ಜಾಲಹಳ್ಳಿ ಇಂದು ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲೊಂದು. ಆದರೆ ಇದು ಆರಂಭವಾಗಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. ಇಟಲಿಯಲ್ಲಿ ಸೆರೆಸಿಕ್ಕ ಯುದ್ಧ ಕೈದಿಗಳನ್ನು ಭಾರತಕ್ಕೆ ತಂದು ಬೆಂಗಳೂರು ಹೊರವಲಯದ ಮೈದಾನದಲ್ಲಿ ಮುಳ್ಳುತಂತಿ ಬೇಲಿಗಳಿಂದ ಆವೃತ್ತವಾದ ಬಯಲು ಜೈಲಿನಲ್ಲಿ ಇಡಲಾಗಿತ್ತು. ಅದೇ ಜಾಲಹಳ್ಳಿ ಎಂಬ ಹೆಸರು ಪಡೆಯಿತು.

ಸಾಹಿತಿ ಕೆ. ವಿ. ಅಯ್ಯರ್ ಅವರು 1920ರಲ್ಲಿ ಚಾಮರಾಜಪೇಟೆಯಲ್ಲಿ ವ್ಯಾಯಾಮ ಶಾಲೆಯನ್ನು ಪ್ರಾರಂಭಿಸಿದರು. ಅದು ಈಗಿನ ಜೆ ಸಿ ರಸ್ತೆಗೆ ಸ್ಥಳಾಂತರವಾಯಿತು. ಪ್ರಸ್ತುತ ಅಲ್ಲೊಂದು ಬೃಹತ್ ಕಟ್ಟಡವಿದೆ. ವ್ಯಾಯಾಮ ಶಾಲೆ ಇಲ್ಲ.

ಈಗ ಎಟಿಎಂ ಕಾಲ. ಎಲ್ಲಾ ಬ್ಯಾಂಕ್‌ಗಳೂ ತಮ್ಮ ಗ್ರಾಹಕರಿಗೆ ಈ ಸೇವೆ ಒದಗಿಸುತ್ತಿವೆ. ಎಚ್‌ಎಸ್‌ಬಿಸಿ (ಹಾಂಕಾಂಗ್ ಅಂಡ್ ಶಾಂಘಾಯ್ ಬ್ಯಾಂಕಿಂಗ್ ಕಾರ್ಪೊರೇಷನ್) ಬೆಂಗಳೂರಿನಲ್ಲಿ ಮೊದಲ ಎಟಿಎಂ ಸೇವೆಯನ್ನು 1996ನೇ ಮೇ 18 ರಂದು ಆರಂಭಿಸಿತು.

ಬಸವನಗುಡಿಯ ದೊಡ್ಡಬಸವಣ್ಣ ಮತ್ತು ದೊಡ್ಡಗಣಪತಿ ದೇವಾಲಯಗಳ ಮುಂದೆ ಬೇಡರ ಕಣ್ಣಪ್ಪನ ಆಲಯವೂ ಇದೆ. ಇದೇ ಸ್ಥಳದಲ್ಲೆ ಕಡಲೆಕಾಯಿ ಪರಿಷೆ ನಡೆಯುತ್ತದೆ.

ಮಹಾತ್ಮ ಗಾಂಧಿ ರಸ್ತೆಯಲ್ಲಿ ಈಗ ಅನಿಲ್ ಕುಂಬ್ಳೆ ವೃತ್ತವಿದೆ. ಅದರ ಹಿಂದಿನ ಹೆಸರು ಓರಿಯಂಟಲ್ ಸರ್ಕಲ್.

ಮೈಸೂರಿನಲ್ಲಿದ್ದ ಮೈಸೂರು ಪ್ರಾಂತ್ಯದ ರಾಜಧಾನಿಯನ್ನು 1831 ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.