ಗುರುವಾರ , ಆಗಸ್ಟ್ 18, 2022
25 °C

ವಿ.ಪಿ. ಸಿಂಗ್‌ ಅವರಿಂದ ಮೋದಿವರೆಗೆ ಜಿಎಸ್‌ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿ.ಪಿ. ಸಿಂಗ್‌ ಅವರಿಂದ ಮೋದಿವರೆಗೆ ಜಿಎಸ್‌ಟಿ

1986: ಫೆಬ್ರುವರಿ: ಅಬಕಾರಿ ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗಬೇಕು ಎಂದು ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್

1986–87ರ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದರು

2000: ಜಿಎಸ್‌ಟಿಯ ಸ್ವರೂಪವನ್ನು ವಿನ್ಯಾಸ ಮಾಡಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂ ದಾಸ್‌ಗುಪ್ತಾ ನೇತೃತ್ವದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಿತಿ ರಚನೆ

2003: ತೆರಿಗೆ ಸುಧಾರಣೆ ಶಿಫಾರಸಿಗಾಗಿ ವಿಜಯ್ ಕೇಳ್ಕರ್‌ ನೇತೃತ್ವದಲ್ಲಿ ಕಾರ್ಯಪಡೆ ರಚನೆ

2004: ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ಪರ್ಯಾಯವಾಗಿ ಜಿಎಸ್‌ಟಿ ಜಾರಿ ಮಾಡಬಹುದು ಎಂದು ಕೇಳ್ಕರ್ ಅವರಿಂದ ಶಿಫಾರಸು

2006: ಫೆಬ್ರುವರಿ, 28: ಜಿಎಸ್‌ಟಿ ಬಗ್ಗೆ ಬಜೆಟ್‌ ಭಾಷಣದಲ್ಲಿ ಪ್ರಸ್ತಾವ ಮಾಡಿದ ಹಣಕಾಸು ಸಚಿವ ಪಿ.ಚಿದಂಬರಂ. ಜಿಎಸ್‌ಟಿ ಅನುಷ್ಠಾನಕ್ಕೆ 2010ರ ಏಪ್ರಿಲ್‌1ರ ಗಡವು

2008: ಜಿಎಸ್‌ಟಿ ಅನುಷ್ಠಾನ ನೀಲನಕ್ಷೆ ಸಿದ್ಧಪಡಿಸಲು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುವ ಉನ್ನತಾಧಿಕಾರ ಸಮಿತಿ ರಚನೆ

2008:ಏಪ್ರಿಲ್ 30: ಜಿಎಸ್‌ಟಿ ಅನುಷ್ಠಾನ ನೀಲನಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ  ಉನ್ನತಾಧಿಕಾರ ಸಮಿತಿ

2009: ದಾಸ್‌ಗುಪ್ತಾ ಸಮಿತಿ ವಿನ್ಯಾಸ ಮಾಡಿದ ಜಿಎಸ್‌ಟಿಯ ಮೂಲ ಸ್ವರೂಪವನ್ನು ಬಹಿರಂಗಪಡಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ. ಮೂಲ ಸ್ವರೂಪದ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪ

2010 ಫೆಬ್ರುವರಿ: ಜಿಎಸ್‌ಟಿ ಜಾರಿಗೆ ಪೂರ್ವಭಾವಿಯಾಗಿ ರಾಜ್ಯ ವಾಣಿಜ್ಯ ತೆರಿಗೆಗಳ ಕಂಪ್ಯೂಟರೀಕರಣಕ್ಕೆ ಚಾಲನೆ.  ಜಿಎಸ್‌ಟಿ ಜಾರಿ, 2011ರ ಏಪ್ರಿಲ್‌ 1ಕ್ಕೆ ಮುಂದೂಡಿಕೆ

2011:ಮಾರ್ಚ್ 22: ಜಿಎಸ್‌ಜಿ ಜಾರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಲೋಕಸಭೆಯಲ್ಲಿ 115ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ ಯುಪಿಎ–2 ಸರ್ಕಾರ

ಮಾರ್ಚ್ 29: ಜಿಎಸ್‌ಟಿ ಮಸೂದೆ, ಯಶವಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ. ಅಸೀಂ ದಾಸ್‌ಗುಪ್ತಾ ಸ್ಥಾನಕ್ಕೆ ಕೆ.ಎಂ.ಮಾಣಿ ನೇಮಕ

2013 ಫೆಬ್ರುವರಿ: ಜಿಎಸ್‌ಟಿಯಿಂದಾಗಿ ತೆರಿಗೆ ನಷ್ಟ ಅನುಭವಿಸುವದರಿಂದ

ರಾಜ್ಯಗಳಿಗೆ ₹ 9,000 ಕೋಟಿ ಪರಿಹಾರ ನೀಡುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ ಪಿ.ಚಿದಂಬರಂ

ಆಗಸ್ಟ್: ಜಿಎಸ್‌ಟಿಯಲ್ಲಿನ ಸುಧಾರಣೆಗಳ ಸಂಬಂಧ ವರದಿ ಸಲ್ಲಿಸಿದ ಸಂಸದೀಯ ಸ್ಥಾಯಿ ಸಮಿತಿ. ಸಂಸತ್ತಿನಲ್ಲಿ ಮಂಡನೆಗೆ ಮಸೂದೆ ಸಿದ್ಧ

ಅಕ್ಟೋಬರ್: ‘ಜಿಎಸ್‌ಟಿಯಿಂದ

ರಾಜ್ಯಕ್ಕೆ ಪ್ರತಿ ವರ್ಷ ₹ 14,000 ಕೋಟಿ ತೆರಿಗೆ ನಷ್ಟವಾಗುತ್ತದೆ’ ಎಂದು ಜಿಎಸ್‌ಟಿ ವಿರುದ್ಧ ಧ್ವನಿ ಎತ್ತಿದ ಗುಜರಾತ್ ಮುಖ್ಯಮಂತ್ರಿ

ನರೇಂದ್ರ ಮೋದಿ

2014: ಲೋಕಸಭೆ ವಿಸರ್ಜನೆ ಆದ ಕಾರಣ, ಸಂಸದೀಯ ಸಮಿತಿ ಪಾಸು ಮಾಡಿದ್ದ ಜಿಎಸ್‌ಟಿ ಮಸೂದೆ ರದ್ದಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ

ಡಿಸೆಂಬರ್ 18: ಜಿಎಸ್‌ಟಿಯ 122ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಪುಟ ಒಪ್ಪಿಗೆ

ಡಿಸೆಂಬರ್ 19: ಲೋಕಸಭೆಯಲ್ಲಿ ಮಸೂದೆ ಮಂಡನೆ. ಕಾಂಗ್ರೆಸ್‌ನಿಂದ ಆಕ್ಷೇಪ

2015 ಫೆಬ್ರುವರಿ: 2016ರ ಏಪ್ರಿಲ್‌1ಕ್ಕೆ ಜಿಎಸ್‌ಟಿ ಜಾರಿಗೆ ಗಡವು ನಿಗದಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ

ಮೇ 6: ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ

ಮೇ 12: ರಾಜ್ಯಸಭೆಯಲ್ಲಿ ಮಸೂದೆ ಮಂಡನೆ.  ಜಿಎಸ್‌ಟಿ ದರವನ್ನು ಗರಿಷ್ಠ ಶೇ18ಕ್ಕೆ ನಿಗದಿ ಮಾಡುವಂತೆ ಕಾಂಗ್ರೆಸ್‌ನಿಂದ ಬೇಡಿಕೆ

ಮೇ 14: ರಾಜಸ್ಯಸಭೆ ಮತ್ತು ಲೋಕಸಭೆಯ ಜಂಟಿ ಸಮಿತಿ ಮುಂದಕ್ಕೆ ಮಸೂದೆ

ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ವಿರೋಧ ಪಕ್ಷಗಳಿಂದ ಬೆಂಬಲ ಪಡೆಯಲು ವಿಫಲವಾದ ಸರ್ಕಾರ

2016 ಜುಲೈ: ಜಿಎಸ್‌ಟಿ ದರವನ್ನು ಗರಿಷ್ಠ

ಶೇ18ಕ್ಕೆ ನಿಗದಿ ಮಾಡಲು ನಿರಾಕರಿಸಿದ ಸರ್ಕಾರ

ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿಗೆ. ಮಸೂದೆಗೆ ರಾಜ್ಯಸಭೆಯ ಅನುಮೋದನೆ

ಸೆಪ್ಟೆಂಬರ್ 2: ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ನವೆಂಬರ್ 3: ಶೇ 5, ಶೇ 12, ಶೇ 18 ಮತ್ತು ಶೇ 28ರಂತೆ ನಾಲ್ಕು ಹಂತದಲ್ಲಿ ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಒಪ್ಪಿಗೆ. ಇದರ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಅವಕಾಶ

2017ಜನವರಿ 16: 2017ರ ಜುಲೈ 1ರಂದು ಜಿಎಸ್‌ಟಿ ಜಾರಿ ಘೋಷಣೆ

ಫೆಬ್ರುವರಿ : ತೆರಿಗೆ ನಷ್ಟ ಅನುಭವಿಸುವುದರಿಂದ ರಾಜ್ಯ ಸರ್ಕಾರಗಳಿಗೆ ಐದು ವರ್ಷ ಪರಿಹಾರ ನೀಡಲು ಅವಕಾಶ ಮಾಡಿಕೊಡುವ ಜಿಎಸ್‌ಟಿ ಪೂರಕ ಮಸೂದೆಗಳ ಕರಡು ಅಂತಿಮಗೊಳಿಸಿದ ಮಂಡಳಿ

ಮಾರ್ಚ್ : ಜಿಎಸ್‌ಟಿ ಪೂರಕ ಮಸೂದೆಗಳಿಗೆ ಸಂಪುಟ ಒಪ್ಪಿಗೆ. ಸಂಸತ್ತಿನಲ್ಲಿ ಮಂಡನೆ.  ಎರಡೂ ಸದನಗಳಲ್ಲಿ ಮಸೂದೆಗಳಿಗೆ ಅನುಮೋದನೆ

ಜೂನ್ 21 : ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು, ರಾಜ್ಯ ಜಿಎಸ್‌ಟಿ ಮಸೂದೆಯನ್ನು ಪಾಸು ಮಾಡಿದವು

ಜೂನ್ 28 :  ಮಧ್ಯರಾತ್ರಿಯಲ್ಲಿ ಜಿಎಸ್‌ಟಿ ಜಾರಿ ಘೋಷಣೆ ಕಾರ್ಯಕ್ರಮಕ್ಕೆ ಗೈರು ಹಾಗಲು  ನಿರ್ಧರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.