*ಮದ್ರಾಸ್‌ನಲ್ಲಿ ನಡೆದ (1978) ಚಿತ್ರೋತ್ಸವ ಮಾರುಕಟ್ಟೆ ವಿಭಾಗದಲ್ಲಿ 15 ಚಲನಚಿತ್ರಗಳು (ಕನ್ನೇಶ್ವರರಾಮ, ಚಂಡಮಾರುತ, ಘಟಶ್ರಾದ್ಧ, ಅಬಚೂರಿನ ಪೋಸ್ಟಾಪೀಸು, ಪಲ್ಲವಿ, ನಾಂದಿ, ಹರಕೆ, ಸಂಸ್ಕಾರ, ಕಾಡು, ಕಥಾಸಂಗಮ, ಉಯ್ಯಾಲೆ, ಗಂಧದಗುಡಿ, ಸಂಪರ್ಕ, ಹರಕೆ, ದೀಪ, ಕೋಕಿಲ) ಬೆಲ್‌ಗ್ರೇಡ್ ದೂರದರ್ಶನಕ್ಕೆ ಮಾರಾಟವಾಗಿದ್ದವು.
*ಕೆನಡಾದ ‘ಟೊರೆಂಟೊ’ ಚಿತ್ರೋತ್ಸವದಲ್ಲಿ ಕಳೆದ ವರ್ಷ 250 ನಿಮಿಷಗಳ ‘ದಿ ಎಂಡ್ ಆಫ್ ಹಿಸ್ಟರಿ’ ಚಿತ್ರ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂಡಿತು.
*ಸಮಕಾಲೀನ ಶ್ರೇಷ್ಠ ಚಿತ್ರ ನಿರ್ದೇಶಕರಿಗೆ ನೀಡುವ ಜೀಗರ್ ಫಿಲಂ ಮೇಕರ್ ಅವಾರ್ಡ್‌ಗೆ (2010) ವೆನಿಸ್ ಚಿತ್ರೋತ್ಸವದಲ್ಲಿ ಆಯ್ಕೆಯಾದವರು ಮಣಿರತ್ನಂ.
*ಭಯಾನಕ ಚಿತ್ರಗಳಿಗಾಗಿ ಉತ್ಸವವೊಂದು ಅಮೇರಿಕದ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಕ್ರಿಸ್ಟಲ್ ಔಟ್‌ಡೋರ್ ಫಿಲಂ ಪೆಸ್ಟಿವಲ್ ನಡೆಯುತ್ತದೆ.
*ಕನ್ನಡದ ‘ಕಾಡು’ ಚಿತ್ರಕ್ಕೆ 4ನೇ ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಯುನಿಕ್ರಿಟ್’ ಪ್ರಶಸ್ತಿ ಲಭಿಸಿತ್ತು.
*ಪ್ರಯೋಗಾತ್ಮಕ ಚಲನಚಿತ್ರಗಳಿಗೆ ವೇದಿಕೆ ಒದಗಿಸುವ ‘ಅಸ್ನಾ ಅರ್‌ಬಾರ್’ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 1963 ರಿಂದ ಉತ್ತರ ಅಮೇರಿಕದಲ್ಲಿ ಜರುಗುತ್ತದೆ.
*ಯುರೋಪಿನ ಚಲನಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುವ ‘ಕಾನ್ಸ್’ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ವಿಜೇತ ಚಿತ್ರಕ್ಕೆ ಕೊಡುವುದು ಗೋಲ್ಡನ್ ಫಾಮ್ ಪ್ರಶಸ್ತಿ.
*ಮೀರಾ ನಾಯರ್ ನಿರ್ದೇಶನದ ‘ಸಲಾಂ ಬಾಂಬೆ’ ಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ (1989) ಗೋಲ್ಡನ್ ಕ್ಯಾಮರಾ ಅವಾರ್ಡ್ (ಕಾನ್‌್ಸ) ಸಿಕ್ಕಿತ್ತು.
*ಉತ್ತರ ಇಟಲಿಯ ಪ್ರೊಡ್‌ನನ್ ಸಿನಿಮಾದಲ್ಲಿ 1982 ರಿಂದ ಮೂಕಿ ಚಿತ್ರಗಳ ಚಿತ್ರೋತ್ಸವ ನಿರಂತರವಾಗಿ ನಡೆಯುತ್ತ ಬಂದಿದೆ. ಇದರಲ್ಲಿ ಹೆಚ್ಚಿನವು ಕಾರ್ಟೂನ್ ಚಿತ್ರಗಳು.
*ಕನ್ನಡದ ‘ಸಂಸ್ಕಾರ’ (ನಿರ್ದೇಶನ ಪಟ್ಟಾಭಿರಾಮ ರೆಡ್ಡಿ) ಹಾಗೂ ತಿಥಿ (ನಿರ್ದೇಶನ ರಾಮಿ ರೆಡ್ಡಿ) ಪ್ರತಿಷ್ಠಿತ ಲೋಕಾರ್ನೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.