ಶುಕ್ರವಾರ, ನವೆಂಬರ್ 22, 2019
27 °C

ಮಕ್ಕಳಿಗಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ

Published:
Updated:

ವೈಟ್‌ಫೀಲ್ಡ್‌ನಲ್ಲಿರುವ ಫೋರಂ ಶಾಂತಿನಿಕೇತನ ಮಾಲ್‌, ಮಕ್ಕಳಿಗಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ‘ದ ಫೋರಂ ಕಲರಮಾ–2019’ ಆಯೋಜಿಸಿದೆ. 

ಮಕ್ಕಳಲ್ಲಿಯ ಕ್ರಿಯಾಶೀಲತೆ ಮತ್ತು ಚಿಂತನೆಗಳಿಗೆ ಉತ್ತೇಜನ ನೀಡುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶ. ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸುಸ್ಥಿರ ಆಲೋಚನೆಗಳನ್ನು ಬೆಳೆಸುವ ನಿಟ್ಟಿನಲ್ಲಿ  ‘ನಿಮ್ಮ ದೃಷ್ಟಿಯಲ್ಲಿ ಭವಿಷ್ಯದ ಹಸಿರು ಭೂಮಂಡಲ’ ಎಂಬ ವಿಷಯದ ಮೇಲೆ ಚಿತ್ರ ಬಿಡಿಸಲು ಸೂಚಿಸಲಾಗಿದೆ.

ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಸ್ಪರ್ಧೆಯನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 4ರಿಂದ 6, 7ರಿಂದ 9, 10ರಿಂದ 13 ಮತ್ತು 14ರಿಂದ 16 ವರ್ಷದ ಮಕ್ಕಳಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಮಕ್ಕಳು ಉಚಿತವಾಗಿ ಹೆಸರು ನೋಂದಾಯಿಸಬಹುದು. 

ಪ್ರತಿಕ್ರಿಯಿಸಿ (+)