ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀವ್‌’ ಮಕ್ಕಳ ಸಾಹಿತ್ಯ ಉತ್ಸವ

Last Updated 16 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮೂರನೇ ಆವೃತ್ತಿಯ ಮಕ್ಕಳ ‘ನೀವ್‌ ಸಾಹಿತ್ಯ ಉತ್ಸವ’ವು ನಗರದಲ್ಲಿ ಸೆ. 20, 21ರಂದು ಎರಡು ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಮಕ್ಕಳ ಓದು, ಮಕ್ಕಳ ಜೊತೆ ಸಂವಾದ, ಹಿರಿಯ ಚಿಂತಕರು, ಲೇಖಕರ ಜೊತೆ ಮಾತುಕತೆ, ಕಾರ್ಯಾಗಾರ, ಪುಸ್ತಕ ಬಿಡುಗಡೆ ಕಾರ್ಯಕ್ರಮ, 1000ಕ್ಕೂ ಪುಸ್ತಕ ಪ್ರದರ್ಶನಗಳು ಇರಲಿವೆ.

ನೀವ್‌ ಪುಸ್ತಕ ಪ್ರಶಸ್ತಿ ಪ್ರದಾನ ಈ ಉತ್ಸವದ ಆಕರ್ಷಣೆ. ಈ ಬಾರಿ ಪಿಕ್ಚರ್‌ ಬುಕ್ಸ್‌, ಉದಯೋನ್ಮುಖ, ಕಿರಿಯ ಹಾಗೂ ಯುವ ಓದುಗರು ಎಂಬ ನಾಲ್ಕು ವಿಭಾಗದಲ್ಲಿ ‘ನೀವ್‌’ ಪುಸ್ತಕ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಹೆತ್ತವರಿಗೂ ಕಾರ್ಯಾಗಾರವನ್ನು ಏರ್ಪಡಿಸಲಾಗಿರುವುದು ವಿಶೇಷ.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಗೂ ಭಾರತೀಯ ಲೇಖಕರು, ಚಿತ್ರ ಕಲಾವಿದರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಇವರು ಮಕ್ಕಳ ಜೊತೆ ಸಂವಾದ ನಡೆಸಲಿದ್ದಾರೆ.

ಸ್ಥಳ: ನೀವ್‌ ಅಕಾಡೆಮಿ ಕ್ಯಾಂಪಸ್‌, ಯೆಮಲೂರು, ಕೆಂಪಾಪುರ ರಸ್ತೆ, ಬೆಳ್ಳಂದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT