ವಿರಾಟ್‌ ಕೊಹ್ಲಿ ಚಾರಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಿಜಯ್‌ ಮಲ್ಯ

7

ವಿರಾಟ್‌ ಕೊಹ್ಲಿ ಚಾರಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಿಜಯ್‌ ಮಲ್ಯ

Published:
Updated:
ವಿರಾಟ್‌ ಕೊಹ್ಲಿ ಚಾರಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಿಜಯ್‌ ಮಲ್ಯ

ಲಂಡನ್‌:  ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ನಡೆಸಿಕೊಟ್ಟ ಚಾರಿಟಿ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್‌ ಮಲ್ಯ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಭಾರತದಲ್ಲಿ ಸುಮಾರು 9000 ಕೋಟಿ ರೂಪಾಯಿ ಸಾಲದ ಸುಸ್ತಿದಾರನಾಗಿರುವ ವಿಜಯ್‌ ಮಲ್ಯ  ಲಂಡನ್‌ಗೆ ಪಲಾಯನಗೈದಿದ್ದಾರೆ. ಕಳೆದ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. 

ವಿರಾಟ್‌ ಕೊಹ್ಲಿ ಫೌಂಡೇಶನ್‌ ನಡೆಸಿಕೊಟ್ಟ  ಈ ಕಾರ್ಯಕ್ರಮದಲ್ಲಿ ಭಾರತದ ಕ್ರಿಕೆಟಿಗರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ವಿಜಯ್‌ ಮಲ್ಯ ಬಂದಿದ್ದು   ಚರ್ಚೆಗೆ ಗ್ರಾಸವಾಗಿದೆ.

ಈ ಕಾರ್ಯಕ್ರಮಕ್ಕೆ ವಿಜಯ್‌ ಮಲ್ಯ ಅವರನ್ನು ಆಹ್ವಾನಿಸಿರಲಿಲ್ಲ ಎಂದು ಕೊಹ್ಲಿ ಫೌಂಡೇಶನ್‌ ಸ್ಪಷ್ಟಪಡಿಸಿದೆ.  ಆದರೂ ಕಾರ್ಯಕ್ರಮಕ್ಕೆ ಆಹ್ವಾನಿಸದೇ ವಿಜಯ್‌ ಮಲ್ಯ ಹೇಗೆ ಬಂದರು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry