ಉದ್ಯಮಿಗಳಿಗೆ ‘ಜಿಎಸ್‌ಟಿ ಸಲ್ಯೂಷನ್’ ತಂತ್ರಾಂಶ

7

ಉದ್ಯಮಿಗಳಿಗೆ ‘ಜಿಎಸ್‌ಟಿ ಸಲ್ಯೂಷನ್’ ತಂತ್ರಾಂಶ

Published:
Updated:
ಉದ್ಯಮಿಗಳಿಗೆ ‘ಜಿಎಸ್‌ಟಿ ಸಲ್ಯೂಷನ್’ ತಂತ್ರಾಂಶ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಒಗ್ಗಿಕೊಳ್ಳಲು ಅನುಕೂಲವಾಗುವಂತೆ ಹೊಸ ಹೊಸ ತಂತ್ರಾಂಶಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ದಿಸೆಯಲ್ಲಿ ಎಚ್‌ಪಿ ಇಂಡಿಯಾ ಮತ್ತು ಕೆಪಿಎಂಜಿ ಕಂಪೆನಿಗಳು ಸಹ ತಮ್ಮದೇ ಆದ ಕೊಡುಗೆ ನೀಡಿವೆ. ಮುಖ್ಯವಾಗಿ ವರ್ತಕರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಹೊಸ ವ್ಯವಸ್ಥೆಗೆ ಬದಲಾಗಲು ಅನುಕೂಲವಾಗುವ ‘ಜಿಎಸ್‌ಟಿ ಸಲ್ಯೂಷನ್‌’ ಎಂಬ ತಂತ್ರಾಂಶವನ್ನು ಈ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಎಚ್‌ಪಿ ಕಂಪೆನಿಯು ವಿಶೇಷವಾದ ಹೆಲ್ಪ್ ಡೆಸ್ಕ್‌ ಅಭಿವೃದ್ಧಿಪಡಿಸಿದೆ. ಕರೆ, ಇ–ಮೇಲ್‌ ಮತ್ತು ಚಾಟ್‌ ಮೂಲಕ ತೆರಿಗೆ ತಜ್ಞರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಶೀಘ್ರದಲ್ಲಿಯೇ ಇದು ಬಳಕೆಗೆ ಲಭ್ಯ ಇರಲಿದೆ. ಇದರ ಬೆಲೆ ₹33,990 ರಷ್ಟಿದೆ ಎಂದು ಎಚ್‌ಪಿ ಇಂಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಚಂದ್ರ ತಿಳಿಸಿದ್ದಾರೆ. ಎಚ್‌ಪಿಯ ಎಲ್ಲಾ ಪಾಲುದಾರ ವ್ಯವಹಾರ ಮಳಿಗೆಗಳಲ್ಲಿ, ಎಚ್‌ಪಿ ವರ್ಲ್ಡ್ ಮಳಿಗೆಗಳು ಮತ್ತು ಎಚ್‌ಪಿ ಶಾಪಿಂಗ್‌ಡಾಟ್‌ಇನ್/ಜಿಎಸ್‌ಟಿ ಯಲ್ಲಿ ಲಭ್ಯವಿದೆ.

ಎಂಎಸ್‌ಎಂಇಗಳ ಬಲವರ್ಧನೆಯಲ್ಲದೇ, ಹಲವು ವರ್ಗದ ಸಂಘಸಂಸ್ಥೆಗಳಿಗೂ ದೊಡ್ಡ ಮಟ್ಟದಲ್ಲಿ ಈ ಸಲೂಷನ್ ನೆರವಾಗಲಿದೆ. ಈ ಸಂಘಗಳ ಅಡಿಯಲ್ಲಿ ಬರುವ ವ್ಯಾಪಾರಸ್ಥರು, ವಿತರಕರು ಮತ್ತು ಡೀಲರ್‌ಗಳು ಜಿಎಸ್‌ಟಿ ವ್ಯಾಪ್ತಿಗೆ ಬಂದು ನಿಖರವಾದ ಜಿಎಸ್‌ಟಿ ರಿಟರ್ನ್ಸ್ ಅನ್ನು ಫೈಲ್ ಮಾಡಬಹುದಾಗಿದೆ. ಇದಲ್ಲದೇ, ಯಾವುದೇ ನೋಡಲ್ ಪಾಯಿಂಟ್‌ನಲ್ಲಿ ಟ್ಯಾಕ್ಸ್ ಕ್ರೆಡಿಟ್ ಸೋರಿಕೆಯಾದಲ್ಲಿ ಅದನ್ನು ಸರಿಪಡಿಸುವಲ್ಲಿಯೂ ಈ ಸಲೂಷನ್ ನೆರವಾಗಲಿದೆ. ಈ ಸಲೂಷನ್ ಇನ್‌ವಾಯ್ಸ್ ಸಿದ್ಧಪಡಿಸಲು  ಏಕರೂಪದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಪ್ರಮುಖ ಅಂಶಗಳು

* ಜಿಎಸ್‌ಟಿ ಅಳವಡಿಕೆ ನಂತರ ಸಮಗ್ರ ಜಿಎಸ್‌ಟಿ ಇನ್‌ವಾಯ್ಸಿಂಗ್ ಸಲೂಷನ್ ನೀಡಲಿದೆ

* ಜಿಎಸ್‌ಟಿಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ ಆರಂಭ

* ತಜ್ಞರ ತಂಡವನ್ನು ಒಳಗೊಂಡ ಹೆಲ್ಪ್‌ಡೆಸ್ಕ್ ಜಿಎಸ್‌ಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದೆ. 24 ತಿಂಗಳ ಟ್ಯಾಕ್ಸ್ ಫೈಲಿಂಗ್‌ಗೆ  ನೆರವಾಗಲಿದೆ.  ದೈನಂದಿನ ವ್ಯವಹಾರ ಮತ್ತು ಜಿಎಸ್‌ಟಿ ಫೈಲಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry