ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿಗಳ ಆಭರಣ ಮೋಹ

Last Updated 6 ಮೇ 2019, 7:24 IST
ಅಕ್ಷರ ಗಾತ್ರ

ಒಡವೆ ಧರಿಸಲು ದಿನ, ಮೂಹೂರ್ತದ ಹಂಗಿಲ್ಲ. ಆದಾಗ್ಯೂ ಚಿನ್ನ ಖರೀದಿಗೆ ಅಕ್ಷಯ ತೃತೀಯ ಯೋಗ್ಯ ದಿನ ಎನ್ನುವುದು ಅನೇಕರ ನಂಬಿಕೆ. ಕೆಲವರು ಈ ನಂಬಿಕೆಯ ಮೊರೆ ಹೋಗಿ ಚಿನ್ನ ಖರೀದಿಸಿದರೆ, ಮತ್ತೆ ಕೆಲವರು ನಾವು ಖರೀದಿಸುವ ದಿನವೇ ಶುಭ ದಿನ ಎನ್ನುತ್ತಾರೆ.

ಅಕ್ಷಯ ತೃತೀಯ ನಮಗೇನೂ ದೊಡ್ಡ ಹಬ್ಬವಲ್ಲ. ಆದರೆ, ಚಿನ್ನ ಖರೀದಿಗೆ ಪ್ರಶಸ್ತ ದಿನವೆಂಬ ನಂಬಿಕೆ ಇದೆ. ಕಳೆದ ವರ್ಷ ಅಕ್ಷಯ ತದಿಗೆಯಂದು ನನ್ನ ಅಮ್ಮನಿಗೆ ಚಿನ್ನದ ಕಿವಿಯೋಲೆ ಕೊಡಿಸಿದ್ದೆ. ಈ ಬಾರಿ ಏನು ಖರೀಸುವುದೆಂದು ಇನ್ನೂ ನಿರ್ಧರಿಸಿಲ್ಲ. ಚಿನ್ನದೊಡವೆ ಧರಿಸುವುದರಲ್ಲಿ ನನಗೇನು ಕ್ರೇಜ್‌ ಇಲ್ಲ. ಹೂಡಿಕೆಯಾಗಿ, ಉಳಿತಾಯವಾಗಿ ಚಿನ್ನ ಖರೀದಿಸಬಯಸುತ್ತೇನಷ್ಟೆ. ಸಾಂಪ್ರದಾಯಿಕ, ಕುಂದನ್. ಆ್ಯಂಟಿಕ್‌, ಲೈಟ್‌ವೇಯ್ಟ್‌ ಹೀಗೆ ಎಲ್ಲ ಬಗೆಯ ಆಭರಣಗಳನ್ನು ಧರಿಸುತ್ತೇನೆ. ಮುಖ್ಯವಾಗಿ ಯಾವ ರೀತಿಯ ಉಡುಪನ್ನು ಧರಿಸಿರುತ್ತೇನೆಯೋ ಅದಕ್ಕೆ ಸೂಕ್ತವಾದ ಆಭರಣ ತೊಡುತ್ತೇನೆ. ಭಾರತೀಯ ಉಡುಪಿನ ಮೇಲೆ ಸಾಂಪ್ರದಾಯಿಕ ಆಭರಣ, ಪಾಶ್ಚಾತ್ಯ ವಸ್ತ್ರದ ಮೇಲೆ ಸಮಕಾಲೀನ ಆಧುನಿಕ ವಿನ್ಯಾಸದ ಒಡವೆ ಧರಿಸುವುದು ರೂಢಿ. ಪ್ಲಾಟಿನಂ ಆಭರಣಗಳು ಆಪ್ತವಾಗುತ್ತವೆ. ಒಡವೆಗಳ ದೊಡ್ಡ ಸಂಗ್ರಹವಿಲ್ಲ. ಇತ್ತೀಚೆಗೆ ಹೂಡಿಕೆ ಮಾಡುತ್ತಿದ್ದೇನಷ್ಟೆ. ಸಾಮಾನ್ಯವಾಗಿ ನವರತನ್‌ ಮಳಿಗೆಯಲ್ಲಿ ಒಡವೆ ಖರೀದಿಸುತ್ತೇನೆ.
–ಹಿತಾ ಚಂದ್ರಶೇಖರ್, ನಟಿ


**
ಆಭರಣ ಮೋಹಿಯಲ್ಲ
ನಾನು ಆಭರಣ ಮೋಹಿಯಲ್ಲ. ಹಾಗಾಗಿ ಆಭರಣಗಳ ಸಂಗ್ರಹ ಕೂಡ ಇಲ್ಲ. ಕೆಲ ಸಾಂಪ್ರದಾಯಿಕ ಸಮಾರಂಭಗಳಿಗೆ ಅಮ್ಮನ ಸಲಹೆಯಂತೆ, ಅಮ್ಮನ ಆಭರಣಗಳನ್ನೇ ಧರಿಸುತ್ತೇನೆ. ಧರಿಸುವುದಕ್ಕೆ ಅಲ್ಲದಿದ್ದರೂ ನನಗೆ ನೋಡಲು ಸಾಂಪ್ರದಾಯಿಕ ಆಭರಣಗಳು ಇಷ್ಟವಾಗುತ್ತದೆ.
–ಶ್ರದ್ಧಾ ಶ್ರೀನಾಥ, ನಟಿ


**
ಅಮ್ಮನಿಗಾಗಿ ಖರೀದಿ
ನಾನು ಆಭರಣ ಪ್ರಿಯೆಯಲ್ಲ. ನನಗೆ ಅಕ್ಷಯ ತೃತೀಯದಲ್ಲಿ ನಂಬಿಕೆಯೂ ಇಲ್ಲ. ನಮಗೆ ದೇವರು ಯಾವಾಗ ಒಡವೆಗಳನ್ನು ಖರೀದಿಸುವ ಸಾಮರ್ಥ್ಯ ನೀಡುತ್ತಾನೆಯೋ ಅದೇ ಶುಭದಿನ. ನಾನೆಂದು ಅಕ್ಷಯ ತೃತೀಯದಂದು ಆಭರಣ ಖರೀದಿಸಿಲ್ಲ. ಈ ಬಾರಿಯೂ ಖರೀದಿಸುವ ಯೋಚನೆ ಇಲ್ಲ. ಸಾಮಾನ್ಯವಾಗಿ ಆ್ಯಂಟಿಕ್‌ ಮತ್ತು ಕುಂದನ್‌ ಜ್ಯುವೆಲ್ಲರಿಗಳು, ಮೋಹನಮಾಲೆ ಇಷ್ಟವಾಗುತ್ತದೆ. ಆದರೆ ಧರಿಸುವುದು ಅಪರೂಪ. ನನಗಾಗಿ ಒಡವೆಗಳನ್ನು ಖರೀಸುವುದಕ್ಕಿಂತ ಅಮ್ಮನಿಗಾಗಿ ಆಗಾಗ್ಗೆ ಬಂಗಾರ ಕೊಳ್ಳುತ್ತೇನೆ. ನನಗೆ ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಇಷ್ಟವಾಗುತ್ತದೆ. ಈಚೆಗೆ ‘ಸರಿಗಮಪ’ ಕಾರ್ಯಕ್ರಮದಲ್ಲಿ ಆ್ಯಂಟಿಕ್‌ ಜ್ಯವೆಲ್ಲರ್ಸ್‌ ಧರಿಸಿದ್ದೆ.
–ಅನುಶ್ರೀ, ನಿರೂಪಕಿ


**
ಹಗುರ ಆಭರಣವೇ ಇಷ್ಟ
‘ಅಕ್ಷಯವನ್ನು ಹಬ್ಬವಾಗಿ ಆಚರಿಸುವುದಿಲ್ಲ. ಆದರೆ, ಪ್ರತಿ ವರ್ಷ ಆಭರಣಗಳನ್ನು ಖರೀದಿಸುವುದನ್ನು ಮರೆಯುವುದಿಲ್ಲ. ಚಿಕ್ಕದಾಗಿ ಚಿನ್ನದ ಕಿವಿಯೋಲೆ, ಬೆಳ್ಳಿಯ ಉಂಗುರಗಳನ್ನು ಖರೀದಿಸುತ್ತೇನೆ. ಭಾರವಾದ ಹೆಚ್ಚಿನ ವಿನ್ಯಾಸಗಳಿಂದ ಕೂಡಿದ ಆಭರಣಗಳು ಇಷ್ಟವಾಗುವುದಿಲ್ಲ. ಕೆಲವೊಮ್ಮೆ ಇಷ್ಟಕ್ಕಿಂತ ಬೆಲೆಯೂ ಮುಖ್ಯವಾಗುತ್ತದೆ. ನಮ್ಮ ಬಜೆಟ್‌ಗೆ ಹೊಂದಿಕೆಯಾಗುವಷ್ಟು ಚಿನ್ನವನ್ನು ಮಾತ್ರ ಖರೀಸುತ್ತೇನೆ. ಸಾಮಾನ್ಯವಾಗಿ ನನಗೆ ಚಿನ್ನ ಮತ್ತು ವಜ್ರದ ಆಭರಣ ಪ್ರಿಯವಾಗುತ್ತವೆ. ಧರಿಸುವುದು ಅಪರೂಪ. ಸರಳವಾದ ಆಭರಣಗಳನ್ನಷ್ಟೇ ಆಗಾಗ್ಗೆ ತೊಡುತ್ತೇನೆ.
–ಭಾವನಾ ರಾವ್‌, ನಟಿ

ಭಾವನಾ ರಾವ್‌
ಭಾವನಾ ರಾವ್‌


**
ಧಿರಿಸಿಗೆ ಹೊಂದುವ ಆಭರಣ

ಅಮ್ಮ ಪ್ರತಿವರ್ಷ ಅಕ್ಷಯ ತೃತೀಯದಂದು ಚಿಕ್ಕ ಆಭರಣಗಳನ್ನು ಕೊಳ್ಳುತ್ತಾರೆ. ನನಗೆ ಸಮಕಾಲೀನ ಆಭರಣಗಳು ಇಷ್ಟವಾಗುತ್ತವೆ. ಆಗಾಗ್ಗೆ ಲೈಟ್‌ ವೇಯ್ಟ್‌ ಆಭರಣಗಳನ್ನು ಧರಿಸುತ್ತೇನೆ. ಯಾವುದಾದರೂ ಸಮಾರಂಭಗಳಿಗೆ ಅತಿಥಿಯಾಗಿ ಭಾಗವಹಿಸುವಾಗ, ಸ್ನೇಹಿತರು, ಆ‍ಪ್ತರ ಮದುವೆ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಪಿನ ಮೇಲೆ ಒಡವೆ ಧರಿಸುತ್ತೇನೆ. ಬೇರೆಲ್ಲಾ ಸಮಯದಲ್ಲಿ ಜೀನ್ಸ್‌ ಫ್ಯಾಂಟ್‌ ಮೇಲೆ ಟಿ–ಶರ್ಟ್‌ಧರಿಸಿ ಹುಡುಗರಂತೆ ಹೋಗಲು ಇಷ್ಟಪಡುತ್ತೇನೆ.
– ಸಂಜನಾ ಗಿರ್ಲಾನಿ, ನಟಿ


**
ಏನ್ ಕೊಟ್ರೂ ಖುಷಿ
ನಮ್ಮ ಮನೇಲಿ ಬೇಡ ಬೇಡ ಅಂದ್ರೂ ಅಪ್ಪ, ಅಮ್ಮ ಪ್ರತಿ ವರ್ಷ ಅಕ್ಷಯ ತೃತೀಯಾ ದಿನ ಏನಾದ್ರೂ ಒಂದು ಆಭರಣ ಕೊಡಿಸ್ತಾರೆ. ಈ ಸಲ ಏನ್ ಕೊಡಿಸ್ತಾರೆ ಅಂತಾ ಗೊತ್ತಿಲ್ಲ..ಆದ್ರೆ ಏನೋ ಸರಪ್ರೈಸ್ ಇರೋದು ಖಚಿತ. ನಾವ್ ಹುಡುಗ್ರು.. ಏನ್ ಕೊಡಿಸಿದ್ರೂ ಅದೇ ಬ್ರಾಸ್ಲೆಟ್, ಉಂಗುರನೋ ಅಥವಾ ಕತ್ತಿಗೆ ಸರನೋ ಇರುತ್ತೆ. ಆದ್ರೆ ಅಪ್ಪ, ಅಮ್ಮ ಪ್ರೀತಿಯಿಂದ ಎನ್ ಕೊಟ್ರೂ ಖುಷಿಗೆ. ಆ ಖುಷಿಗಾಗಿ ಕಾಯ್ತಾ ಇದೀನಿ.
– ನಕುಲ್ ಗೌಡ, ನಟ


ನಕುಲ್ ಗೌಡ

**
ಚಿನ್ನ ಇಷ್ಟಪಡೋ ಹುಡುಗಿ ಇಷ್ಟ!
ಪ್ರತಿ ವರ್ಷ ಅಕ್ಷಯ ತೃತೀಯ ದಿನ, ನಮ್ಮಮ್ಮ ಮತ್ತು ನಮ್ಮ ಅಕ್ಕ ಏನಾದ್ರೂ ಖರೀದಿ ಮಾಡ್ತಾನೆ ಇರ್ತಾರೆ. ನಾನು ಕೂಡ ಅವರೊಂದಿಗಿದ್ದು ಹಬ್ಬವನ್ನು ಆಚರಿಸುತ್ತಿದ್ದೆ. ಆದರೆ, ಈ ಬಾರಿ ಶೂಟಿಂಗ್ ಅಲ್ಲಿ ಬ್ಯೂಸಿ ಆಗಿರೋಂದ್ರಿಂದ ಮನೆಗೆ ಹೋಗೋಕೆ ಸಮಯವಿಲ್ಲ.ನನಗೆ ವಜ್ರ, ಚಿನ್ನ, ಬೆಳ್ಳಿ ಅಷ್ಟೊಂದು ಇಷ್ಟ ಆಗಲ್ಲ. ಆದರೆ, ಅವುಗಳೆಲ್ಲವನ್ನೂ ಇಷ್ಟ ಪಡೋ ಅಚ್ಚ ಕನ್ನಡದ ಹುಡುಗಿ ಇಷ್ಟ ಆಗ್ತಾಳೆ.
–ಮದನ್ ಗೌಡ, ನಟ, (ಸಂದರ್ಶನ: ಶಾಹಿನ್ ಎಸ್‌. ಮೊಕಾಶಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT