹಿಟ್ನೈಟ್ಸ್‌ನಲ್ಲಿ ಜಸ್ಸಿ ಗಿಲ್, ಬಿ ಪ್ರಾಕ್, ಜುಬೀನ್ ಗರ್ಗ್ ಮತ್ತು ಕೆಕೆ ಮೋಹನ್ ಮುಂತಾದ ಪ್ರತಿಭಾನ್ವಿತ ಸಂಗೀತಗಾರರು ಮತ್ತು ಹಾಸ್ಯ ಕಲಾವಿದರು ಜತೆಗಿರಲಿದ್ದಾರೆ ಎಂದು ಮಾಹಿತಿ ನೀಡಿದರು. ಪಕ್ಕಕ್ಕೆ ಕುಳಿತಿದ್ದ ಶೇಖರ್ ಅದಕ್ಕೆ ಸಮ್ಮತಿ ಸೂಚಿಸುವಂತೆ ತಲೆಯಾಡಿಸಿದರು.

ಇಂಪೀರಿಯಲ್ ಬ್ಲೂ ರಾಕ್ ಆ್ಯಂಡ್ ಲಾಲ್ ಸೂಪರ್ ಹಿಟ್ ನೈಟ್ಸ್ ಹಿಂದಿನ ಋತುವಿನಲ್ಲಿ ಗಾಯಕಿ ನೇಹಾ ಕಕ್ಕರ್ ಏಳು ನಗರಗಳಲ್ಲಿ ಪ್ರದರ್ಶನ ನೀಡಿದ್ದರು.

ಬೆಂಗಳೂರು ಫಸ್ಟ್‌ಕ್ಲಾಸ್
ಬೆಂಗಳೂರಿನ ಸೊಗಸಾದ ಹವಾಗುಣ, ನಗರವನ್ನು ತಂಪಾಗಿಟ್ಟಿರುವ ಗಿಡ, ಮರ, ನಳ, ನಳಿಸುವ ಹೂವುಗಳಿಂದ ಕಂಗೊಳಿಸುವ ಉದ್ಯಾನಗಳು, ಇಲ್ಲಿಯ ಹೋಟೆಲ್‌ಗಳಲ್ಲಿ ಸಿಗುವ ಸಿಗುವ ರುಚಿಕಟ್ಟಾದ ಆಹಾರ, ದೋಸೆ, ಇಡ್ಲಿ, ವಡೆ, ಚಟ್ನಿ, ಸಾಂಬಾರ ಎಲ್ಲವೂ ಇಷ್ಟ. ಆದರೆ, ಟ್ರಾಫಿಕ್ ಮಾತ್ರ ತುಂಬಾ ಕಷ್ಟ!

ಸಂಗೀತ ನಿರ್ದೇಶಕ ವಿಶಾಲ್ ಡಡ್ಲಾನಿ ಅನುಭವವಿದು. ಮುಂಬೈಗಿಂತ ಬೆಂಗಳೂರು ಟ್ರಾಫಿಕ್ ಭಯಂಕರ. ಅದೊಂದು ಸಮಸ್ಯೆ ಬಿಟ್ಟರೆ ಬೆಂಗಳೂರು ಫಸ್ಟ್‌ಕ್ಲಾಸ್ ಎಂದರು.

ಹೌಸ್‌ಫುಲ್ –4 ಚಿತ್ರದ ‘ಬಾಲಾ, ಬಾಲಾ..ಸೈತಾನ್ ಕಾ ಸಾಲಾ’, ಸುಲ್ತಾನ್ ಸಿನಿಮಾದ ‘ಬೇಬಿ ಕೋ ಬೇಸ್ ಪಸಂದ್ ಹೈ’, ಟೈಗರ್ ಜಿಂದಾ ಹೈ ಚಿತ್ರದ ‘ಸ್ವಾಗ್ ಸೇ ಕರೆಂಗೆ ಸಬ್ ಕಾ ಸ್ವಾಗತ್’, ಸ್ಟೂಡೆಂಟ್ ಆಫ್ ದಿ ಇಯರ್ –2 ಚಿತ್ರದ ‘ಹುಕ್ ಸಾಂಗ್’ ಮುಂತಾದ ಯಶಸ್ವಿ ಹಾಡುಗಳಿಗೆ ಸಂಗೀತ ನೀಡಿದ್ದು ಇದೇವಿಶಾಲ್– ಶೇಖರ್ ಜೋಡಿ.

ಫಲಕ್ ತಕ್ ಚಲ್ ಸಾಥಿ, ಚಮ್ಮಕ್ ಚಲ್ಲು, ನಶೆ ಸೀ ಚಡ್ ಗಯೀ ಯೇ ಗುಡಿ ನಶೆ ಸಿ ಚಡ್ ಗಯೀ, ಜೈ ಜೈ ಶಿವಶಂಕರ್,ಶೀಲಾ ಕೀ ಜವಾನಿ ಹಾಡುಗಳು ಈ ಜೋಡಿಯ ಬತ್ತಳಿಕೆಯಲ್ಲಿವೆ.

ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕರಾದ ವಿಶಾಲ್ ಡಡ್ಲಾನಿ–ಶೇಖರ್ ಜೋಡಿ ಮಧ್ಯೆ ಸುನಿಲ್ ಗ್ರೋವರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.