ಪ್ರತಿಯೊಬ್ಬರ ಮನೆಯಲ್ಲೂ ಹಾಲು ಕಾಯಿಸುವುದು, ಚಹಾ, ಕಾಫಿ ಮಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಒಲೆಯ ಮೇಲೆ ಇವುಗಳನ್ನು ಇಟ್ಟು ನಮ್ಮ ಇತರ ಕೆಲಸದಲ್ಲಿ ನಿರತರಾಗುತ್ತೇವೆ. ಇದರಿಂದ ಪಾತ್ರೆ ಸೀದಿ ಹೋಗುವ ಸಾಧ್ಯತೆ ಇರುತ್ತದೆ. ಸೀದಿದ ವಾಸನೆ ಬಂದ ಮೇಲೆಯೇ ‘ಅಯ್ಯೋ ಒಲೆಯ ಮೇಲೆ ಹಾಲಿರಿಸಿದ್ದೆ’ ಎನ್ನುವುದು ನೆನಪಾಗುವುದುಂಟು. ಈ ರೀತಿ ತಳ ಹಿಡಿದು ಕಪ್ಪಾದ ಅಥವಾ ಸೀದಿದ ಪಾತ್ರೆಯನ್ನು ಸ್ವಚ್ಛಗೊಳಿಸುವುದು ತುಸು ಕಷ್ಟದ ಕೆಲಸ.

ಈ ರೀತಿಯಾದ ಪಾತ್ರೆಗಳನ್ನು ಅಯ್ಯೋ ಹಾಳಾಯಿತಲ್ಲ ಎಂದು ಎಸೆಯುವ ಅಗತ್ಯವಿಲ್ಲ, ಬದಲಾಗಿ ಕೆಲವು ಟಿಪ್ಸ್ಗಳನ್ನು ಅಳವಡಿಸಿಕೊಂಡರೆ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಅದಕ್ಕಾಗಿ ಇಲ್ಲಿವೆ ಸಿಂಪಲ್ ಐಡಿಯಾಗಳು

ಬೇಕಿಂಗ್ ಸೋಡ ಮತ್ತು ವಿನೆಗರ್ ಬಳಕೆ

ತಳ ಸೀದಿದ ಪಾತ್ರೆಗಳನ್ನು ಬೇಕಿಂಗ್ ಸೋಡ (ಅಡುಗೆ ಸೋಡ) ಮತ್ತು ವಿನೆಗರ್ ಬಳಸಿ ಸ್ವಚ್ಛಗೊಳಿಸಬಹುದು. ವಿನೆಗರ್ ಇಲ್ಲವಾದರೆ ಲಿಂಬು ರಸವನ್ನು ಬಳಕೆ ಮಾಡಬಹುದು.

ಸೀದಿದ ಪಾತ್ರೆಗೆ ಮುಕ್ಕಾಲು ಭಾಗದಷ್ಟು ನೀರನ್ನು ತುಂಬಿಸಿಕೊಳ್ಳಿ. ಅದಕ್ಕೆ 1 ಚಮಚ ಬೇಕಿಂಗ್ ಸೋಡ, 1 ಚಮಚ ವಿನೆಗರ್ ಹಾಕಿ. ವಿನೆಗರ್ ಇಲ್ಲವಾದರೆ ಒಂದು ಚಮಚ ಲಿಂಬು ರಸ ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಇದರಿಂದ ಕಪ್ಪು ಬಣ್ಣದ ನೀರು ಕಾಣಸಿಗುತ್ತದೆ.

ನಂತರ ಆ ನೀರನ್ನು ಹೊರಹಾಕಿ. ಮಾಮೂಲಿ ಬಳಸುವ ಪಾತ್ರೆ ತೊಳೆಯುವ ಸೋಪು ಅಥವಾ ಜೆಲ್ ಹಾಕಿ ಸ್ಟೀಲ್ ಬ್ರಷ್ನಲ್ಲಿ ಉಜ್ಜಿಕೊಂಡರೆ, ಸೀದಿದ ಕಲೆ ಮಾಯವಾಗಿ, ಪಳ ಪಳ ಹೊಳೆಯುವ ಪಾತ್ರೆಯನ್ನು ಕಾಣಬಹುದು.

ಕಲ್ಲು ಉಪ್ಪಿನ ಬಳಕೆ

ತಳ ಸೀದಿದ ಪಾತ್ರೆಗೆ ನೀರು ತುಂಬಿಸಿ 2 ಅಥವಾ 3 ಚಮಚ ಕಲ್ಲುಪ್ಪು ಹಾಕಿ ಎರಡು ಗಂಟೆಗಳ ಕಾಲ ನೆನೆಸಿಡಿ. ನಂತರ ಸ್ವಲ್ಪ ಕೈಯಾಡಿಸಿ, ಆಗ ಕಪ್ಪು ಬಣ್ಣದ ನೀರು ಬರುತ್ತದೆ. ಅದನ್ನು ಹೊರ ಹಾಕಿ ನಂತರ ಸ್ಟೀಲ್ ಬ್ರಷ್ ಮೂಲಕ ಪಾತ್ರೆ ತೊಳೆಯುವ ಸೋಪು ಅಥವಾ ಜೆಲ್ ಹಾಕಿ ಉಜ್ಜಿದರೆ ಸೀದಿ ಕಪ್ಪಗಾಗಿದ್ದ ಪಾತ್ರೆ ಶುಭ್ರವಾಗುತ್ತದೆ.

ಲಿಂಬು ಉಪಯೋಗ

ತಳ ಸೀದಿದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಲಿಂಬುವನ್ನು ಉಪಯೋಗಿಸಬಹುದು. ಪಾತ್ರೆಗೆ ನೀರು ಹಾಕಿ 3 ರಿಂದ 4 ಲಿಂಬುವನ್ನು ಕತ್ತರಿಸಿ ಪಾತ್ರೆಗೆ ಹಾಕಿ. ಅದನ್ನು ಚೆನ್ನಾಗಿ ಕುದಿಸಿ. ಇದರಿಂದ ಕಪ್ಪಾದ ಪಾತ್ರೆಯನ್ನು ಶುಚಿಗೊಳಿಸಬಹುದು.

ನೆನಪಿಡಿ: ಲಿಂಬುವನ್ನು ಕತ್ತರಿಸಿ ಕುಕ್ಕರ್ನ ತಳಭಾಗದಲ್ಲಿ ನೀರಿನೊಂದಿಗೆ ಹಾಕಿ ಅದರ ಮೇಲೆ ಪಾತ್ರೆಯಿಟ್ಟು ಬಳಸಿದರೆ ಕುಕ್ಕರ್ನ ತಳ ಕಳೆಗುಂದುವುದನ್ನು ತಡೆಯಬಹುದು.

ಬೇಕಿಂಗ್ ಸೋಡ, ಲಿಂಬು ಮತ್ತು ಉಪ್ಪು

ಸೀದಿದ ಪಾತ್ರೆಯನ್ನು ಲಿಂಬು, ಉಪ್ಪು ಮತ್ತು ಬೇಕಿಂಗ್ ಸೋಡ ಮೂಲಕ ಸ್ವಚ್ಚಗೊಳಿಸಬಹುದು. ಸೀದಿದ ಪಾತ್ರೆಗೆ ನೀರು ಹಾಕಿ ಬಿಸಿಗೆ ಇಟ್ಟು ಮೊದಲು ಬೇಕಿಂಗ್ ಸೋಡ ಹಾಕಿ ಒಂದೆರಡು ನಿಮಿಷ ಆದ ಮೇಲೆ ಲಿಂಬು ರಸ ಮತ್ತು ಕತ್ತರಿಸಿದ ಭಾಗವನ್ನೂ ಹಾಕಿ ನಂತರ ಉಪ್ಪು ಸೇರಿಸಿ 2 ನಿಮಿಷ ಕುದಿಯಲು ಬಿಡಿ. ನಂತರ ಗ್ಯಾಸ್ ಆಫ್ ಮಾಡಿ ಸ್ಟೀಲ್ ಬ್ರಷ್ನಿಂದ ಉಜ್ಜಿ ಸ್ವಚ್ಛಗೊಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.