ರಸಿಕ ಅಕಾಡೆಮಿ ಆಫ್ ಫರ್‌ಫಾರ್ಮಿಂಗ್ ಆರ್ಟ್ಸ್: ಶುಕ್ರವಾರ ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಕಿರಣ್ ಅವರ ಶಿಷ್ಯೆ ಮಾನಸ ವಿನೋದ್ ಅವರ ಭರತನಾಟ್ಯ ರಂಗಪ್ರವೇಶ.
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 6.30.

ಬ್ಲೇಬೇಡ್ ಮಾಸ್ಟರ್ಸ್
ಮಕ್ಕಳ ಆಟಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫನ್‌ಸ್ಕೂಲ್ ಇಂಡಿಯಾ ಬೇಬ್ಲೇಡ್ ಪ್ರಿಯರಿಗಾಗಿ ಶುಕ್ರವಾರ `ಬೇಬ್ಲೇಡ್ ಮೆಂಟಲ್ ಮಾಸ್ಟರ್ಸ್ ಸ್ಪರ್ಧೆ~ ಆಯೋಜಿಸಿದೆ.

6ರಿಂದ 14 ವರ್ಷದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರು ಆಕರ್ಷಕ ಬಹುಮಾನ ಪಡೆದುಕೊಳ್ಳಲಿದ್ದಾರೆ.

ಸ್ಥಳ: ಲ್ಯಾಂಡ್ ಮಾರ್ಕ್, ಫೋರಂ ಮಾಲ್. ಮಧ್ಯಾಹ್ನ 3. ಮಾಹಿತಿ ಮತ್ತು ನೋಂದಣಿಗೆ: 98865 35306.

ರಸಸಂಜೆ
ರಸಸಂಜೆ ವಾರ್ಷಿಕ ನೃತ್ಯೋತ್ಸವದಲ್ಲಿ ಭಾನುವಾರದಂದು ಭರತನಾಟ್ಯ ಮಾಡಿದ ಅಪರ್ಣಾ ಶಾಸ್ತ್ರಿ ಹಿರಿಯರಾದ ರಾಧಾ ಶ್ರೀಧರ್ ಅವರ ಶಿಷ್ಯೆ. ವಿದ್ವತ್ ಪರೀಕ್ಷೆಗೆ ಸಿದ್ಧವಾಗುತ್ತಿದ್ದು, ಕೆಲ ನತ್ಯ ರೂಪಕಗಳಲ್ಲಿ ಭಾಗವಹಿಸಿದ ಅನುಭವವೂ ಇದೆ. ತನ್ನ ಕಾರ್ಯಕ್ರಮವನ್ನು ಪುಷ್ಪಾಂಜಲಿಯೊಂದಿಗೆ ಪ್ರಾರಂಭಿಸಿ, ಕೀರವಾಣಿ ರಾಗದ ದೇವಿಸ್ತುತಿಯೊಂದಿಗೆ ಮುಂದುವರೆಸಿದಳು. ಗಾಯನದಲ್ಲಿ ಶ್ರೀವತ್ಸ, ನಟುವಾಂಗದಲ್ಲಿ ಪುಲಿಕೇಶಿ ಕಸ್ತೂರಿ, ಮೃದಂಗದಲ್ಲಿ ವಿ.ಆರ್. ಚಂದ್ರಶೇಖರ್, ಕೊಳಲಿನಲ್ಲಿ ಜಯರಾಂ ಹಾಗೂ ಪಿಟೀಲಿನಲ್ಲಿ ಡಾ. ನಟರಾಜ ಮೂರ್ತಿ ಉತ್ತಮವಾಗಿ ಸಹಕರಿಸಿದರು.

ಆಕರ್ಷಕ ಹರಿಕಥೆ
ಹನುಮ ಜಯಂತಿ ಅಂಗವಾಗಿ ಮಲ್ಲೆೀಶ್ವರ ಶ್ರೀರಾಮ ಮಂದಿರದಲ್ಲಿ ಕರ್ನಾಟಕ- ಹಿಂದುಸ್ತಾನಿ ಸಂಗೀತ, ಹರಿಕಥೆ, ಭಜನೆ, ಹಾರ್ಮೊನಿಯಂ, ತನಿ ಪಿಟೀಲು, ನೃತ್ಯ, ಪ್ರವಚನ ನಡೆಯುತ್ತಿವೆ.

ಇಲ್ಲಿ ಹರಿಕಥೆ ಮಾಡಿದ ಬೇಲೂರು ವಸಂತಲಕ್ಷ್ಮಿ ಸಂದರ್ಭಕ್ಕೆ ಹೊಂದುವಂತೆ ಹನುಮದ್ ವಿಲಾಸ ಆಯ್ದು ಸ್ವಾರಸ್ಯಕರವಾಗಿ ಕಥೆ ಹೆಣೆಯುತ್ತಾ, ಸಂಗೀತದಿಂದ ರುಚಿ ವರ್ಧನೆ ಮಾಡಿ, ಕೇಳುಗರ ಮೆಚ್ಚುಗೆಗೆ ಪಾತ್ರರಾದರು. ಶ್ರೀನಿವಾಸ್ (ಹಾರ್ಮೋನಿಯಂ) ಮತ್ತು ಸತೀಶ್ (ತಬಲಾ) ಪಕ್ಕ ವಾದ್ಯಗಳಲ್ಲಿ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.