ಉತ್ತರಾಖಂಡದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ; ಅನ್ನದ ಉಂಡೆ ಬಳಸಿ ಕ್ರಿಕೆಟ್ ಆಡಿದ ಮಕ್ಕಳು!

7

ಉತ್ತರಾಖಂಡದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ; ಅನ್ನದ ಉಂಡೆ ಬಳಸಿ ಕ್ರಿಕೆಟ್ ಆಡಿದ ಮಕ್ಕಳು!

Published:
Updated:
ಉತ್ತರಾಖಂಡದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ; ಅನ್ನದ ಉಂಡೆ ಬಳಸಿ ಕ್ರಿಕೆಟ್ ಆಡಿದ ಮಕ್ಕಳು!

ಹಲ್ದ್ವಾನಿ : ಉತ್ತರಾಖಂಡದ ಹಲ್ದ್ವಾನಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿರುವ ವಿಷಯ ಬೆಳಕಿಗೆ ಬಂದಿದೆ.

ಎಎನ್‍ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ ಹಲ್ವ್ದಾನಿಯಲ್ಲಿ ವಾಸಿಸುತ್ತಿರುವ ಪಾಲ್ ಎಂಬವರ ಕುಟುಂಬ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಿದ್ದರು. ಆದರೆ ಈ ಅಕ್ಕಿಯ ರುಚಿಯೇ ಬೇರೆಯಾಗಿದ್ದರಿಂದ ಸಂದೇಹ ಬಂದಿತ್ತು.

ಅದೇ ವೇಳೆ ಪ್ಲಾಸ್ಟಿಕ್ ಅಕ್ಕಿಯಿಂದ ಮಾಡಿದ ಅನ್ನದ ಉಂಡೆಯನ್ನು ಬಳಸಿ ಮಕ್ಕಳು ಕ್ರಿಕೆಟ್ ಆಡುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿದೆ ಎಂಬ ಸುದ್ದಿ ಪ್ರಕಟವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry