ಉತ್ತಮ ವಹಿವಾಟಿನತ್ತ ಎಐ ಕಣ್ಣು

7

ಉತ್ತಮ ವಹಿವಾಟಿನತ್ತ ಎಐ ಕಣ್ಣು

Published:
Updated:

ಟೆಕ್ ಸಲ್ಯೂಷನ್ ಕಂಪನಿ ‘ಎಂಜಿನಿಯರಿಂಗ್ ಎಐ’ ಮುಂದಿನ 5 ವರ್ಷಗಳಲ್ಲಿ ₹ 1000 ಕೋಟಿ  ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ. ಕಂಪನಿಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ ಬಿಲ್ಡರ್‌ಗಳನ್ನು ಗಮನದಲ್ಲಿಟ್ಟು ಹೊಸ ಹೊಸ ಆ್ಯಪ್ ಮತ್ತು ಟೆಕ್ನಾಲಜಿ ಸೇವೆಗಳನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿ ಸೇರಿದಂತೆ ಇತರೆ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳಲು ಎಐ ನಿರ್ಧರಿಸಿದೆ.

ಗೃಹ ನಿರ್ಮಾಣದ ಎಂಜಿಯರ್‌ಗಳಿಗೆ ಬೇಕಾಗಿರುವ ಪೂರಕ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶ ಎಂದು ಎಐ ಕಂಪೆನಿಯ ಮುಖ್ಯಸ್ಥ ಸಚಿನ್ ದೇವ್ ತಿಳಿಸಿದ್ದಾರೆ. ಪ್ಲ್ಯಾನಿಂಗ್‌, ಸರಕು, ಸಾಧನ ಸಲಕರಣೆಗಳ ಮಾಹಿತಿಯು ಲಭ್ಯವಾಗಲಿದೆ. ಈಗಾಗಲೇ ಎಐ ಜೊತೆ 20 ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಸಂಪರ್ಕದಲ್ಲಿದ್ದು ನಮ್ಮ ತಂತ್ರಜ್ಞಾನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದಾರೆ. 10 ಕ್ಕೂ ಹೆಚ್ಚು ವೈಶಿಷ್ಟ್ಯಗಳಿರುವ ಆ್ಯಪ್ ವಿನ್ಯಾಸ ಮಾಡಲು ₹3 ಲಕ್ಷ   ವೆಚ್ಚವಾಗಲಿದೆ ಎಂದು ಸಚಿನ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !