ಟಿ. ಜಾನ್ ಕಾಲೇಜಿನ ಮನೋರೋಗ ನರ್ಸಿಂಗ್ ವಿಭಾಗದ ವತಿಯಿಂದ ಇತ್ತೀಚೆಗೆ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಥಾ ನಡೆಯಿತು.

ನಗರದ ಮೀನಾಕ್ಷಿ ಮಾಲ್ನಿಂದ ಬನ್ನೇರುಘಟ್ಟವರೆಗೆ ಜಾಥಾ ನಡೆಯಿತು. ಅಪೀಮು, ಗಾಂಜಾದಂತಹ ಡ್ರಗ್ಸ್, ಸಿಗರೇಟು, ಬೀಡಿ, ಮದ್ಯಪಾನ ಹಾಗೂ ಇನ್ನಿತರ ತಂಬಾಕು ಸೇವನೆ ಚಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶವಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಪಿ. ನೀಲಾವತಿ ಮಾತನಾಡುತ್ತಾ, `ಹದಿಹರೆಯದ ಯುವಕ ಯುವತಿಯರು ಅಕ್ರಮ ಡ್ರಗ್ಗಳನ್ನು ಉಪಯೋಗಿಸುವ ಸಂಭವ ಹೆಚ್ಚು. ಇವರಿಗೆ ಮುಂದಿನ ದುಷ್ಪರಿಣಾಮಗಳ ಅರಿವಿರುವುದಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಜಾಥಾದ ಉದ್ದೇಶ~ ಎಂದರು.

ಬಿಎಸ್ಸಿ (ನರ್ಸಿಂಗ್) 3ನೇ ವರ್ಷದ ವಿದ್ಯಾರ್ಥಿಗಳು, ಪಿಬಿ ಬಿಎಸ್ಸಿ (ಎನ್)ನ 2ನೇ ವರ್ಷದ ವಿದ್ಯಾರ್ಥಿಗಳು ಹಾಗೂ ಎಂಎಸ್ಸಿ (ಎನ್) (ಮನೋರೋಗ ನರ್ಸಿಂಗ್ ವಿಭಾಗದ) 2ನೇ ವರ್ಷದ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

ದೈಹಿಕ ಶಿಕ್ಷಕರಾದ ಚಿನ್ನಿ ಶ್ರೀಧರನ್, ಸಹಾಯಕ ಪ್ರಾಧ್ಯಾಪಕರಾದ ಜೋಸೆಫಿನ್ ಸಿಂತಿಯಾ, ಮನೋರೋಗ ನರ್ಸಿಂಗ್ ವಿಭಾಗದ ಕ್ಲಿನಿಕಲ್ ಶಿಕ್ಷಕರಾದ ಬಿನ್ಸಿ ವರ್ಗೀಸ್ ಜಾಥಾದ ಮುಂದಾಳತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.