ನಗರದಲ್ಲಿ ನಡೆದಿರುವ ಸಿನಿಮೋತ್ಸವ ಕುರಿತ ಸಣ್ಣ ಸಣ್ಣ ಮಾಹಿತಿ ಆಸಕ್ತಿಕರ. ಅಂಥ ಮಾಹಿತಿಯ ನಾಲ್ಕನೆಯ ಕಂತು ಇದು.

* ಕರ್ನಾಟಕದ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಒತ್ತಾಸೆ ಮೂಲಕ ಬೆಂಗಳೂರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಬಂತು (1980). ಉದ್ಘಾಟನಾ ದಿನ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಭಾಗವಹಿಸಿದ್ದರು. ರಾಜಕಾರಣದ ಏರುಪೇರುಗಳಿಂದಾಗಿ ಚಿತ್ರೋತ್ಸವದ ಸಮಾರೋಪ ಸಮಾರಂಭದ ಹೊತ್ತಿಗೆ ಆರ್.ಗುಂಡೂರಾವ್ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದರು.

* ಚಲನಚಿತ್ರ ಸಂಗೀತಕ್ಕೆ ಗೌರವ ಸಲ್ಲಿಸುವ ವಿಶಿಷ್ಟ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅಮೆರಿಕದ ಪಾರ್ಕ್ ಸಿಟಿಯಲ್ಲಿ ಆಯೋಜನೆಯಾಗುತ್ತದೆ.

* ಫ್ರಾನ್ಸ್ ನ ಕಾನ್‌ನಲ್ಲಿ ಪ್ರತಿವರ್ಷ ಮೇ ತಿಂಗಳಲ್ಲಿ ಏರ್ಪಾಡಾಗುವ ಚಲನಚಿತ್ರೋತ್ಸವದ ಬಜೆಟ್ 2 ಕೋಟಿ ಯೂರೋಗಳು.

* ಜಗತ್ತಿನಲ್ಲಿ ನಡೆಯುವ ಬಹುತೇಕ ಅಂತರರಾಷ್ಟ್ರೀಯ ಚಲನಚಿತ್ರಗಳ ಸಾಮಾನ್ಯ ಅವಧಿ ಒಂದು ವಾರ.

* ಪ್ರತಿಷ್ಠಿತ ಚಿತ್ರೋತ್ಸವಗಳೆಂದು ಹೆಸರು ಪಡೆದಿರುವ ಮೂರು ಉತ್ಸವಗಳಿಗೆ (ವೆನಿಸ್, ಬರ್ಲಿನ್ ಹಾಗೂ ಕಾನ್) ಪೋಲೆಂಡ್‌ನ ಚಿತ್ರ ನಿರ್ದೇಶಕ ಕರ್ಜೈ ಸ್ನಾಜಾಪ್ ಕೈಮ್ಲಿಸ್ಕಿ ಮೂರು ಬಣ್ಣಗಳು ಹೆಸರುಗಳೊಂದಿಗೆ (ನೀಲಿ, ಬಿಳಿ ಹಾಗೂ ಕೆಂಪು) ‘ತ್ರಿ ಕಲರ್ಸ್ ಟ್ರಯಾಲಜಿ’ ಎಂಬ ಚಿತ್ರಗಳನ್ನು ತಯಾರಿಸಿ ಪ್ರದರ್ಶಿಸಿದ್ದರು.

* ಕೊರಿಯಾ ಗಣರಾಜ್ಯದ ‘ಬೂಸಾನ್’ನಲ್ಲಿ ಪ್ರತಿವರ್ಷ ಹತ್ತು ದಿನಗಳು ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಏಷ್ಯಾದ ಅತ್ಯುತ್ತಮ ಚಿತ್ರೋತ್ಸವಗಳಲ್ಲೊಂದು.

* ಬೆಂಗಳೂರಿನಲ್ಲಿ 1980ರಲ್ಲಿ ನಡೆದ ಚಿತ್ರೋತ್ಸವ ಉದ್ಘಾಟನೆಗೆ ಖ್ಯಾತ ನಟಿ ದೇವಿಕಾರಾಣಿ ಅವರಿಗೆ ಜ್ಯೋತಿ ಬೆಳಗಿಸಲು ಸಹಕರಿಸಿದ ದೀಪ ಬಾಲೆ ಕನ್ನಡದ ನಟಿ ರೇಖಾ ರಾವ್.

* ರಾಷ್ಟ್ರದ ರಾಜಧಾನಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದ ಎರಡನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉಪರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಉದ್ಘಾಟಿಸಿದರು.

* ಕೇಂದ್ರ ಸರ್ಕಾರದ ಫಿಲ್ಮ್ಸ್ ಡಿವಿಜನ್‌ನ ಮುಖ್ಯ ನಿರ್ಮಾಪಕ ಹಾಗೂ ಹೆಸರಾಂತ ಚಲನಚಿತ್ರ ತಂತ್ರಜ್ಞ– ನಿರ್ದೇಶಕ ಮೋಹನ್ ಭವನಾನಿ ಪ್ರಸಿದ್ಧ ಚಿತ್ರ ಕಥಾಲೇಖಕ ಸ್ಯಾಮ್ ಬರ್ಲಿ ಹಿಲ್ ಭಾರತದ ಮೊದಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು (1952) ಸಂಘಟಿಸಿದರು.

* ಕಾನ್ ಚಿತ್ರೋತ್ಸವದಲ್ಲಿ ಮೊದಲಿಗೆ ಪ್ರದರ್ಶನಗೊಂಡ ಭಾರತೀಯ ಚಿತ್ರ ಚೇತನ್ ಆನಂದ್ ನಿರ್ದೇಶನ ‘ನೀಚಾ ನಗರ್.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.