ಸ್ಟ್ರೆಚರ್‌ ನೀಡದ ಆಸ್ಪತ್ರೆ ಸಿಬ್ಬಂದಿ: ವೃದ್ಧ ಪತಿಯನ್ನು ಎಳೆದೊಯ್ದ ಪತ್ನಿ

7
ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಡೆದ ಘಟನೆ

ಸ್ಟ್ರೆಚರ್‌ ನೀಡದ ಆಸ್ಪತ್ರೆ ಸಿಬ್ಬಂದಿ: ವೃದ್ಧ ಪತಿಯನ್ನು ಎಳೆದೊಯ್ದ ಪತ್ನಿ

Published:
Updated:
ಸ್ಟ್ರೆಚರ್‌ ನೀಡದ ಆಸ್ಪತ್ರೆ ಸಿಬ್ಬಂದಿ: ವೃದ್ಧ ಪತಿಯನ್ನು ಎಳೆದೊಯ್ದ ಪತ್ನಿ

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿಸುವ ಕೊಠಡಿಗೆ ವೃದ್ಧ ಪತಿಯನ್ನು ಕರೆದುಕೊಂಡು ಹೋಗಲು ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್‌ ನೀಡದ ಕಾರಣ ಪತಿಯನ್ನು ಪತ್ನಿ ಕಾಲು ಹಿಡಿದುಕೊಂಡು ಎಳೆದುಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪತಿಯನ್ನು ಪತ್ನಿ ಎಳೆದೊಯ್ಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಸ್ತಮಾ ಮತ್ತು ತೀವ್ರ ಅನಾರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ಅಮೀರ್‌ ಸಾಬ್‌ ಎಂಬ ವೃದ್ಧರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯರು ಎಕ್ಸ್‌ರೇ ಮಾಡಿಸುವಂತೆ ತಿಳಿಸಿದ್ದರು.

‘ಎಕ್ಸ್‌ರೇ ಮಾಡಿಸುವ ಕೊಠಡಿಗೆ ಪತಿಯನ್ನು ಕರೆದೊಯ್ಯಲು ಸಿಬ್ಬಂದಿಯ ನೆರವು ಕೇಳಿದಾಗ ಯಾರೊಬ್ಬರೂ ಮುಂದೆ ಬರಲಿಲ್ಲ. ಸ್ಟ್ರೆಚರ್‌ ಅನ್ನೂ ಕೊಡಲಿಲ್ಲ. ಹೀಗಾಗಿ ಪತಿಯ ಕಾಲು ಹಿಡಿದುಕೊಂಡು ಎಳೆದುಕೊಂಡು ಹೋದೆ’ ಎಂದು ಆಮೀರ್‌ ಸಾಬ್‌ ಅವರ ಪತ್ನಿ ಫಾಮಿದಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಗ್ಗಾನ್‌ ಆಸ್ಪತ್ರೆಯ ನಿರ್ದೇಶಕ ಸುಶೀಲ್‌ ಕುಮಾರ್‌, ‘ಸಿಬ್ಬಂದಿಯ ಗಮನಕ್ಕೆ ತರದೇ ಫಾಮಿದಾ ಅವರು ಪತಿಯನ್ನು ಬಟ್ಟೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ’ ಎಂದು ಹೇಳಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯಲೋಪದ ಕಾರಣದಿಂದ ಆಸ್ಪತ್ರೆಯ ಮೂರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry