ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವದ ಮೆಲುಕುಗಳು 6

Last Updated 1 ಫೆಬ್ರುವರಿ 2016, 19:37 IST
ಅಕ್ಷರ ಗಾತ್ರ

* ನವದೆಹಲಿಯಲ್ಲಿ 1965ರಲ್ಲಿ ನಡೆದ 3ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವೇ ಭಾರತದ ಮೊದಲ ಸ್ಪರ್ಧಾಚಿತ್ರೋತ್ಸವ. ಇದಕ್ಕೆ ಜ್ಯೂರಿ ಸಮಿತಿ ಅಧ್ಯಕ್ಷರಾಗಿದ್ದವರು ಸತ್ಯಜಿತ್‌ ರೇ. ಶ್ರೀಲಂಕಾದ ಕಥಾ ಚಿತ್ರ ‘ಗಾಂ ಪೆರಲಿಯಾ’ ಮೊದಲ ಸ್ವರ್ಣ ಮಯೂರಿ ಪ್ರಶಸ್ತಿಗೆ ಪಾತ್ರವಾಯಿತು.

* ಟೊರೆಂಟೊ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧೆಯೂ ಇರಲಿಲ್ಲ, ಜ್ಯೂರಿ ಸಮಿತಿಯೂ ಇರಲಿಲ್ಲ. 2015ರಲ್ಲಿ ವೀಕ್ಷಕರು ಮತ ಚಲಾಯಿಸಿ ಆಯ್ಕೆ ಮಾಡುವ ಚಿತ್ರಕ್ಕೆ 25 ಸಾವಿರ ಡಾಲರ್‌ ನಗದು ಬಹುಮಾನ ನೀಡುವ ಪರಿಪಾಠ ಆರಂಭವಾಯಿತು.

* ಕನ್ನಡಿಗ ಎಂ.ಎಸ್‌. ಸತ್ಯು ನಿರ್ದೆಶಿಸಿದ ಹಿಂದಿ ಚಿತ್ರ ‘ಗರಂಹವಾ’ಗೆ 4ನೇ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಸಿದಾಲಕ್‌’ ಪ್ರಶಸ್ತಿ ಲಭಿಸಿತು.

* ಕೋಲ್ಕತ್ತ ಚಿತ್ರೋತ್ಸವ (1975)ದಲ್ಲಿ ಜಗತ್ತಿನ ಉತ್ತಮ ಚಿತ್ರಗಳ ಪ್ರದರ್ಶನದ ಜೊತೆಗೆ ಚಿತ್ರೋದ್ಯಮದ ವಿವಿಧ ಮಗ್ಗಲುಗಳನ್ನು ಚರ್ಚಿಸುವ ಕಾರ್ಯಕ್ರಮಗಳೂ ಏರ್ಪಡಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಕೋಲ್ಕತ್ತದಲ್ಲಿ ‘ಸಾಮಾಜಿಕ ಪ್ರಸ್ತುತತೆ ಹಾಗೂ ಸಿನಿಮಾ’ ವಿಚಾರ ಸಂಕಿರಣ ನಡೆಯಿತು.

* ನ್ಯೂಜಿಲೆಂಡ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ  ಸಾಮಾನ್ಯವಾಗಿ ಆ್ಯಕ್‌ಲೆಂಡ್‌ನಲ್ಲಿ ಉದ್ಘಾಟನೆಗೊಂಡು ಒಂದುವಾರ ನಡೆಯುತ್ತದೆ. ನಂತರ ವೆಲ್ಲಿಂಗ್‌ಟನ್‌ನಲ್ಲಿ ಮುಂದುವರೆಯುತ್ತದೆ. ಜೊತೆಗೆ ದೇಶದ ಇನ್ನೂ 12 ಕೇಂದ್ರಗಳಲ್ಲಿ ವ್ಯವಸ್ಥೆಗೊಳ್ಳುತ್ತದೆ.

* ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವದ ಆರನೇ ಆವೃತ್ತಿಯ ಚಿತ್ರೋತ್ಸವ ಜ್ಯೂರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದವರು ಚಿತ್ರನಿರ್ದೇಶಕ ಹಾಗೂ ನಾಟಕಕಾರ ಗಿರೀಶ ಕಾರ್ನಾಡ.

* ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಸುಚಿತ್ರ ಆಯೋಜಿಸಿದ್ದಾಗ (2006) ಮೊದಲ ಮೂರು ವರ್ಷ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

* ಜನಪ್ರಿಯ ಕಲಾವಿದ ಹಾಗೂ ಹೆಸರಾಂತ ನಿರ್ದೇಶಕ ರಾಜ್‌ ಕಪೂರ್‌ 2ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

* ಅಮೇರಿಕಾದ ‘ಸನ್‌ಡಾನ್ಸ್‌’ ಅಂತರರಾಷ್ಟ್ರೀಯ ಚಿತ್ರೋತ್ಸವ  ಸಮಿತಿ 1987ರಲ್ಲಿ ಜಪಾನ್‌ನಲ್ಲಿ ವಿಶ್ವ ಚಲನಚಿತ್ರೋತ್ಸವವನ್ನು ಏರ್ಪಡಿಸಿತ್ತು. ಪ್ರದರ್ಶನಗೊಂಡ ಎಲ್ಲಾ ಚಿತ್ರಗಳೂ ಅಮೇರಿಕದಲ್ಲಿ ತಯಾರಾಗಿದ್ದವು.

* ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಆರ್‌.ಕೆ. ಲಕ್ಷ್ಮಣ್‌ ಅವರು ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವದ (1969) ಜ್ಯೂರಿ ಸಮಿತಿ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT