ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸೂಫಿ ನಾದದ ‘ರಂಗರೇಜಾ’

Last Updated 15 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಪೂಜಾ ಗಾಯತೊಂಡೆ ಇದೀಗ ಸೂಫಿ ಸಂಗೀತ ಮತ್ತು ಗಜಲ್‌ ಗಾಯನದಲ್ಲಿ ಕೇಳಿ ಬರುತ್ತಿರುವ ಹೆಸರು. ಕಾವ್ಯ ಭಾವಯಾನದಲ್ಲಿ ಹರೆಯದ ಮನಸು ಗಜಲ್‌ನಂಥ ಬಾವಪ್ರಧಾನ ಸಂಗೀತದ ಪಯಣಕ್ಕಿಳಿಯುವುದು ಸಹಜ. ಈ ಯುವತಿ ಭಾವೋತ್ಕಟತೆಯ ಮತ್ತು ಅನಂತದೆಡೆಗಿನ ತುಡಿತದ ಸೂಫಿತ್ವದ ಹಾದಿ ಹಿಡಿದಿರುವುದು ಅಚ್ಚರಿ ಮೂಡಿಸುತ್ತದೆ. ಇದೇ ನ.17ರಂದು ಇವರ ರಂಗರೇಜಾ ಸೂಫಿ ಕಾರ್ಯಕ್ರಮ ನಗರದಲ್ಲಿ ಆಯೋಜನೆಗೊಂಡಿದೆ.

ನಿಮ್ಮ ಕಾರ್ಯಕ್ರಮ ‘ರಂಗರೇಜಾ’ ಬಗ್ಗೆ ಹೇಳಿ

‘ರಂಗರೇಜಾ’ ಮೂಲಕ ಸೂಫಿ ಸಂಗೀತದ ಅನುಭವ ಕಟ್ಟಿಕೊಡುವುದು ನನ್ನ ಉದ್ದೇಶ. ಸೂಫಿ ಜಗತ್ತಿನ ಜಗಜಟ್ಟಿಗಳೆಂದೇ ಹೆಸರಾದ ಅಮೀರ್‌ ಖುಸ್ರೊ, ಬಾಬಾ ಬುಲ್ಲೇ ಶಾ, ಕಬೀರ, ಗುರುನಾನಕ್‌, ಮೀರಾಬಾಯಿ.. ಇವರಿಂದ ನಾನು ತುಂಬ ಪ್ರಭಾವಿತಗೊಂಡಿದ್ದೇನೆ. ಅವರ ಕೃತಿಗಳನ್ನು ಹಾಡುವ ಪ್ರಯತ್ನ ಮಾಡುತ್ತೇನೆ. ಸೂಫಿ ಎಂದಾಗ ಯಾವುದೋ ಒಂದು ಧರ್ಮಕ್ಕೆ ತಳಕು ಹಾಕಬೇಕಿಲ್ಲ. ಎಲ್ಲ ಧರ್ಮಗಳ ಸಾರ ದೇವರು ಒಂದೇ ಎನ್ನುವುದಷ್ಟೇ.ಭಾಷೆ ಬೇರೆ ಸಂದೇಶ ಒಂದೇ. ಇದು ಒಂದರ್ಥದಲ್ಲಿ ಸ್ಪಿರಿಚುಯಾಲಿಟಿ ಜರ್ನಿ. ಅದನ್ನು ಸಂಗೀತದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ.

ರಂಗರೇಜಾ–ಶೇಡ್ಸ್‌ ಆಫ್‌ ಸೂಫಿ ಕಲಾಂ. ನವೆಂಬರ್‌ 17ರಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT