ಭಾನುವಾರ, ಆಗಸ್ಟ್ 9, 2020
21 °C

ಹಣ್ಣು, ತರಕಾರಿ ತೊಳೆಯಲು‌ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾರುಕಟ್ಟೆಯಿಂದ ತರುವ ಹಣ್ಣು, ತರಕಾರಿ, ಆಹಾರಧಾನ್ಯ, ಬೇಳೆಕಾಳುಗಳನ್ನು ಸ್ವಚ್ಛವಾಗಿ ತೊಳೆಯಲು ಯಂತ್ರವೊಂದು ಮಾರುಕಟ್ಟೆಗೆ ಬಂದಿದೆ.

ಗಂಗಾವತಿಯ ಲೇಬರ್‌ ವೆಲ್ಫೇರ್‌‌ ಟ್ರಸ್ಟ್‌ ಸಿದ್ಧಪಡಿಸಿರುವ ‘ಮಾಮ್ಸ್‌ಕೇರ್‌ ಓಝೋನೇಟರ್‌’ ಯಂತ್ರ  ಹಣ್ಣು, ತರಕಾರಿಗಳ ಮೇಲ್ಮೈನಲ್ಲಿ ಇರುವ ರಾಸಾಯನಿಕ ಅಂಶ, ಸೂಕ್ಷ್ಮಾಣು ಜೀವಿ ಮತ್ತು ಕ್ರಿಮಿ, ಕೀಟಗಳನ್ನು ಕೊಲ್ಲುತ್ತದೆ. ಸದ್ಯದ ಸ್ಥಿತಿಯಲ್ಲಿ ಹೊರಗಿನಿಂದ ಕೊಂಡು ತರುವ ವಸ್ತುಗಳನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸಲು ಕೂಡ ಈ ಯಂತ್ರ ನೆರವಾಗುತ್ತದೆ ಎನ್ನುತ್ತಾರೆ ಯಂತ್ರದ ತಯಾರಕರು.

ಮಾಮ್ಸ್‌ಕೇರ್‌ ಯಂತ್ರ ಸುಮಾರು 1 ಕೆ.ಜಿ ಯಷ್ಟು ಭಾರವಾಗಿದ್ದು, ಓಜೋನ್‌ ಡಿಸ್‌ಇನ್ಫೆಕ್ಷನ್‌ ಟೆಕ್ನಾಲಜಿ ಪ್ರಕಾರ ಕೆಲಸ ಮಾಡುತ್ತದೆ. ಈ ಯಂತ್ರದ ಮೂಲಕ ಒಂದು ಬಾರಿ ಸುಮಾರು 10 ಕೆ.ಜಿ ತರಕಾರಿ ಅಥವಾ ಹಣ್ಣುಗಳನ್ನು ತೊಳೆಯಬಹುದು.

ಹೇಗೆ ಕೆಲಸ ಮಾಡುತ್ತದೆ?

ತರಕಾರಿಯನ್ನು ಒಂದು ಪಾತ್ರೆಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟು ನಂತರ ವಿದ್ಯುತ್‌ಚಾಲಿತ ಓಜೋನೇಟರ್ ಯಂತ್ರದ‌ ಪೈಪ್ ಅನ್ನು ಪಾತ್ರೆಯೊಳಗೆ ಇಡಬೇಕು. ಸುಮಾರು 15ರಿಂದ 40 ನಿಮಿಷದಲ್ಲಿ ಶೇ 90ರಷ್ಟು ವಿಷಕಾರಿ ರಾಸಾಯನಿಕ ಅಂಶಗಳನ್ನು ತೆಗೆದು ಹಾಕುತ್ತದೆ.  

ತರಕಾರಿ ಮತ್ತು ಹಣ್ಣಿನ ಮೇಲಿರುವ ಬ್ಯಾಕ್ಟಿರಿಯಾ, ವೈರಾಣು, ಫಂಗಸ್‌ ಹಾಗೂ ಕೀಟನಾಶಕ ದಂತಹ ರಾಸಾಯನಿಕ, ಕ್ರಿಮಿ, ಕೀಟಗಳನ್ನು ತೆಗೆದು ಹಾಕುತ್ತದೆ. ತೊಳೆಯಲು ಯಾವುದೇ ದ್ರಾವಣ ಬಳಸುವುದಿಲ್ಲ. ಆದ್ದರಿಂದ ಈ ತರಕಾರಿ, ಹಣ್ಣು ಸೇವನೆಗೆ ಸೂಕ್ತ ಎಂದು ವೆಲ್ಫೇರ್‌ ಟ್ರಸ್ಟ್‌ನ ಗೌರವ ಅಧ್ಯಕ್ಷ ಸೈಯ್ಯದ್‌ ಅಬ್ದುಲ್ಲಾ ಉಸೈನಿ ಮೆಹರ್‌ಪಾಷಾ ಮಾಹಿತಿ ನೀಡಿದರು.  

ಈ ಯಂತ್ರವನ್ನು 2012ರಲ್ಲಿಯೇ ಅಭಿವೃದ್ಧಿ ಮಾಡಿದ್ದರೂ ಕೊರೊನ ಸಮಯದಲ್ಲಿ ತುಂಬಾ ಬೇಡಿಕೆಯಿದೆ. ಒಂದು ಯಂತ್ರದ ಬೆಲೆ ₹8,500 ಎಂದು ತಿಳಿಸಿದರು. 

ನೀರು ಶುದ್ಧೀಕರಣ ಯಂತ್ರ

ಲೇಬರ್‌ ವೆಲ್‌ಫೇರ್‌ ಟ್ರಸ್ಟ್‌ ಕಡಿಮೆ ವೆಚ್ಚದಲ್ಲಿ ನೀರು ಶುದ್ಧೀಕರಣ ಯಂತ್ರ, ಅಟೊಮೇಟಿಕ್‌ ಹ್ಯಾಂಡ್‌ ಸ್ಯಾನಿಟೈಸರ್‌ ಯಂತ್ರ ಅಭಿವೃದ್ಧಿಪಡಿಸಿದೆ. ಈ ಮೂರು ಯಂತ್ರಗಳನ್ನು ಟ್ರಸ್ಟ್‌ ಕಾಂಬೋ ರೂಪದಲ್ಲಿ ರಿಯಾಯಿತಿ ಬೆಲೆಗೆ ನೀಡುತ್ತದೆ. 5 ವರ್ಷ ವಾರಂಟಿ ಹಾಗೂ ಉಚಿತ ಸರ್ವೀಸ್‌ ನೀಡುತ್ತದೆ. ಸಂಪರ್ಕ ಸಂಖ್ಯೆ: 94491 53383.  http://www.labourwelfaretrust.in/

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.