ಮ್ಯಾಕ್ಸ್‌ನಲ್ಲಿ ಬೇಸಿಗೆ ಉಡುಪುಗಳ ಸಂಗ್ರಹ

ಬೇಸಿಗೆಯ ಬಿಸಿಲಿಗೆ ದೇಹ ವನ್ನು ತಂಪಾಗಿಡುವ ಹತ್ತಿ ಹಾಗೂ ಮೃದು ಬಟ್ಟೆಗಳ ಹೊಸ ವಿನ್ಯಾಸದ ಸಂಗ್ರಹವನ್ನು ಮ್ಯಾಕ್ಸ್ ಬಿಡುಗಡೆ ಮಾಡಿದೆ.
ಸುಂದರ ಹೂವಿನ ವಿನ್ಯಾಸಗಳು, ಅಂಚುಗಳು, ಮಣಿಗಳಿಂದ ಮಾಡಿದ ಕಸೂತಿಗಳ ಉಡುಪುಗಳು ಲಭ್ಯವಿವೆ. ಇನ್ನು ಪುರುಷರಿಗೆ ಡೆನಿಮ್ ಹಾಗೂ ಮಕ್ಕಳಿಗೂ ಹೊಸ ವಿನ್ಯಾಸದ ಬಟ್ಟೆಗಳ ಸಂಗ್ರಹ ಪರಿಚಯಿಸಲಾಗಿದೆ.
*
ಅದೃಷ್ಟ ಜೋಡಿಗಳಿಗೆ ಸಿಂಗಾಪುರ, ಮಲೇಷ್ಯಾ ಪ್ರವಾಸ
500 ಅದೃಷ್ಟ ಜೋಡಿಗಳಿಗೆ ಸಿಂಗಾಪುರ, ಮಲೇಷ್ಯಾಗೆ ಉಚಿತ ಪ್ರವಾಸದ ಕೊಡುಗೆಯನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಒದಗಿಸಿದೆ. ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನದ 5ನೇ ಆವೃತ್ತಿ ಇದಾಗಿದೆ. ಜುಲೈ 31ರ ಒಳಗೆ ವಿವಾಹವಾಗುವ ಜೋಡಿಗಳು ಇಲ್ಲಿ ಮೇ.25ರ ಒಳಗೆ ಆಭರಣ ಖರೀದಿಸಿದರೆ ಈ ಅವಕಾಶ ದೊರಕಲಿದೆ.
*
ಬೇಸಿಗೆ ರಜೆಗೆ ತಯಾರಾದ ಲುಂಬಿನಿ
ಕೃತಕ ಅಲೆಗಳು ಏಳುವ ಕೊಳ (ವೇವ್ ಪೂಲ್), ತೇಲುವ ರೆಸ್ಟೊರೆಂಟ್ ಇರುವ ನಾಗವಾರ ಕೆರೆ ಸಮೀಪದ ಲುಂಬಿನಿ ಗಾರ್ಡನ್‌ನಲ್ಲಿ ಕುಟುಂಬ ಸದಸ್ಯರು ಮಕ್ಕಳೊಂದಿಗೆ ತೆರಳಿ ಬೇಸಿಗೆ ರಜೆಯನ್ನು ಆನಂದಿಸಬಹುದು.
ಇಲ್ಲಿ ಮಕ್ಕಳಿಗಾಗಿ ಬೋಟಿಂಗ್, ರೈಲು, ವೇವ್ ಪೂಲ್, ಡ್ಯಾಷಿಂಗ್ ಕಾರ್, ಬಂಗಿ ಜಂಪ್, ಫೋರೊಜಲಾ, ಬೌನ್ಸಿ ರೈಡ್ ಆಡುವ ಅವಕಾಶ ಕಲ್ಪಿಸಲಾಗಿದೆ. ಕೊಲಂಬಸ್, ಕ್ಯಾಟರ್ ಪಿಲ್ಲರ್ ಈ ಉದ್ಯಾನದ ಆಕರ್ಷಣೆಗಳು. ಇನ್ನು ಇಲ್ಲಿ ಕೃತಕ ಸಮುದ್ರದ ಕಿನಾರೆಯನ್ನು ನಿರ್ಮಿಸಲಾಗಿದೆ. ಇಲ್ಲಿ ದೊಡ್ಡ ಕೊಳಕ್ಕೆ ಹೊಂದಿಕೊಂಡಂತೆ ಮಕ್ಕಳಿಗಾಗಿ ಸಣ್ಣ ಕೊಳವೂ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.