ಮಂಜು ಮುಸುಕಿದ ಕಾಫಿ ತೋಟ, ಮಳೆ ತೊಳೆದ ಬೆಟ್ಟಗಳು, ನೆನೆದ ನೆಲದ ತೇವ ತುಂಬಿದ ಸುವಾಸನೆ ಮತ್ತು ಗುನುಗುಡುವ ಮಳೆ ನಡುವೆ ಹಬೆಯಾಡುವ ಬಿಸಿ ಕಾಫಿ ಜೊತೆಗೆ ಗರಿ ಗರಿ ಪಕೋಡಾವನ್ನು ಸೇವಿಸಲು ಹೇಳಿ ಮಾಡಿಸಿದ ಕೊಡಗಿನ ಪ್ರಾಕೃತಿಕ ಚೆಲುವಿನಂತೆ ಅಲ್ಲಿಯ ಹಾಗೆಯೇ ಅಲ್ಲಿನ ವೈವಿಧ್ಯಮಯ ಖಾದ್ಯಗಳೂ ವಿಶಿಷ್ಟ.

ಸ್ಯಾಂಕಿ ರಸ್ತೆಯ ಐಟಿಸಿ ವಿಂಡ್ಸರ್ ಮ್ಯಾನರ್‌ನ ದಕ್ಷಿಣ್ ರೆಸ್ಟೊರೆಂಟ್‌ನಲ್ಲಿ ಈಗ ಕೊಡಗಿನ ಅಪರೂಪದ ಅಡುಗೆಯ ಘಮಘಮ. ಸೆ.18ರ ವರೆಗೆ ನಡೆಯಲಿರುವ ಕೊಡಗು ಆಹಾರೋತ್ಸವದಲ್ಲಿ ಖ್ಯಾತ ಬಾಣಸಿಗರಾದ ವಿಜಯ್ ಮಲ್ಹೋತ್ರ, ಜಾರ್ಜ್ ಜಯಸೂರ್ಯ ಹಾಗೂ ರಾಮದಾಸ್ ಅವರ ಕೈಯಲ್ಲಿ ತಯಾರಾದ ಬಗೆಬಗೆಯ ಕೊಡವ ರುಚಿಗಳನ್ನು ಮೆಲ್ಲಬಹುದು.

ಸುಗ್ಗಿಹಬ್ಬ ಹುತ್ತರಿಗೆ ಮೊದಲಿನ ಕೈಲ್ ಪೋಳ್ದ್‌ನಲ್ಲಿ ಮಾಂಸಾಹಾರಿ ಖಾದ್ಯಗಳೇ ವಿಶೇಷ. ನಲ್ಲಮೊಜು ಕೋಜಿ ಕರಿ ಅಥವಾ ಕುಮ್ಮುಕರಿಯೊಂದಿಗೆ ಅಕ್ಕಿ ರೊಟ್ಟಿ ಸೇವಿಸುತ್ತಿದ್ದರೆ ಅದರ ಮಜವೇ ಬೇರೆ. ಅವೆಲ್ಲವನ್ನೂ ಇಲ್ಲಿ ಸವಿಯಬಹುದು.
ಮಾಹಿತಿಗೆ: 2226 9898.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.