ಉತ್ತಮ ಉದ್ಯೋಗ, ಕೈತುಂಬಾ ಸಂಪಾದನೆ. ವೆಚ್ಚಕ್ಕೊಂದಿಷ್ಟು ಹಣ. ತಮ್ಮ ದುಡಿಮೆಯಲ್ಲಿ ಬಯಸಿದ್ದನ್ನು ತೆಗೆದುಕೊಳ್ಳಬೇಕೆಂಬ ಬಯಕೆ ಎಲ್ಲರ್ದ್ದದು. ಇಂತಹ ಆಸೆಯ ಮೂಟೆ ಹೊತ್ತು ಮಹಾನಗರಗಳಿಗೆ ಬರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಈ ಆಸೆಗಳನ್ನು ಸಾಕಾರ ಮಾಡಲು ಮ್ಯಾಕ್ಡೊನಾಲ್ಡ್ ಮುಂದಾಗಿದೆ. ಮುಂಬೈ, ಪುಣೆ, ಹೈದರಾಬಾದ್ ಹಾಗೂ ಬೆಂಗಳೂರು ಮಹಾನಗರಗಳಲ್ಲಿ ಉದ್ಯೋಗಸ್ಥರ ಬೇಟೆಗೆ ಕೈಹಾಕಿದ್ದು, ದೇಶದಾದ್ಯಂತ 6,500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಏಪ್ರಿಲ್ ಮೊದಲ ವಾರವನ್ನು `ದಿ ಹಿಯರಿಂಗ್ ವೀಕ್~ ಎಂದು ಆಚರಿಸುತ್ತಿರುವ ಮ್ಯಾಕ್ಡೊನಾಲ್ಡ್ ಪಿಯುಸಿ ಮುಗಿಸಿರುವ ಹಾಗೂ 18 ವರ್ಷ ತುಂಬಿರುವ ಯುವಕರಿಗೆ ಈ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.

ದೇಶದಾದ್ಯಂತ ಇರುವ 250 ರೆಸ್ಟೊರೆಂಟ್ಗಳಲ್ಲಿ ಸುಮಾರು 6.5 ಲಕ್ಷ ಗ್ರಾಹಕರನ್ನು ಹೊಂದಿರುವ ಮ್ಯಾಕ್ಡೊನಾಲ್ಡ್, ಕೆಲಸ ಮಾಡುವ ಬಯಕೆ ಮತ್ತು ಸಾಮರ್ಥ್ಯ ಹೊಂದಿರುವವರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಉದ್ಯೋಗಿಗಳಲ್ಲಿ ಕುಶಲತೆಯನ್ನು ತುಂಬುವ ಕೆಲಸ ಮಾಡುತ್ತಿದ್ದೇವೆ. ಸಿಬ್ಬಂದಿಯೊಂದಿಗೆ ಶಾಂತಿ ಮತ್ತು ನಂಬಿಕೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ತಮ್ಮ ಕೆರಿಯರನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳಲು ಸಹಾಯ ಮಾಡಲಾಗುತ್ತದೆ ಎನ್ನುತ್ತಾರೆ ಮ್ಯಾಕ್ಡೊನಾಲ್ಡ್ ಇಂಡಿಯಾದ (ವೆಸ್ಟ್ ಅಂಡ್ ಸೌತ್) ನಿರ್ದೇಶಕಿ ಸೀಮಾ ಅರೋರಾ ನಂಬಿಯಾರ್.

ಪಿಯುಸಿಯಿಂದ ಎಂಬಿಎ ವಿದ್ಯಾಭ್ಯಾಸ ಮಾಡಿದವರಿಗೆ ಈ ಅವಕಾಶ ಕಲ್ಪಿಸಲಾಗುತ್ತಿದ್ದು, ನೇಮಕವಾದವರಿಗೆ ವ್ಯವಹಾರ ನಿರ್ವಹಣೆ, ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳುವುದು, ಗ್ರಾಹಕರ ನಿರ್ವಹಣೆ ಮೊದಲಾದವುಗಳ ಕೌಶಲ್ಯಗಳ ವೃದ್ಧಿಗೆ ತರಬೇತಿ ನೀಡಲಾಗುವುದು.

ಉದ್ಯೋಗಿಗಳನ್ನು ದುಡಿಸಿಕೊಳ್ಳುವುದರ ಜತೆಗೆ ಒಂದಿಷ್ಟು ಮನರಂಜನೆ, ಆಗಾಗ ಸ್ಪರ್ಧೆಗಳನ್ನೂ ಏರ್ಪಡಿಸುತ್ತದೆ. ಸಿಬ್ಬಂದಿ ನಡುವೆ ಸ್ಪರ್ಧೆ, ಎಲ್ಕೆಟಿ ಅವಾರ್ಡ್ ನೈಟ್ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಉದ್ಯೋಗಿಗಳು ಮತ್ತು ಮಾಲೀಕರ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನವನ್ನೂ ಮಾಡಲಾಗುತ್ತದೆ.
ಮಹಿಳಾ ಉದ್ಯೋಗಿಗಳಿಗೂ ಇಲ್ಲಿ ಸುರಕ್ಷಿತ ಸೌಲಭ್ಯ ಒದಗಿಸಲಾಗುತ್ತದೆ ಎಂದು ಮ್ಯಾಕ್ಡೊನಾಲ್ಡ್ ಹೇಳಿಕೊಂಡಿದೆ.

ಮ್ಯಾಕ್ಡೊನಾಲ್ಡ್ ವೆಟಾ (veta), ಎಂಬಿಎ ಮೊದಲಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಸಿಬ್ಬಂದಿಗಳು ಇಚ್ಛಿಸಿದರೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬಹುದು.
ಉದ್ಯೋಗಿಗಳು ತಮ್ಮ ಭವಿಷ್ಯದ ಮಹತ್ವಕಾಂಕ್ಷೆಗಳನ್ನು ನಮ್ಮ ಕಂಪೆನಿಯಲ್ಲಿ ಸಾಕಾರ ಮಾಡಿಕೊಳ್ಳಬಹುದು. ಇದು ಅವರ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದು ಮ್ಯಾಕ್ಡೊನಾಲ್ಡ್ನ ಸಂಸ್ಥಾಪಕ ರೇ ಕೊರ್ಕ್ ಹೇಳುತ್ತಾರೆ.

ಕೆಲಸ ಮಾಡುವ ಸಮಯದಲ್ಲೂ ಯಾವುದೇ ಒತ್ತಡಗಳಿರುವುದಿಲ್ಲ. ಶಿಫ್ಟ್ಗಳನ್ನು ಅಳವಡಿಸುವುದರಿಂದ ಸಿಬ್ಬಂದಿಗೆ ಕೆಲಸ ಹೊರೆಯೆನಿಸದು. ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಮ್ಯಾಕ್ಡೊನಾಲ್ಡನ್ನು ಆಯ್ಕೆ ಮಾಡಿಕೊಳ್ಳಿ ಎನ್ನುವುದು ಸಂಸ್ಥಾಪಕರ ಮಾತು.
ಮಾಹಿತಿಗಾಗಿ: http://www.facebook. com/McDonaldsIndia

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.