ಶುಕ್ರವಾರ, ಡಿಸೆಂಬರ್ 13, 2019
20 °C

ನಾಗೂರಿನಲ್ಲಿ ಮದ್ಯದ ಅಂಗಡಿಗೆ ಅನುಮತಿ ಬೇಡ: ಜನರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗೂರಿನಲ್ಲಿ ಮದ್ಯದ ಅಂಗಡಿಗೆ ಅನುಮತಿ ಬೇಡ: ಜನರ ಮನವಿ

ಉಡುಪಿ: ಕಿರಿ ಮಂಜೇಶ್ವರ ಗ್ರಾಮದ ಕೊಡೇರಿ ಗಂಗೆಬೈಲು ಹೊಸಹಿತ್ಲು ಮತ್ತು ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ನಾಗೂರು ಕಿರಿಮಂಜೇಶ್ವರದ ಶ್ರೀರಾಮ ಭಜನಾ ಮಂದಿರದ ಸದಸ್ಯರು ಅಬಕಾರಿ ಇಲಾಖೆಗೆ ಶನಿವಾರ ಮನವಿ ಸಲ್ಲಿಸಿದರು.

ನಾಗನೂರಿನಲ್ಲಿದ್ದ ಮದ್ಯದ ಅಂಗಡಿ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆ ಯಲ್ಲಿ ಬಂದ್ ಆಗಿದೆ. ಆ ಅಂಗಡಿಯನ್ನು ನಾಗೂರಿನ ಮುಖ್ಯರಸ್ತೆಯಲ್ಲಿರುವ ಮನೆ ಯೊಂದಕ್ಕೆ ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ಬಂದಿದೆ.

ಅಲ್ಲದೆ ಮಾಂಸಾಹಾರಿ ಹೋಟೆಲ್ ಅನ್ನು ಸಹ ಆರಂಭಿಸಲಾಗುತ್ತದೆ ಎಂಬ ಸುದ್ದಿ ಇದೆ. ಆ ರಸ್ತೆ ತುಂಬಾ ಕಿರಿದಾಗಿದ್ದು, ಮೀನುಗಾರಿಕಾ ವಹಿವಾಟು ಅದೇ ರಸ್ತೆಯಲ್ಲಿ ನಡೆಯುತ್ತದೆ. ಮದ್ಯದ ಅಂಗಡಿ ಆರಂಭವಾದರೆ ಅಲ್ಲಿ ಕುಡುಕರ ಕಾಟ ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಶಾಂತಿಯುತ ಪರಿಸರಕ್ಕೂ ಧಕ್ಕೆಯಾಗಲಿದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿಯನ್ನು ಅಲ್ಲಿ ತೆರೆಯಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಗ್ರಾಮಸ್ಥರು ಹೇಳಿರುವ ಸ್ಥಳದಲ್ಲಿ ಮದ್ಯದ ಅಂಗಡಿ ತೆರೆಯಲು ಈ ವರೆಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)