ಸುರಕ್ಷಿತ ಚಾಲನೆಗೆ ಸಂಬಂಧಿಸಿದಂತೆ ಹಲವಾರು ಯಶಸ್ವಿ ಕಾರ್ಯಕ್ರಮ ನಡೆಸಿರುವ ಯಮಹಾ ಬೈಕ್ಸ್ ನಗರದ ಶಾಲಾ ಮಕ್ಕಳಿಗೆ ಸುರಕ್ಷಿತ ಚಾಲನೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.

ಬಸವೇಶ್ವರ ನಗರ ಕಾರ್ಮೆಲ್ ಹೈಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 120 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲ್ಲಿ ಅವರಿಗೆ ವಾಹನ ಚಾಲನೆ ಮಾಡುವಾಗ ಅನುಸರಿಸಬೇಕಾದ ಸುರಕ್ಷತೆ ಬಗ್ಗೆ ಉಪನ್ಯಾಸ ಹಾಗೂ ಪ್ರಾಯೋಗಿಕ ವಿಧಾನದ ಮೂಲಕ ತಿಳಿವಳಿಕೆ ನೀಡಲಾಯಿತು.

ವಿದ್ಯಾರ್ಥಿಗಳು ಯಮಹಾ ಟಿಟಿಆರ್ 50 ಮತ್ತು ಪಿಡಬ್ಲ್ಯೂ 50 ಬೈಕ್‌ಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡರು. ವಿದ್ಯಾರ್ಥಿಗಳ ಜೊತೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಸಹ ಇದರ ಹಿಂದಿನ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಜುನ್ ನಾಕಾಟಾ, `ದೇಶದಾದ್ಯಂತ ಯುವ ಜನತೆಯ ಅಭೂತಪೂರ್ವ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಸ್ವೀಕರಿಸಿದ ನಂತರ ನಾವು ಅಪಘಾತ ಮುಕ್ತ ಪರಿಸರ ನಿರ್ಮಿಸುವ ಸಲುವಾಗಿ ಮಕ್ಕಳಿಗೆ ವೈಎಸ್‌ಆರ್‌ಎಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.