ವಾರ್ತಾ ಇಲಾಖೆ ನಿರ್ದೇಶಕರೂ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಡಾ. ಮುದ್ದುಮೋಹನ್ ಶ್ರೀರಾಮ ಸೇವಾ ಮಂಡಳಿಯ ಆಶ್ರಯದಲ್ಲಿನೀಡಿದ ಗಾಯನ ಕಛೇರಿ ಅವರೊಬ್ಬ ಪರಂಪರಾ ನಿಷ್ಠ ಹಿಂದುಸ್ತಾನಿ ಗಾಯಕರೂ ಹೌದು ಎಂಬ ಅಂಶವನ್ನು ಮತ್ತೆ ಸಾಬೀತು ಮಾಡಿತು.

ಅವರ ನಿರುದ್ವೇಗದ ಯಾವುದೇ ಸೋಗಿಲ್ಲದ ಸಂಪ್ರದಾಯಶೀಲ ನಿರೂಪಣೆಗಳು ಸುಂದರವಾಗಿದ್ದವು. ಅವರ ಗಾಯನದಲ್ಲಿ ಗ್ವಾಲಿಯರ್ ಮತ್ತು ಕಿರಾಣಾ ಘರಾಣೆಗಳ ಹಿತವಾದ ಮಿಶ್ರಣ, ಹಿಂದುಸ್ತಾನಿ ಸಂಗೀತದ ಸೌಂದರ್ಯ ಮತ್ತು ಕಲೆ ತುಂಬಿ ಬಂದವು. ಅವರ ಗಾಯನ ವೈಖರಿ ಒಮ್ಮೊಮ್ಮೆ ಅವರ ಗುರುಗಳಾದ ಪಂಡಿತ್ ಬಸವರಾಜ ರಾಜಗುರುಗಳನ್ನು ನೆನಪಿಸುತ್ತಿತ್ತು.

ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಮತ್ತು ರಾಜೇಂದ್ರ ನಾಕೋಡ (ತಬಲಾ) ಅವರ ಕ್ರಿಯಾಶೀಲ ಸಾಥ್ನೊಡನೆ ಪೂರಿಯಾಕಲ್ಯಾಣ್ (ಹೋ ವನ್ ಲಾಗೆ ವಿಳಂಬಿತ್ ಮತ್ತು ಮನುವಾ ಭಜನಕರ ದ್ರುತ್) ಸಂಧ್ಯಾ ರಾಗವನ್ನು ಸಾರಗರ್ಭಿತವಾಗಿ ಚಿತ್ರಿಸಿದರು.

ಬೋಲ್, ಆಲಾಪ್, ಬೋಲ್ತಾನ್ ಮತ್ತು ಸರಿಗಮಗಳ ಅಲಂಕರಣವು ರಾಗ ಮತ್ತು ಲಯಗಳ ಭಾವಗಳನ್ನು ಒಟ್ಟೊಟ್ಟಿಗೆ ಮೂಡಿಸಿತು. ನಂತರದ ಛೋಟಾ ಖಯಾಲ್ (ಜೋಗ್, ಸಾವರೆ ಕನ್ಹಾಯಿ), ಕೌಶಿಕೀ ಕಾನಡಾ (ಸೋ ಘಡಿ) ಶ್ರವಣಪ್ರಿಯವಾಗಿದ್ದವು.

ಠುಮ್ರಿ ಮತ್ತು ಹರಿದಾಸ ಪದಗಳನ್ನು ಹಾಡಿದ ಮುದ್ದುಮೋಹನ್ ಅವರು ತಮ್ಮ ಅತ್ಯಂತ ಫೇವರಿಟ್ ಐಟಂ ಕಾನಡಾತ್ರಯ (ಆಭೋಗಿ, ನಾಯಕಿ ಮತ್ತು ದರ್ಬಾರಿ)ದಲ್ಲಿ ವಾದಿರಾಜರ ಸಾರಿದೆನೊ ನಿನ್ನ ಪದವನ್ನು ಹದಯಂಗಮವಾಗಿ ಮಂಡಿಸಿದರು.

ಮೆರೆದ ಸುಭಾಷಿಣಿ
ನುರಿತ ಭರತನಾಟ್ಯ ಕಲಾವಿದೆ ಸುಭಾಷಿಣಿ ವಸಂತ್ ಅವರು ಎಂಇಎಸ್ ಕಲಾವೇದಿಯಲ್ಲಿ ನರ್ತಿಸಿದಾಗ ಅವರ ನೃತ್ತ, ನೃತ್ಯ ಮತ್ತು ಅಭಿನಯ ಸಾಮರ್ಥ್ಯ ಮತ್ತು ಪ್ರೌಢಿಮೆಗಳು ಮೆರೆದವು. ವಿದ್ಯುತ್ ವ್ಯತ್ಯಯದ ನಡುವೆಯೂ ತಡವರಿಸದೆ ತದೇಕತೆಯಿಂದ ಅವರು ತಂಜಾವೂರು ಸೋದರರ ರಾಗಮಾಲಿಕಾ ವರ್ಣವನ್ನು (ಸಾಮಿ ನಿನ್ನೆ ಕೋರಿನಾನುರಾ ) ಅಚ್ಚುಕಟಾಗಿ ವಿಸ್ತರಿಸಿದರು. ತನ್ನ ನಾಯಕ ಶಿವನನ್ನು ನಾಯಕಿಯು ನೇರವಾಗಿ ತನ್ನ ಬಳಿಗೆ ವಾಪಸಾಗುವಂತೆ ಮನವಿ ಮಾಡಿಕೊಳ್ಳುತ್ತಾ ಅವನನ್ನು ಸ್ತುತಿಸುವ ಸನ್ನಿವೇಶವನ್ನು ಸೂಕ್ತವಾದ ಸಂಚಾರಿಗಳೊಂದಿಗೆ ನಿರ್ಮಿಸಿದರು.

ಲಾಲಿತ್ಯ ಮತ್ತು ನಾಜೂಕಿನ ನೃತ್ತ, ನೃತ್ಯದ ಜೊತೆಗೆ ಅವರ ಪರಿಣಾಮಕಾರಿ ಅಭಿನಯ ಎದ್ದುಕಂಡಿತು.

ಆಡಿಸಿದಳೆಶೋದೆ ಮತ್ತು ಪಾಪನಾಶಂ ಶಿವನ್ ಅವರ ನವರಸಕನ್ನಡ ರಚನೆ ಆತ್ಮೀಯವಾಗಿದ್ದ ಅಭಿನಯದಿಂದ ಕಂಗೊಳಿಸಿತು. ಕದನ ಕುತೂಹಲ ತಿಲ್ಲಾನದೊಂದಿಗೆ ಸಮಾಪ್ತವಾದ ಅವರ ಕಾರ್ಯಕ್ರಮದಲ್ಲಿ ನರ್ತಕ-ಗುರು ಪ್ರವೀಣ್ಕುಮಾರ್ (ನಟುವಾಂಗ), ವಸುಧಾ (ಗಾಯನ), ನರಸಿಂಹಮೂರ್ತಿ (ಪಿಟೀಲು) ಮತ್ತು ಲಿಂಗರಾಜು (ಮೃದಂಗ) ಅವರ ಸಹಕಾರ ಮೆಚ್ಚಿಸಿತು.

ಪ್ರಗಲ್ಭ ಗಾಯನ
ಶ್ರೀಶೇಷಾದ್ರಿಪುರಂ ರಾಮಸೇವಾ ಸಮಿತಿಯ 63ನೆಯ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಹಿರಿಯ ಗಾಯಕಿ ನೀಲಾ ರಾಂಗೋಪಾಲ್ ಅವರು ಶುದ್ಧ ಸಂಪ್ರದಾಯ ಮತ್ತು ಶಾಸ್ತ್ರೀಯತೆಯ ಗಟ್ಟಿ ತಳಹದಿಯ ಮೇಲೆ ಗಮನಾರ್ಹವಾಗಿದ್ದ ರಾಗಗಳು ಮತ್ತು ಕೃತಿಗಳನ್ನು ಹಾಡಿ ತಮ್ಮ ಅನನ್ಯತೆಯನ್ನು ಪ್ರಕಟಿಸಿದರು.

ಉಗಾಭೋಗದೊಂದಿಗೆ ಆರಂಭಿಸಿ ಕಲ್ಯಾಣಿ ವರ್ಣವನ್ನು ಹಾಡಿದ ನಂತರದ ಅವರ ರಾಗ, ಸಾಹಿತ್ಯ ಮತ್ತು ಸ್ವರವಿಸ್ತಾರಗಳು ಸುಖ ನೀಡಿದವು. ಖರಹರಪ್ರಿಯ (ಅರಣಪೊರುಲೆ), ದೇವಗಾಂಧಾರಿ (ಕಾಯೋರಕ್ಷಣಂ), ಪೂರ್ವಿಕಲ್ಯಾಣಿ (ಪದ್ಮಾವತಿರಮಣಂ) ಅವರ ಪ್ರಗಲ್ಭ ಪಾಂಡಿತ್ಯ ಮತ್ತು ಕೌಶಲ್ಯಕ್ಕೆ ಸಾಕ್ಷಿ ನುಡಿಯಿತು.

ತ್ಯಾಗರಾಜರ ಅಪರೂಪದ ಕೀರ್ತನೆ ಯಜ್ಞಾದುಲು (ಜಯಮನೋಹರಿ) ಮತ್ತು ನಿನ್ನಾಡನೆಲ (ಕನ್ನಡ) ಅಪೂರ್ವ ಅನುಭವ ನೀಡಿದವು. ಶಂಕರಾಭರಣದ ರಾಗ, ತಾನ ಮತ್ತು ಪಲ್ಲವಿಯಲ್ಲಿ (ಹಿಂದೋಳ, ಬೆಹಾಗ್ ಮತ್ತು ಸಿಂಧುಭೈರವಿ ರಾಗಮಾಲಿಕಾ ಸ್ವರ ಸಹಿತ) ಅವರ ಕಲಾತ್ಮಕತೆ ಸಮಗ್ರವಾಗಿ ಮಿಂಚಿತು.

ಚಾರುಲತಾ ರಾಮಾನುಜಂ (ಪಿಟೀಲು), ಗಣೇಶ್ (ಮೃದಂಗ) ಮತ್ತು ವ್ಯಾಸವಿಠ್ಠಲ (ಖಂಜರಿ) ಅವರು ಕಛೇರಿಯ ಮೆರುಗನ್ನು ಹೆಚ್ಚಿಸಿದರು.

ಶ್ರುತಿ ಸೇರಿದ ಭರತನಾಟ್ಯ
ಸಮರ್ಥ ಭರತನಾಟ್ಯ ಗುರು ನಾಗಭೂಷಣ್ ಅವರ ಪ್ರತಿಭಾ ಸಂಪನ್ನ ಶಿಷ್ಯೆ ಶ್ರುತಿ ಶ್ರೀನಿವಾಸನ್ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ತಮ್ಮ ಕಾರ್ಯಕ್ರಮದಲ್ಲಿ ರಾಗಮಾಲಿಕಾ ಶಬ್ದದ ಮೂಲಕ ಮುರುಘನನ್ನು ಅಭಿನಂದನೀಯವಾಗಿ ಚಿತ್ರಿಸಿದರು.

ಸಮತೋಲನ ಹಾಗೂ ವೈವಿಧ್ಯದ ನೃತ್ತ, ನೃತ್ಯ ಮತ್ತು ಅಭಿನಯದಿಂದ ಭೈರವಿ ವರ್ಣ (ನಂದಗೋಪಾಲನೈ)ವನ್ನು ಸಜ್ಜುಗೊಳಿಸಿ ಕೃಷ್ಣನ ವಿವಿಧ ಲೀಲೆಗಳನ್ನು ಉತ್ತಮವಾಗಿ ಅಭಿನಯಿಸಿದರು. ಯಮನೆಲ್ಲಿ, ತ್ಯಾಗರಾಜರ ಸೀತಾ ಕಲ್ಯಾಣ (ಕುರಂಜಿ) ಮತ್ತು ಬಂದಾವನಿ ತಿಲ್ಲಾನ ಸೊಗಸೆನಿಸಿದವು. ಗುರು ನಾಗಭೂಷಣ್ (ನಟುವಾಂಗ ಮತ್ತು ಗಾಯನ), ರಮ್ಯಾ (ನಟುವಾಂಗ) ಮುಂತಾದವರ ಹಿನ್ನೆಲೆ ಸಹಕಾರ ಉಪಯುಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.