ಹೋಮ್‌ಟೌನ್ ಪ್ರೊಡಕ್ಷನ್ಸ್: ಶುಕ್ರವಾರ ನೀಲಾದ್ರಿ ಕುಮಾರ್ ಅವರಿಂದ ‘ಝಿಟಾರ್’ ವಾದನ.ನೋಡಲು ಸಿತಾರ್‌ನಂತೆ ಕಾಣುತ್ತದೆ, ಆದರೆ ಸಿತಾರ್ ಅಲ್ಲ. ಗಿಟಾರ್‌ನಂತೆ ಧ್ವನಿ ಹೊರಡಿಸುತ್ತದೆ, ಆದರೆ ಗಿಟಾರ್ ಅಲ್ಲ. ಇದಕ್ಕೆ ಹೆಸರು ಝಿಟಾರ್. ಸಿತಾರ್‌ನ ಶಾಸ್ತ್ರೀಯತೆ ಮತ್ತು ಗಿಟಾರ್‌ನ ರೋಚಕ ಅನುಭವಗಳೆರಡನ್ನೂ ಕಟ್ಟಿ ಕೊಡುವ ವಿಶಿಷ್ಟ ವಾದ್ಯ.

ಭಾರತೀಯ ಸಂಗೀತ ಲೋಕಕ್ಕೆ ಇದನ್ನು ಪರಿಚಯಿಸಿದವರು ನೀಲಾದ್ರಿ ಕುಮಾರ್. ಝಿಟಾರನ್ನು ಕೇಂದ್ರವಾಗಿಟ್ಟುಕೊಂಡು ‘ವೇವ್ಸ್’ ಹೆಸರಿನಲ್ಲಿ ಫ್ಯೂಷನ್ ಸಂಗೀತದ ಅನೂಹ್ಯ ಅನುಭವ ಕಟ್ಟಿ ಕೊಡಲಿದ್ದಾರೆ.ಚಿಕ್ಕ ವಯಸ್ಸಿನಲ್ಲಿಯೇ ಸಿತಾರ್ ವಾದಕರಾಗಿ ತಮ್ಮ ಛಾಪು ಮೂಡಿಸಿದ್ದ ನೀಲಾದ್ರಿ ಕುಮಾರ್, ಹೆಸರಾಂತ ಸಿತಾರ್ ವಾದಕ ಕಾರ್ತಿಕ್ ಕುಮಾರ್ ಅವರ ಪುತ್ರ. ನಾಲ್ಕು ವರ್ಷದವರಿದ್ದಾಗಲೇ ತಂದೆಯೊಂದಿಗೆ ಕುಳಿತು ಸಿತಾರ್ ಕಛೇರಿ ಕೊಡುತ್ತಿದ್ದರು. ಆರನೇ ವಯಸ್ಸಿನಲ್ಲಿ ಪುದುಚೇರಿಯ ಅರಬಿಂದೋ ಆಶ್ರಮದಲ್ಲಿ ತಮ್ಮ ಮೊದಲ ಸ್ವತಂತ್ರ ಕಛೇರಿ ನಡೆಸಿಕೊಟ್ಟಿದ್ದರು.

ಸಿತಾರ್‌ನಿಂದ ಗಿಟಾರ್‌ನಂಥ ‘ರಾಕ್’ ಸಂಗೀತ ಸೃಷ್ಟಿಸುವ ವಾದ್ಯವನ್ನು ರೂಪಾಂತರಿಸಿದ ನೀಲಾದ್ರಿ ಕುಮಾರ್ ಅದರ ಮೂಲಕವೇ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸಿತಾರ್‌ನ 20 ತಂತಿಗಳನ್ನು ಐದಕ್ಕೇ ಇಳಿಸಿ, ಗಿಟಾರ್‌ನಂಥ ಧ್ವನಿ ಬರಲು ವಿದ್ಯುತ್ ಪಿಕಪ್ ಅಳವಡಿಸಿದ್ದರು. 2008ರಲ್ಲಿ ಝಿಟಾರ್ ಹೆಸರಿನ ಆಲ್ಬಂ ಸಹ ಅವರು ಹೊರ ತಂದಿದ್ದರು.
ಸ್ಥಳ: ಚೌಡಯ್ಯ ಸ್ಮಾರಕ ಭವನ,
ಸಂಜೆ 6.30.
ಉಚಿತ ಪಾಸ್‌ಗಳಿಗೆ: 2341 3987, 98455 03987.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.