ಅದು 1964ರ ಕತೆ. ಅಲ್ಲಿಯವರೆಗೆ ಹೊಸಕೋಟೆಯಲ್ಲಿ ಯಾವುದೇ ಫೋಟೊ ಸ್ಟುಡಿಯೊ ಇರಲೇ ಇಲ್ಲ. ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿರುವ ಹೊಸಕೋಟೆಯಲ್ಲಿ ಸಾಕಷ್ಟು ಜನರಿಗೆ ಫೋಟೊ ತೆಗೆಸಿಕೊಳ್ಳುವ ಬಗ್ಗೆ ಕಲ್ಪನೆಯೂ ಇರಲಿಲ್ಲ. ಅಗತ್ಯ ಬಿದ್ದರೆ ಹಣವಂತರು ಮಾತ್ರ ಬೆಂಗಳೂರಿಗೆ ಹೋಗಿ ಫೋಟೊ ತೆಗೆಸಿಕೊಳ್ಳುತ್ತಿದ್ದರು.ಇಂತಹ ಸಮಯದಲ್ಲಿ ಎಚ್.ಎಂ.ಕೆ. ಮೂರ್ತಿ ಅವರು ಹೊಸಕೋಟೆಯಲ್ಲಿ ಕಪ್ಪು ಬಿಳುಪಿನ ಫೋಟೊ ತೆಗೆಯುವ ಸುಸಜ್ಜಿತ ಸ್ಟುಡಿಯೊ ಆರಂಭಿಸಿದರು.

ಮೂಲತಃ ಹೊಸಕೋಟೆಯವರೇ ಆಗಿದ್ದ ಎಚ್.ಎಂ.ಕೆ. ಮೂರ್ತಿ ಎಸ್.ಜೆ.ಪಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿನಿಮಾಟೋಗ್ರಫಿ ಕೋರ್ಸ್ ಮಾಡುವಾಗಲೇ ಜೊತೆಗೆ ಛಾಯಾಗ್ರಹಣವನ್ನು ಕಲಿತಿದ್ದರು. ನಂತರ ಮುಂಬೈನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದ ಅವರು, ಅರ್ಧಕ್ಕೆ ಕೆಲಸ ಬಿಟ್ಟು ಹೊಸಕೋಟೆಗೆ ಹಿಂತಿರುಗಿದರು. ಆಗ ಅವರಿಗೆ 30 ವರ್ಷ. ಓದುವಾಗ ಕಲಿತಿದ್ದ ಫೋಟೊಗ್ರಫಿ ಅನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.

ಹೊಸಕೋಟೆಯ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿದ್ದ ತಮ್ಮ ಮನೆಯ ಆವರಣದಲ್ಲೇ ಮೂರ್ತಿ ಅವರು ‘ಸೈಟ್ ಸ್ಟುಡಿಯೊ’ ಹೆಸರಿನಲ್ಲಿ ಸ್ಟುಡಿಯೊ ಪ್ರಾರಂಭಿಸಿದರು.ಮೂರ್ತಿ ಹಾಗೂ ಅವರ ಪತ್ನಿ ಕಮಲಾ ಅವರು ಒಟ್ಟಿಗೆ ಈ ಸ್ಟುಡಿಯೊದ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಈ ಮಧ್ಯೆ ಅವರ ಮನೆಯ ಬಳಿಯೇ ವಾಸವಿದ್ದ ಏಳು ವರ್ಷದ ರಾಜು ಶಾಲೆಗೆ ಹೋಗುತ್ತಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ರಾಜು ಅವರ ಪೋಷಕರು ಮೂರ್ತಿ ಅವರ ಬಳಿ ಸಹಾಯ ಕೋರಿದ್ದರು. ಮಗ ರಾಜು ಅವರನ್ನು ಸ್ಟುಡಿಯೊದಲ್ಲಿ ಕೆಲಸಕ್ಕೆ ಸೇರಿಸಿಕೊಂಡು ಕೆಲಸ ಹೇಳಿಕೊಡುವಂತೆ ಮನವಿ ಮಾಡಿದ್ದರು. ಏಳು ವರ್ಷದ ರಾಜು ಅಂದಿನಿಂದ ಮೂರ್ತಿ ಅವರ ಮನೆಯ ಮಗನಾಗಿ ಬೆಳೆದರು. ಅಲ್ಲೇ ಕೆಲಸ ಕಲಿತು, ಅದೇ ಸ್ಟುಡಿಯೊದಲ್ಲಿ ರಾಜು ಮುಖ್ಯ ಛಾಯಾಗ್ರಾಹಕರಾದರು.

ಇದಾದ ನಂತರ ಮೂರ್ತಿ ಅವರು ಹೊಸಕೋಟೆಯ ಕೆ.ಆರ್. ರಸ್ತೆಯಲ್ಲಿ ಖಾಲಿ ನಿವೇಶನ ಖರೀದಿಸಿ, ಅಲ್ಲಿಗೆ ಸ್ಟುಡಿಯೊವನ್ನು ಸ್ಥಳಾಂತರಿಸಿದರು. ಆಗ ಮೂರ್ತಿ ಅವರು ಸ್ಟುಡಿಯೊದ ಹೆಸರನ್ನು ಆರ್.ಆರ್. ಎಂದು ಬದಲಿಸಿದರು. ಕಾರಣ ತಮ್ಮ ಇಬ್ಬರು ಮಕ್ಕಳಾದ ರಾಜೇಶ್ ಹಾಗೂ ರಾಖಿ ಅವರ ಹೆಸರಿನ ಮೊದಲ ಅಕ್ಷರವನ್ನೇ ಸ್ಟುಡಿಯೊಗೆ ಹೆಸರಾಗಿ ಇಟ್ಟರು. ಸ್ಟುಡಿಯೊ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಅದರ ಜವಾಬ್ದಾರಿಯನ್ನು ರಾಜು ಅವರಿಗೆ ವಹಿಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದರು.

ನಗರಕ್ಕೆ ಬಂದ ನಂತರ ಟೀವಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಛಾಯಾಗ್ರಾಹಕ ಹಾಗೂ ನಿರ್ದೇಶಕನಾಗಿ ಕೆಲಸ ಮಾಡಲಾರಂಭಿಸಿದರು. ನಂತರ ತಾವೇ ಒಂದು ಧಾರಾವಾಹಿಗಳನ್ನೂ ನಿರ್ಮಿಸಲು ಪ್ರಾರಂಭಿಸಿದರು. ನಂತರ ಕೆಲವು ಸಿನಿಮಾಗಳನ್ನೂ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ನಿರತರಾಗಿದ್ದ ಮೂರ್ತಿ ಅವರು ಹೊಸಕೋಟೆಯಲ್ಲಿದ್ದ ಸ್ಟುಡಿಯೊ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು.

ಒಮ್ಮೆ ಇದ್ದಕ್ಕಿದ್ದಂತೆ ಹೊಸಕೋಟೆಗೆ ಬಂದ ಮೂರ್ತಿ ಮತ್ತು ಅವರ ಪತ್ನಿ ಕಮಲಾ ಆರ್.ಆರ್. ಸ್ಟುಡಿಯೊವನ್ನು ಮನೆಯ ಮಗನಂತಿದ್ದ ರಾಜು ಅವರಿಗೆ ಉಡುಗೊರೆಯಾಗಿ ನೀಡಿದರು. ಸ್ವಂತ ಜಾಗದಲ್ಲಿದ್ದ ಸುಸಜ್ಜಿತ ಸ್ಟುಡಿಯೊವನ್ನು ಯಾವುದೇ ಲಾಭ–ನಷ್ಟ ಎಂದು ಯೋಚಿಸದೆ ತಮಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದ ರಾಜುವಿಗೆ ನೀಡಿದ್ದರು. ಮೂರ್ತಿಯವರು 2015ರಲ್ಲಿ ನಿಧನರಾದರು.

ಚಿಕ್ಕಂದಿನಿಂದ ಮೂರ್ತಿ ಅವರೊಂದಿಗೆ ಕೆಲಸ ಮಾಡುತ್ತ ಬೆಳೆದ ರಾಜು ಅವರಿಗೆ ಸಿನಿಮಾ ಹಾಗೂ ಚಾನಲ್ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೂ ಅದನ್ನು ತಿರಸ್ಕರಿಸಿದ್ದರು. ತಮ್ಮ ನಂತರವೂ ಈ ಸ್ಟುಡಿಯೊ ಮುಚ್ಚಬಾರದೆಂಬ ಉದ್ದೇಶದಿಂದ ರಾಜು, ತಮ್ಮ ಮಗನಿಗೆ ತರಬೇತಿ ನೀಡಿ ಛಾಯಾಗ್ರಾಹಕನನ್ನಾಗಿ ಮಾಡಿದರು. ಸದ್ಯ 52 ವರ್ಷ ಪೂರೈಸುತ್ತಿರುವ ಈ ಸ್ಟುಡಿಯೊವನ್ನು ರಾಜು ಅವರ ಮಗ ರಾಮಮೂರ್ತಿ ನೋಡಿಕೊಳ್ಳುತ್ತಿದ್ದಾರೆ.

ನಾವು ಸ್ಟುಡಿಯೊ ಆರಂಭಿಸಿದಾಗ ತುಂಬಾ ಕೆಲಸ ಇರುತ್ತಿತ್ತು. ಕಾರಣ ಆಗ ಹೊಸಕೋಟೆಯಲ್ಲಿ ಸ್ಟುಡಿಯೊಗಳೇ ಇರಲಿಲ್ಲ. ಜನರಿಗಾಗಿ ತೆಗೆದ ಸ್ಟುಡಿಯೊದಲ್ಲಿ ಬಡವರಿಗೆ ಉಚಿತವಾಗಿ ಫೋಟೊ ತೆಗೆದುಕೊಡುತ್ತಿದ್ದೆವು. ಹಲವರು ಸಾಲ ಹೇಳಿ ಫೋಟೊಗಳನ್ನು ತೆಗೆಸಿಕೊಂಡು ಹೋಗುತ್ತಿದ್ದರು. ಆದರೆ ಆಗ ಮೋಸ ಮಾಡುವ ಜನರ ಸಂಖ್ಯೆ ತೀರಾ ಕಡಿಮೆ ಇತ್ತು.

ಜೊತೆಗೆ ಹೆಚ್ಚಾಗಿ ಶವಗಳ ಫೋಟೊ ತೆಗೆಯುವ ಅಸೈನ್ಮೆಂಟ್ ಸಿಗುತ್ತಿತ್ತು. ಕಾರಣ ಸತ್ತ ಹಿರಿಯರ ಫೋಟೊ ಮನೆಯಲ್ಲಿ ಇರದವರು ಶವದ ಚಿತ್ರ ತೆಗಿಸಿ, ಬದುಕಿರುವಾಗ ಇರುವಂತೆ ಮಾಡಿಕೊಡಿ ಎಂದು ಕೇಳುತ್ತಿದ್ದರು. ಅದಕ್ಕಾಗಿ ನಾವು ಸತ್ತವರ ಫೋಟೊ ತೆಗೆದು ಪ್ರಿಂಟ್ ಹಾಕಿಸಿ, ಅದಕ್ಕೆ ಕಲಾವಿದರ ಕೈಯಲ್ಲಿ ಕಣ್ಣು ತೆರೆದಿರುವಂತೆ ತಿದ್ದಿಸುತ್ತಿದ್ದೆವು.

ಆಗ ಇದೇ ಹೆಚ್ಚಾಗಿ ನಡೆಯುತ್ತಿತ್ತು. ಜೊತೆಗೆ ಮಲ್ಲಿಗೆ ಹೂವಿನ ಕಾಲದಲ್ಲಿ ಮೊಗ್ಗಿನ ಜಡೆ ಹಾಗೂ ಕೃಷ್ಣನ ಕೊಂಡೆ ಹಾಕಿಸುತ್ತಿದ್ದವರು ಸ್ಟುಡಿಯೊಗೆ ಬಂದು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಆಗ ರಾತ್ರಿ 7 ಗಂಟೆಗೆ ಸ್ಟುಡಿಯೊ ಮುಚ್ಚುತ್ತಿದ್ದೆವು. ಅದರಲ್ಲೂ ಹೊಸಕೋಟೆ ಈಗಿನಂತೆ ಇರಲಿಲ್ಲ. ರಾತ್ರಿ 8 ಗಂಟೆಗೆಲ್ಲ ಜನರು ಮನೆಗಳಿಂದ ಹೊರಗಡೆಯೇ ಬರುತ್ತಿರಲಿಲ್ಲ. ಆದರೆ ಸಂಜೆ ಮಲ್ಲಿಗೆ ಮೊಗ್ಗನ್ನು ತಂದು ಜಡೆ ಹೆಣಿಸಿಕೊಂಡು ಬರುವ ಜನರು ಮನೆ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದರು.

ಆಗ ಎಷ್ಟೊ ಬಾರಿ ಮಲಗಿದ್ದವರು ಎದ್ದು ಚಿತ್ರ ತೆಗೆದದ್ದೂ ಇದೆ. ಜೊತೆಗೆ ಮೊದ ಮೊದಲು ಪೋಟೊಗಳ ಮೇಲಿರುತ್ತಿದ್ದ ಗ್ರೇನ್ಸ್ ತೆಗೆಸಿ, ಟಚಪ್ ಮಾಡಲು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ದಿನ ಕಳೆದಂತೆ ಎಲ್ಲ ಸೌಲಭ್ಯಗಳನ್ನೂ ನಮ್ಮ ಸ್ಟುಡಿಯೊದಲ್ಲೇ ಮಾಡಿಕೊಂಡೆವು.
– ಕಮಲಾ, ಎಚ್.ಎಂ.ಕೆ. ಮೂರ್ತಿ ಅವರ ಪತ್ನಿ

‘ನನ್ನ ತಂದೆ ಶಾಲೆ ಮೆಟ್ಟಿಲು ಹತ್ತಿದವರೇ ಅಲ್ಲ. ಬುದ್ಧಿ ಬಂದಾಗಿನಿಂದ ಸಾಯುವವರೆಗೂ ಮೂರ್ತಿ ಅವರೊಂದಿಗೇ ಇದ್ದರು. ಅವರನ್ನು ಬಿಟ್ಟು ಎಲ್ಲೂ ಹೋಗಲೇ ಇಲ್ಲ.ಅವರಿಗೆ ಈ ಸ್ಟುಡಿಯೊ ಎಂದರೆ ಪ್ರಾಣ. ನನ್ನ ಇಷ್ಟದಂತೆ ನನ್ನನ್ನು ಎಂಜಿನಿಯರಿಂಗ್ ಮಾಡಿಸಿದರು. ಆದರೆ ಅವರಿಗೆ ಸ್ಟುಡಿಯೊದ ಮೇಲಿದ್ದ ಪ್ರೀತಿಯಿಂದಾಗಿ ನನಗೆ ಸ್ಟುಡಿಯೊ ಜವಾಬ್ದಾರಿ ನೋಡಿಕೊಳ್ಳುವಂತೆ ಕೇಳಿದರು.

ಅವರು ಕೇಳಿದಾಗ ಇಲ್ಲ ಎಂದು ಹೇಳಲು ಮನಸಾಗಲಿಲ್ಲ. ನನಗೆ ಫೋಟೊಗ್ರಫಿ ಎಂದರೆ ಇಷ್ಟ ಇತ್ತು. ಆದರೆ ಸ್ಟುಡಿಯೊ ನೋಡಿಕೊಳ್ಳಲು ಇಷ್ಟವಿರಲಿಲ್ಲ. ಆದರೆ 2001ರಲ್ಲಿ ಅಪ್ಪನ ಜೊತೆ ಸೇರಿ ಸ್ಟುಡಿಯೊ ನೋಡಿಕೊಳ್ಳಲು ಪ್ರಾರಂಭಿಸಿದೆ. ನಾನೂ ಸಹ ಕಾಲೇಜಿಗೆ ಹೋಗಿ ಛಾಯಾಗ್ರಹಣ ಕಲಿಯಲಿಲ್ಲ. ಅಪ್ಪನೊಂದಿಗೆ ನೋಡುತ್ತಾ ಕಲಿತಿದ್ದೇ ಹೆಚ್ಚು. ನನ್ನ ಸ್ನೇಹಿತರನ್ನು ನೋಡಿದಾಗ ಮನಸ್ಸಿಗೆ ಕೊಂಚ ಬೇಸರವೆನಿಸಿದರೂ ಅಪ್ಪನ ಆಸೆ ನೆರವೇರಿಸಿದೆ ಎನ್ನುವ ನೆಮ್ಮದಿ ಇದೆ.

ಜೀವನಕ್ಕೆ ಏನೂ ತೊಂದರೆ ಇಲ್ಲ. ಈಗ ಇಷ್ಟಪಟ್ಟೇ ಈ ಕೆಲಸ ಮಾಡುತ್ತಿದ್ದೇನೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಅಪ್ಪ ಹಾಗೂ ಮೂರ್ತಿ ಅವರ ಹೆಸರಿನಿಂದ ಇನ್ನೂ ಸಾಕಷ್ಟು ಮಂದಿ ಗ್ರಾಹಕರು ಬರುತ್ತಾರೆ. ಹೀಗಾಗಿ ಸ್ಪರ್ಧೆ ಇದ್ದರೂ ನಾವು ಹಿಂದೆ ಬಿದ್ದಿಲ್ಲ’.
–ರಾಮಮೂರ್ತಿ ರಾಜು ಅವರ ಮಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.