ಜಿಲ್ಲೆಯಲ್ಲಿ ವಿವಿಧೆಡೆ ಮಳೆ; ಬಿತ್ತನೆ ಆರಂಭ

7

ಜಿಲ್ಲೆಯಲ್ಲಿ ವಿವಿಧೆಡೆ ಮಳೆ; ಬಿತ್ತನೆ ಆರಂಭ

Published:
Updated:
ಜಿಲ್ಲೆಯಲ್ಲಿ ವಿವಿಧೆಡೆ ಮಳೆ; ಬಿತ್ತನೆ ಆರಂಭ

ರಾಯಚೂರು: ಮುಂಗಾರು ಹಂಗಾಮಿನಲ್ಲಿ ಜೂನ್‌ 1 ರಿಂದ 15 ವರೆಗೂ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ಕೆಲವು ಭಾಗದಲ್ಲಿ ರೈತರು ಬಿತ್ತನೆ ಆರಂಭಿಸಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಆಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆ ಕೊರತೆ ಕಂಡು ಬಂದಿದೆ. ದೇವದುರ್ಗ, ಲಿಂಗಸುಗೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಕೊರತೆ ಇದೆ.

ಬುಧವಾರ ರಾತ್ರಿಯಿಂದಲೂ ವಿವಿಧ ಕಡೆಗಳಲ್ಲಿ ಬಿಟ್ಟು ಬಿಟ್ಟು ತುಂತುರು ಮಳೆ ಸುರಿಯಿತು. ಲಿಂಗಸುಗೂರಿನಲ್ಲಿ 6, ಗುರುಗುಂಟಾ 18, ಹಟ್ಟಿ 10 ಮಿ.ಮೀ ಮಳೆ ಸುರಿದಿದೆ. ಮಾನ್ವಿ 7.3, ಕುರ್ಡಿ 9.2, ರಾಜಬಂಡಾ 9, ಕಲ್ಲೂರ 3.2, ಸಿರವಾರ 8.6, ಮಲ್ಲತ್‌ 42, ಕುರಕುಂದಾ 10, ಕವಿತಾಳ 15, ಹಲಾಪುರ 3 ಮಿ.ಮೀ ಮಳೆಯಾಗಿದೆ.

ರಾಯಚೂರು 1.2, ಯರಮರಸ್‌ 3.4, ಯರಗೇರಾ 9, ಗಿಲ್ಲೆಸುಗೂರ 7.5, ಕಲಮಲ 11, ದೇವಸುಗೂರ 8, ಜೆಗರಕಲ್‌ 5, ಸಿಂಧನೂರು 9, ಬಾದರ್ಲಿ 9.2, ಹೆಡಗಿನಾಳ 26.4, ಸಲಗುಂಡಾ 6.8, ಬಳಗಾನೂರ 9, ಗೊರೆಬಾಳ 17.4, ಗುಡದೂರ 3.2, ಜಾಲಿಹಾಳ 5.2 ಕುನ್ನಟಗಿ 8.6, ವಲಕಮದಿನ್ನಿ 25, ತುರ್ವಿಹಾಳ 4, ಗುಂಜಳ್ಳಿ 8.2, ಹುಡಾ 4 ಮಿ.ಮೀ ಮಳೆ ಬಿದ್ದಿರುವುದು ದಾಖಲಾಗಿದೆ.

‘ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಗಳನ್ನು ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ರೈತರು ಮುಂಗಾರು ಬಿತ್ತನೆಗೆ ಅಗತ್ಯ ಬೀಜ ಮತ್ತು ಗೊಬ್ಬರವನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಬೇಕಾಗಿರುವ ಕುಸುಬಿ ಬೀಜಗಳನ್ನು ಕೃಷಿ ಇಲಾಖೆಯಿಂದ ಕೊಡುತ್ತಿಲ್ಲ’ ಎಂದು ಕೆಲವು ಕಡೆಗಳಲ್ಲಿ ರೈತರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry