ಬೆಂಗಳೂರು ಮೂಲದ ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯಪಟು ರೇವತಿ ಸತ್ಯು ಅವರು ಈ ವರ್ಷದ `ಮೇರಿ ಮೇಕ್ಲರಿ ಬೈವಾಟರ್ಸ್~ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಮೆರಿಕದ ಟೆಕ್ಸಾಸ್‌ನ ಡಾನ್ಸ್ ಕೌನ್ಸಿಲ್ ಐವರು ಅದ್ವಿತೀಯ ಕಲಾವಿದರಿಗೆ ಅವರ ಜೀವಮಾನದ ಸೇವೆಗಾಗಿ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತದೆ.

ಹಿರಿಯ ವೈದ್ಯ ಡಾ. ರಂಗಾಚಾರ್ ಮತ್ತು ಜನಪ್ರಿಯ ಸಮಾಜ ಸೇವಕಿ ವಿಮಲಾ ರಂಗಾಚಾರ್ ಅವರ ಮಗಳಾದ ರೇವತಿ ಸತ್ಯು, ನಗರದಲ್ಲೇ ವಿದ್ಯಾಭ್ಯಾಸ ಪೂರೈಸಿದ್ದಲ್ಲದೇ ಇಲ್ಲಿಯೇ ಭರತನಾಟ್ಯ ರಂಗಪ್ರವೇಶವನ್ನೂ ಮಾಡಿದವರು.

ಮದುವೆಯ ನಂತರ ಅಮೇರಿಕ ವಾಸಿಯಾಗಿ ಡಲ್ಲಾಸ್‌ನಲ್ಲಿ `ಆರತಿ ನೃತ್ಯ ಶಾಲೆ~ ಸ್ಥಾಪಿಸಿ ನೃತ್ಯ ಶಿಕ್ಷಣ ನೀಡುತ್ತ ಬಂದಿದ್ದಾರೆ. ಅನೇಕ ನೃತ್ಯ ನಾಟಕಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ನೃತ್ಯ ಕಾರ್ಯಕ್ರಮವನ್ನೂ ನೀಡಿ, ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಇಂಡಿಯನ್ ಕಲ್ಚರಲ್ ಹೆರಿಟೇಜ್ ಫೌಂಡೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರೂ ಹೌದು.

ಅಕ್ಟೋಬರ್ 2 ರಂದು ಡಲ್ಲಾಸ್‌ನ ಬ್ಲಾಕ್ ಡಾನ್ಸ್ ಥಿಯೇಟರ್‌ನಲ್ಲಿ ರೇವತಿ ಸತ್ಯು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.