ನಗರದ ಗರುಡ ಮಾಲ್‌ನಲ್ಲೀಗ ಶಾಪಿಂಗ್ ಉತ್ಸವ ಆರಂಭವಾಗಿದೆ. ಈ ಬಾರಿ ಉತ್ಸವದ ಪ್ರಯುಕ್ತ ದೇಶದ ವೀರ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ ‘ಗರುಡ ಸಲ್ಯೂಟ್ಸ್ ಇಂಡಿಯನ್ ಸೋಲ್ಜರ್ಸ್’ ಹೆಸರಿನ ಕಾರ್ಯಕ್ರಮ ಆಯೋಜಿಸಿದೆ.

ಡಿ.೧೪ರಿಂದ ಆರಂಭವಾಗಿರುವ ಉತ್ಸವ ಜನವರಿ 1ರವರೆಗೆ ನಡೆಯಲಿದೆ. ಉತ್ಸವಕ್ಕಾಗಿ ಕಾರ್ಗಿಲ್ ಕದನ, ನೈಸರ್ಗಿಕ ವಿಕೋಪ ಎದುರಾದಾಗ ಜನರ ಪ್ರಾಣ, ಆಸ್ತಿ ರಕ್ಷಿಸುವ ಭಾರತೀಯ ಯೋಧರ ಶ್ರಮದಾನ, ರಾಷ್ಟ್ರಧ್ವಜಕ್ಕೆ ಸಲ್ಯೂಟ್ ಮಾಡುತ್ತಿರುವ ಸೈನಿಕರ ಪ್ರತಿಕೃತಿಗಳು ಮಾಲ್‌ನ ಹೊರಭಾಗದ ಆಕರ್ಷಣೆಯಾಗಿವೆ.

ಮಾಲ್‌ನ ಒಳಗೆ ಭಯೋತ್ಪಾದಕರ ದಾಳಿಗೆ ತುತ್ತಾದ ಮುಂಬೈನ ತಾಜ್ ಹೋಟೆಲ್, ಭಯೋತ್ಪಾದಕರಿಗೆ ಬಲಿಯಾದ ನಗರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ನಮಿಸುವ ಕಟೌಟ್‌ಗಳಿವೆ. ಅಲ್ಲದೇ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಸೇನಾ ಜನರಲ್‌ಗಳು, ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ಧ್ವಜ ಹಾಗೂ ಲಾಂಛನಗಳು, ಸೇನಾ ಬ್ಯಾಂಡ್, ಪದಕಗಳು, ಪ್ರಶಸ್ತಿ ಕುರಿತ ಮಾಹಿತಿ, ವಾಯು ಸೇನೆಯ ಫೈಟರ್ ಜೆಟ್ ಕುರಿತ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜ್ಯದ ೨೯ ಸೈನಿಕರ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶವೂ ಕಾರ್ಯಕ್ರಮದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.