ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯ ‘ದರ್ಶನ’

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕಲಾಭಿರುಚಿಯುಳ್ಳವರಿಗೆ ಬೆಂಗಳೂರು ಪ್ರಶಸ್ತ ನಗರ. ಕಲೆ, ಸಾಹಿತ್ಯ ಪ್ರತಿಭೆಗಳಿಗೆ ರಾಜಧಾನಿ ಸಾಂಸ್ಕೃತಿಕ ತವರೂರು. ಅಲ್ಲದೇ  ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.

ಮಂಜುನಾಥನಗರದ ಇಂಡಿಯನ್ ಸ್ಕೂಲಿನ 6ನೇ ತರಗತಿ ಅಭ್ಯಾಸ ಮಾಡುತ್ತಿರುವ ದರ್ಶನ್ ನೃತ್ಯಕ್ಕೆ ಮನಸೋಲದವರಿಲ್ಲ. ಭರತನಾಟ್ಯ, ಪಾಶ್ಚಾತ್ಯ ನೃತ್ಯ ಸೇರಿದಂತೆ ಕಾವಡಿಯಾಟ್ಟಂ, ಅಯ್ಯಪ್ಪ ನೃತ್ಯಗಳನ್ನು ಕಲಿತು ಹಲವಾರು ವೇದಿಕೆಗಳಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡ ಪ್ರತಿಭೆ.

ಓದುವುದರೊಂದಿಗೆ ನೃತ್ಯವನ್ನು ಕಲಿಯುತ್ತಿರುವ ದರ್ಶನ್‌ಗೆ ಸ್ಫೂರ್ತಿ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ. ಟಿ.ವಿ.ಯಲ್ಲಿ ಅವರ ನೃತ್ಯವನ್ನು ಕಂಡಾಗ ದರ್ಶನ್ ಕುಣಿಯುತ್ತಿದ್ದ. ಮೊಮ್ಮಗನ ಹಾವಭಾವ, ಕುಣಿತದ ತುಡಿತಗಳನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದವರು ಅವರ ತಾತ ನಾರಾಯಣನ್ ನಾಯರ್.

ಮನೆಯ ಆರ್ಥಿಕ ಪರಿಸ್ಥಿತಿ ಮೊಮ್ಮಗನ ಕಲಾದಾಹವನ್ನು ತಣಿಸಬಲ್ಲುದೇ ಎಂಬುದು ತಾತನ ಚಿಂತೆಯಾಗಿತ್ತು. ತುಂಬು ಸಂಸಾರದ ಹಸಿವನ್ನು ನೀಗಿಸಲು ದರ್ಶನ್‌ ತಂದೆ ಸುಂದರ್‌ರಾಜ್ ಸಮೀಪದ ಬೇಕರಿಯಲ್ಲಿ ಕೆಲಸಕ್ಕೆ ಸೇರಬೇಕಾಯಿತು. ತಾಯಿ ಮಾಲತಿಯೂ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಕೊನೆಗೆ ನಾರಾಯಣನ್‌ ನಾಯರ್ ಅವರೇ ಮೊಮ್ಮಗ ದರ್ಶನ್‌ನನ್ನು ರಾಜಾಜಿನಗರದ ವಿದುಷಿ ಹೇಮಮಾಲಿನಿ ಅವರು ನಡೆಸುತ್ತಿರುವ ರಿದಂ ಇನ್‌ಸ್ಟಿಟ್ಯೂಟ್‌ಗೆ ಸೇರಿಸಿದರು. ದರ್ಶನ್ ಅಲ್ಲಿ ಪಾಶ್ಚಾತ್ಯ ನೃತ್ಯವನ್ನು ಕಲಿತ. ನಂತರ ಆತನ ಮನಸ್ಸು ಭರತನಾಟ್ಯದತ್ತ ಒಲಿಯಿತು. ಈಗಾಗಲೇ ೫೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ದರ್ಶನ್‌ಗೆ ಕಾವಡಿಯಾಟ್ಟಂ, ಅಯ್ಯಪ್ಪ ನೃತ್ಯಗಳಲ್ಲೂ ಆಸಕ್ತಿ ಬೆಳೆಯಿತು.

ನೃತ್ಯವನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವುದು ದರ್ಶನ್‌ ಕನಸುಗಳಲ್ಲಿ ಒಂದು. ಪ್ರಭುದೇವ ಅವರಂತೆ ತಾನೂ ಒಬ್ಬ ಹೆಸರಾಂತ ನೃತ್ಯ ಪಟುವಾಗಬೇಕೆಂಬುದು ಅವನ ಪುಟ್ಟ ಬಾಯಿಯಿಂದ ಬರುವ ದೊಡ್ಡ ಮಾತು.  

ಹಲವಾರು ಸಂಘ ಸಂಸ್ಥೆಗಳು ದರ್ಶನ್‌ ಪ್ರತಿಭೆ ಗುರ್ತಿಸಿ ಸನ್ಮಾನಿಸಿವೆ. ಮೂಲತಃ ಕೇರಳದ ಪಾಲಕ್ಕಾಡಿನವರಾದರೂ ಈ ಕುಟುಂಬ ಕನ್ನಡ ಭಾಷೆ, ಸಂಸ್ಕೃತಿಯೊಂದಿಗೆ ಬೆರೆತು ಹೋಗಿದೆ. ಫೆ. ೧೫ರಂದು ಪಾಲಕ್ಕಾಡಿನಲ್ಲಿ ನಡೆಯುವ ನೃತ್ಯ ಪ್ರದರ್ಶಕ್ಕೆ ದರ್ಶನ್ ಅಭ್ಯಾಸ ಮಾಡುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT