ಸುಚಿತ್ರ ಕಲಾಕೇಂದ್ರ: ಶನಿವಾರ ತಿಂಗಳ ಸಾಹಿತ್ಯ ಸಂಜೆಯಲ್ಲಿ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸಂವಾದ. ಕಾವ್ಯವಾಚನ.

ಶಿವಮೊಗ್ಗದಲ್ಲಿ ಜನಿಸಿದ ಭಟ್ಟರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಸಾಹಿತಿಯಾಗಿಯೂ ಜನಪ್ರಿಯರು. ಅಲ್ಲದೇ ವಿಮರ್ಶಕ, ಅನುವಾದಕರಾಗಿದ್ದಾರೆ. `ವೃತ್ತ~, `ಸುಳಿ~, `ಚಿತ್ರಕೂಟ~ ಸೇರಿದಂತೆ ಹಲವು ಕವನ ಸಂಗ್ರಹಗಳನ್ನು ಹೊರತಂದಿದ್ದಾರೆ. `ದೀಪಿಕಾ~, `ಭಾವಸಂಗಮ~, `ಬಂದೇ ಬರತಾವ ಕಾಲ~ ಮುಂತಾದ ಮಧುರ ಭಾವಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಷೇಕ್ಸ್‌ಪಿಯರ್, ಟಿ.ಎಸ್. ಈಲಿಯಟ್ ಮತ್ತು ಯೇಟ್ಸ್‌ರಂಥಹ ಲೇಖಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಭಾವಗೀತದ ಪ್ರಚಾರ ಕಾರ್ಯದಲ್ಲಿ ವಿಶೇಷವಾಗಿ ದುಡಿದಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯು ಅವರ ಕೃತಿಗಳಿಗೆ ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮಡಿಲಿಗೆ ಸಂದಿದೆ.

ಸ್ಥಳ: ಕಿ.ರಂ. ನುಡಿಮನೆ, ಸುಚಿತ್ರ ಆವರಣ, ನಂ36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.