ಎರಡು ಹೊತ್ತು ಹೊಟ್ಟೆ ತುಂಬಾ ಉಣ್ಣಲು ಬಡವರು ಹಿಂದೆ, ಮುಂದೆ ನೋಡಬಹುದು. ಆದರೆ, ನಗರದ ಸಿರಿವಂತರ ಮನೆಯ ನಾಯಿಗಳು ಮಾತ್ರ ಯಾವ ರಾಜಕುಮಾರ, ರಾಜಕುಮಾರಿಗೆ ಕಡಿಮೆ ಇಲ್ಲದಂತೆ ಬೆಳೆಯುತ್ತವೆ. ನಿತ್ಯ ಶಾಂಪೂವಿನಿಂದ ಸ್ನಾನ, ತಿನ್ನಲು ಬ್ರಾಂಡೆಡ್ ಆಹಾರ, ಕಾರಿನಲ್ಲಿ ಓಡಾಟ.

ಈ ನಾಯಿಗಳ ಮಾಲೀಕರು ಮಕ್ಕಳನ್ನಾದರೂ ಕೆಳಗೆ ಇಳಿಸಬಹುದು. ಆದರೆ, ಈ ಮುದ್ದಿನ ನಾಯಿಗಳನ್ನು ಮಾತ್ರ ತೊಡೆ ಮೇಲೆ ಕುರಿಸಿಕೊಂಡು ಕಂದಮ್ಮಗಳಂತೆ ಕಣ್ಣಲ್ಲಿ, ಕಟ್ಟಿಟ್ಟು ಮುಚ್ಚಟೆಯಿಂದ ಸಾಕುತ್ತಾರೆ.

ಇಂತಹ ಸಿರಿವಂತ ನಾಯಿಗಳಿಗಾಗಿಯೇ ಫೋರಂ ವ್ಯಾಲ್ಯೂ ಮಾಲ್, ವೈಟ್ಫೀಲ್ಡ್ ಕ್ಲಬ್ ಸಹಯೋಗದಲ್ಲಿ ಶನಿವಾರ `ಮೆಗಾ ಪೆಟ್ ಶೋ~ ಆಯೋಜಿಸಿದೆ. ಮೊದಲ ಸುತ್ತಿನಲ್ಲಿ ನಾಯಿಗಳು ಚಿತ್ರ, ವಿಚಿತ್ರ ಡ್ರೆಸ್ ಧರಿಸಿ ರ್ಯಾಂಪ್ ಏರುತ್ತವೆ. ಅತ್ಯುತ್ತಮವಾಗಿ ಡ್ರೆಸ್ ಹಾಗೂ ವಿಚಿತ್ರ ಡ್ರೆಸ್ ಹೀಗೆ ಎರಡು ವಿಭಾಗಗಳಲ್ಲಿ ಬಹುಮಾನ ಘೋಷಿಸಲಾಗುತ್ತದೆ.

`ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್~ ಸುತ್ತಿನಲ್ಲಿ ಆರೋಗ್ಯವಂತ, ಫಿಟ್ನೆಸ್ ಕಾಪಾಡಿಕೊಂಡ ನಾಯಿಗಳಿಗೆ ಬಹುಮಾನ ಘೋಷಿಸಲಾಗುತ್ತದೆ. ಬೆಂಗಳೂರು ಪೆಟ್ ಹಾಸ್ಪಿಟಲ್ನ ಡಾ. ನರೇಂದ್ರ ರಾವ್ ತೀರ್ಪುಗಾರರಾಗಿರುತ್ತಾರೆ. `ಟ್ರಿಕ್ ಆ್ಯಂಡ್ ಟ್ರೀಟ್~ ಸುತ್ತಿನಲ್ಲಿ ನಾಯಿಗಳು ವಿಚಿತ್ರ ಟ್ರಿಕ್ ಮಾಡಬೇಕಾಗುತ್ತದೆ. ಅತಿ ವಿಧೇಯ ನಾಯಿ ಯಾವುದು ಎಂದು ನಿರ್ಧರಿಸಲು `ಹಿಸ್ ಮಾಸ್ಟರ್ಸ್ ವಾಯ್ಸ~ ಸ್ಪರ್ಧೆ ಇರುತ್ತದೆ. ಸ್ಥಳ: ಫೋರಂ ವ್ಯಾಲ್ಯೂ ಮಾಲ್, ವೈಟ್ಫೀಲ್ಡ್. ಸಂಜೆ 4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.