ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್ ಬಾಗ್‌ನ ಪುಷ್ಪಮೇಳದಲ್ಲಿ ಚಿಣ್ಣರ ಸಂಭ್ರಮ

Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌ ಭಾನುವಾರ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಪುಷ್ಪಮೇಳದಲ್ಲಿ ಬಣ್ಣ, ಬಣ್ಣದ ಹೂವುಗಳ ಲೋಕ ಅನಾವರಣಗೊಂಡಿತ್ತು. ಉದ್ಯಾನಕ್ಕೆ ಬಂದಿದ್ದ ಪುಟ್ಟ ಮಕ್ಕಳು, ಮಹಿಳೆಯರು ತಮಗೆ ಇಷ್ಟವಾದ ಹೂವುಗಳನ್ನು ಎತ್ತಿಟ್ಟುಕೊಂಡು ಸಂಭ್ರಮಿಸಿದರು.ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್‌ ಹೂವುಗಳ ಬಳಕೆ ಬೇಡ ಎಂಬ ಅರಿವು ಮೂಡಿಸಲು ರೈತರು ತಾವು ಬೆಳೆದ ಹೂವುಗಳನ್ನು ಜನರಿಗೆ ಉಚಿತವಾಗಿ ಹಂಚುವ ಮೂಲಕ ಜಾಗೃತಿ ಮೂಡಿಸಿದರು.

ಬದುಕು, ಸಂಬಂಧ, ನಗು ಹೀಗೆ ಎಲ್ಲವೂ ಕೃತಕವಾಗುತ್ತಿರುವ ಈ ಜಗತ್ತಿನಲ್ಲಿ ಹೂವುಗಳು ಕೂಡ ಕೃತಕವಾಗುತ್ತಿವೆ.ಮಾರುಕಟ್ಟೆಯಲ್ಲಿ ಕೃತಕ ಹೂವುಗಳ ಭರಾಟೆಯಲ್ಲಿಸುವಾಸನೆ ಬೀರುವ ನೈಜ ಹೂವುಗಳು ಮಂಕಾಗುತ್ತಿವೆ.ಕೃತಕ ಹೂವುಗಳಿಗೆ ಮನಸೋಲುತ್ತಿರುವ ಗ್ರಾಹಕರಿಂದ ರೈತರು ಕಂಗಾಲಾಗಿದ್ದಾರೆ. ‘ನೈಜ ಹೂವುಗಳನ್ನು ಬಳಸಿ, ರೈತರನ್ನು ಉಳಿಸಿ’ಎಂದು ರೈತರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT