ದಣಿದ ಮೈ ಮನಸಿಗೊಂದು ಸ್ಪೇಸ್ ನೀಡುವ ಸ್ಪಾ ಭೇಟಿ ಇಂದಿಗೂ ಬಹುತೇಕ ಜನರಿಗೆ ಕುತೂಹಲದ ತಾಣವೇ ಹೌದು. ಸುಗಂಧ, ಸಂಗೀತ, ಮರ್ಜನ ಹಾಗೂ ಸ್ನಾನ... ಇವಿಷ್ಟೂ ಸೇವೆ ನೀಡುವ ಸ್ಪಾಗೆ ನೀವು ಹೋಗಿದ್ದೀರಾ?

ಕಾಲಿಟ್ಟೊಡನೆ, ಕಿವಿಗೆ ಇಂಪಾದ ಮೆಲುದನಿಯ ಸಂಗೀತ. ಬಿಳಿ, ಗುಲಾಬಿ ಹಾಗೂ ಬೆಳ್ಳಿ ಬಣ್ಣಗಳ ಅಲಂಕಾರ. ಕಣ್ಣಿಗೆ ತಂಪೆನಿಸುವ, ಮನಸಿಗೆ ಹಿತವೆನಿಸುವ ಅಲಂಕಾರ. ಪರಿಶುದ್ಧ, ಪ್ರೀತಿ ಹಾಗೂ ಸಂತೋಷದ ಸಂಕೇತದ ಈ ಬಣ್ಣಗಳು ಹೋದೊಡನೆ ಶಾಂತವೆನಿಸುತ್ತವೆ.

ಬೆಂಗಳೂರಿನ ಗೌಜು, ಗದ್ದಲ ಎಲ್ಲವೂ ಇಲ್ಲಿ ದೂರ. ಬಲು ದೂರ. ಸ್ಪಾದೊಳಗೆ ಕಾಲಿಟ್ಟ ಕೂಡಲೇ ನಗುಮುಖದ ಪರಿಚಾರಕರು ಬಂದು ಮೆನು ನೀಡುತ್ತಾರೆ ನಿಮಗೆ ಅಗತ್ಯವಿರುವ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲು. ಅದಕ್ಕೂ ಮುನ್ನ ಸಣ್ಣದೊಂದು ಸಮಾಲೋಚನೆ. ಬಂದ ಉದ್ದೇಶ ಸ್ವಾಸ್ಥ್ಯವೇ? ಸೌಂದರ್ಯವೇ ಎಂಬುದು. ಎರಡಕ್ಕೂ ಪರಿಹಾರ ದೊರೆಯುವುದು ನಿಜ. ಆದರೆ ಸೇವೆಗಳ ಆಯ್ಕೆಗೆ ಈ ಸಮಾಲೋಚನೆ ಅತ್ಯವಶ್ಯ. ಪೆಡಿಕ್ಯೂರ್, ಮೆನಿಕ್ಯೂರ್, ಹೆಡ್ ಮಸಾಜ್, ಫೇಶಿಯಲ್, ಬಾಡಿ ಮಸಾಜ್ ಮುಂತಾದ ಹಲವು ಆಯ್ಕೆಗಳು ಲಭ್ಯ ಇವೆ.

ಮನಸಿನಿಂದ ದೇಹಕ್ಕೆ ಸೌಂದರ್ಯ ಪಯಣ ಎಂಬುದು ಸಿನೋರಾ ಅವರ ಅಡಿ ಬರಹ. ನಿಮ್ಮೊಳಗಿನ ಸೌಂದರ್ಯಕ್ಕೆ ಜೀವಂತಿಕೆ ನೀಡುವುದೇ ನಮ್ಮ ಉದ್ದೇಶ ಎನ್ನುವುದು ಈ ಸ್ಪಾ ಮಾತಾಗಿದೆ.

ದಿನನಿತ್ಯದ ಧಾವಂತದ ಬದುಕಿನಲ್ಲಿ ನಾವೆಲ್ಲವನ್ನೂ ಕರಾರುವಕ್ಕಾಗಿ, ಕಟ್ಟುನಿಟ್ಟಾಗಿ ಮಾಡುವುದಕ್ಕೆ ಒಗ್ಗಿ ಹೋಗಿರುತ್ತೇವೆ. ಹಾಗೆ ಮಾಡುವುದು ಅಗತ್ಯವೂ ಹೌದು. ಆದರೆ ಈ ಧಾವಂತದಲ್ಲಿ ನಾವು ನಮ್ಮನ್ನೇ ಮರೆಯುತ್ತೇವೆ. ಕಾರು, ವಾಹನಗಳಿಗೆ ಸರ್ವಿಸಿಂಗ್ ಬೇಕಿರುವಂತೆ ನಮ್ಮ ಮೈ ಮನಸುಗಳಿಗೂ ಒಂದು ಆರೈಕೆ ಬೇಕು. ದೇವರ ಧ್ಯಾನ, ಕಸರತ್ತು, ಆಗಾಗ ಅಭ್ಯಂಜನ, ಮರ್ಜನ ಮುಂತಾದವುಗಳು ಹಬ್ಬ ಹರಿದಿನಗಳ ನೆಪದಲ್ಲಿಯಾದರೂ ಮೊದಲು ಜೀವನದಲ್ಲಿ ಹಾಸುಹೊಕ್ಕಿದ್ದವು. ಆದರೆ ಇದೀಗ ಇವೆಲ್ಲವೂ ಕೇವಲ ಸಂಪ್ರದಾಯ ಎಂಬ ನೆಪದಲ್ಲಿ ಹಿಂದಕ್ಕೆ ಸರಿದಿವೆ.

ಪರಿಣಾಮ ಮಾನಸಿಕವಾಗಿ ಖಿನ್ನತೆ, ದೈಹಿಕವಾಗಿ ಏರೊತ್ತಡ, ಮಧುಮೇಹ, ನಿದ್ರಾಹೀನತೆ ಮುಂತಾದ ಜೀವನಶೈಲಿ ಸಂಬಂಧಿ ರೋಗಗಳಿಗೆ ಆಹ್ವಾನ

ನೀಡುವಂತಾಗುತ್ತದೆ. ಆಗಾಗ ಅಭ್ಯಂಜನವಾಗದಿದ್ದರೆ, ಅಕ್ಕರೆಯ ಆರೈಕೆಗೆ ಇಂಥ ಕೇಂದ್ರಗಳಿಗೆ ಭೇಟಿ ನೀಡುವುದು ಸುಲಭ ಪರಿಹಾರವಾಗಿದೆ.
ಸ್ಪಾಗಳ ಬಗ್ಗೆ ಇರುವ ಮೊದಲ ಆತಂಕವೆಂದರೆ ಎಲ್ಲಿ ಹೋಗಬೇಕು? ಎಷ್ಟು ಸುರಕ್ಷಿತ? ಮಸಾಜ್ ಮಾಡುವವರು ಯಾರು? ನೈರ್ಮಲ್ಯ ಹೇಗೆ ಕಾಪಾಡುತ್ತಾರೆ? ತೀರ ಖಾಸಗಿಯಾದ ಸ್ನಾನವನ್ನು ಇನ್ನೊಬ್ಬರ ನೆರವಿನೊಂದಿಗೆ ಮಾಡಬಹುದೇ?

ಇಂಥವೇ ಆತಂಕಗಳನ್ನು ಮುಕ್ತವಾಗಿ ಸ್ಪಾ ಆಡಳಿತದವರೊಂದಿಗೆ ಹಂಚಿಕೊಳ್ಳಬೇಕು. ಎಲ್ಲಕ್ಕೂ ಸಮಾಧಾನಕರ ಉತ್ತರ ದೊರೆತರೆ ಮಾತ್ರ ಮುಂದುವರಿಯಬೇಕು. ಉತ್ತಮ ಸ್ಪಾ ಸಲೂನ್ ಯಾವುದು ಎಂಬ ನಿರ್ಧಾರ ಮಾತ್ರ ನಿಮ್ಮದೇ ಆಗಿರಬೇಕು ಎನ್ನುತ್ತಾರೆ ಸ್ಪಾ ಒಡತಿ ಶೋಭಾ.

ನಮ್ಮಲ್ಲಿ ಮೊದಲು ಕೇವಲ ಮಹಿಳೆಯರಿಗೆ ಮಾತ್ರ ಎಂದಿತ್ತು. ಆದರೆ ಅವರಿಗೆ ಬಿಡಲು ಬಂದ ಪುರುಷರು ಇಲ್ಲಿಯ ಪರಿಸರ ಹಾಗೂ ಮಹಿಳೆಯರ ಅನುಭವ ಕೇಳಿ ತಮಗೂ ಅಂಥದ್ದೇ ಆರೈಕೆ ಬೇಕು ಎಂಬ ಒತ್ತಡ ತರುತ್ತಿದ್ದರು. ಆ ಕಾರಣಕ್ಕಾಗಿ ಇಂದಿರಾನಗರದಲ್ಲಿ ಮಹಿಳೆ ಮತ್ತು ಪುರುಷರಿಬ್ಬರಿಗೂ ಸ್ಪಾ ತೆರೆಯಲಾಗಿದೆ. ಸೇವೆಗಳನ್ನು ಮಾತ್ರ ಪ್ರತ್ಯೇಕವಾಗಿಯೇ ನೀಡಲಾಗುತ್ತದೆ. ಇದನ್ನು ಯುನಿಸೆಕ್ಸ್ ಸಲೂನ್ ಎಂದು ಭಾವಿಸಬೇಕಾಗಿಲ್ಲ. ಪ್ರತಿಯೊಂದು ಸಣ್ಣ ಸೇವೆಯೂ ತೀರ ಖಾಸಗಿಯಾದುದು. ವ್ಯಕ್ತಿಯ ಆ ಖಾಸಗಿತನವನ್ನು ಗೌರವಿಸಲು ಈ ಪ್ರತ್ಯೇಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ಅವರು.

ಸ್ಪಾ ಎಂದರೆ ನಿರ್ಮಲ ಜಲ, ಸುಗಂಧಿತ ಚಿಕಿತ್ಸೆ. ದೇಹದ ಕೀಲು ಸಡಿಲಗೊಂಡಂತೆ, ಮನಸು ನಿರಾಳವಾಗುತ್ತ ಹೋಗಬೇಕು. ಇಲ್ಲಿರುವ ಪರಿಶುದ್ಧ ಪರಿಸರದಲ್ಲಿ ನಿಸರ್ಗದೊಂದಿಗೆ ಒಂದಾಗುವ ಮನೋಭಾವದ ನಿರ್ಮಾಣ ತಾನೇ ಆಗುತ್ತದೆ. ನಂತರದ್ದು, ಮಗುವಿಗೆ ಕಾಲಿನ ಮೇಲೆ ಹಾಕಿಕೊಂಡು ಮೈಗೆ ಎಣ್ಣೆ ನೀವಿದಂತೆ. ಮಗುವಾಗಿ ಬಿಡಬೇಕು. ಮಸಾಜ್ ಮಾಡುವವರು ಮೆಲುಧ್ವನಿಯಲ್ಲಿ ಮಾತನಾಡುತ್ತಲೇ ಸಂಕೋಚವನ್ನು ಹೊಡೆದೋಡಿಸುತ್ತಾರೆ. ನಿಮ್ಮ ದೇಹದ ಸ್ವಾಮ್ಯವನ್ನೂ ಮರೆತು ಮನಸಿನೊಂದಿಗೆ ಒಂದಾಗುವಿರಿ. ಮರ್ಜನದ ಆ 25ರಿಂದ 40 ನಿಮಿಷಗಳು ಇಡೀ ದೇಹದ ಸ್ನಾಯು ಹಾಗೂ ಕೀಲುಗಳಿಗೆ ಮರುಬಲ ನೀಡುತ್ತದೆ. ಪ್ರತಿಯೊಂದು ಅಂಗಕ್ಕೆ ಮಸಾಜಿನ ಸ್ಪರ್ಶ ದೊರೆತಾಗಲೇ ನೆನಪಾಗುವುದು... ದೇಹದ ಈ ಭಾಗವೂ ನನ್ನದೇ. ಇಷ್ಟು ದಿನ ನಿರ್ಲಕ್ಷ್ಯಕ್ಕೆ ಒಳಗಾಗಿತ್ತೇ ಎಂಬಂತೆ!.

ಈ ಮಸಾಜಿನ ನಂತರದ ಹಬೆಸ್ನಾನ, ಮನಸಿನ ಒಳಗುದಿಯೂ ದೇಹದಿಂದ ಹೆಚ್ಚುವರಿ ಎಣ್ಣೆ ತೊಟ್ಟಿಕ್ಕುವಂತೆ ಇಳಿದು ಹೋಗುತ್ತದೆ.
ನಂತರ ಆಚೆ ಬಂದರೆ ಮೈ ಹಗುರ. ಮನಸೂ ಸಹ. ಒಂದು ಅನನ್ಯ ಅನುಭವ. ಅಗತ್ಯವಿರುವ ಚಿಕಿತ್ಸೆ ಎಂಬುದು ನಮ್ಮ ಅರಿವಿಗೇ ಬರುತ್ತದೆ.
ಹೆಚ್ಚಿನ ಮಾಹಿತಿಗೆ: ಸಿನೋರಾ ಸಲೂನ್/ಸ್ಪಾ ಮಾರತ್‌ಹಳ್ಳಿ 080 4204 2424/ ಇಂದಿರಾನಗರ 080 4209 4478/
ಅಥವಾ 98804 26096

ಆನ್‌ಲೈನ್ ನೋಂದಣಿ ಮಾಹಿತಿಗಾಗಿ www.signoraspasalon.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.