ಸೋಮವಾರ, ಡಿಸೆಂಬರ್ 16, 2019
17 °C

ಪುರಂದರ ದಾಸರ ಸಂಗೀತ ದರ್ಶನ

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಪುರಂದರ ದಾಸರ ಸಂಗೀತ ದರ್ಶನ

ಕರ್ನಾಟಕ ಫೈನ್ ಆರ್ಟ್ಸ್‌ ಕೌನ್ಸಿಲ್ ಹಾಗೂ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ ವತಿಯಿಂದ ‘ಪುರಂದರ ದರ್ಶನ’ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮವು ಬಸವನಗುಡಿಯ ಶ್ರೀ ಕಾರಂಜಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಜುಲೈ 7ರಿಂದ 9ರವರೆಗೆ ನಡೆಯಲಿದೆ.

‘ಪುರಂದರದಾಸರ ಗುರುಗಳಾದ ವ್ಯಾಸರಾಜರು ಪುರಂದರದಾಸರು ರಚಿಸಿದ ಕೀರ್ತನೆಗಳನ್ನು ಪುರಂದರೋಪನಿಷತ್ತು ಎಂದು ಕರೆದರು. ಸಮಕಾಲೀನ ಮತ್ತು ಸರಳವಾಗಿರುವ ಪುರಂದರ ದಾಸರ ಸಾಹಿತ್ಯ ಜನಸಾಮಾನ್ಯರನ್ನು ಬೇಗ ತಲುಪುತ್ತದೆ. ಇಂಥ ಮಹತ್ವ ಇರುವ ಸಾಹಿತ್ಯ ಸಂಗೀತವನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ ಕರ್ನಾಟಕ ಫೈನ್ ಆರ್ಟ್ಸ್‌ ಕೌನ್ಸಿಲ್ ಅಧ್ಯಕ್ಷ ಆರ್.ಆರ್. ರವಿಶಂಕರ್ 

ಬೆಂಗಳೂರಿನ 10 ಶಾಸ್ತ್ರೀಯ ಸಂಗೀತ ಸಭಾಗಳು ಸೇರಿ 2014 ಹುಟ್ಟುಹಾಕಿದ ಸಂಸ್ಥೆ ಇದು. ಇದರಲ್ಲಿ ಬೆಂಗಳೂರು ಗಾಯನ ಸಮಾಜ, ಭಾರತೀಯ ಸಾಮಗಾನ ಸಭಾ, ಅನನ್ಯ, ರಾಮ ಲಲಿತ ಕಲಾ ಮಂದಿರ, ಎಂ.ಎನ್. ನರಸಿಂಹಾಚಾರ್ ಫೌಂಡೇಷನ್, ವಿಶೇಷ ಫೈನ್ ಆರ್ಟ್‌, ಎಸ್.ಜಿ.ಬಿ.ಎಸ್. ನಾದಸುರಭಿ ಈ ಹತ್ತು ಲಲಿತಕಲಾ ಸಂಸ್ಥೆಗಳು ಸೇರಿ ಕರ್ನಾಟಕ ಫೈನ್ ಆರ್ಟ್ಸ್‌ ಕೌನ್ಸಿಲ್ ಸ್ಥಾಪಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿವೆ.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪುರಂದರ ದಾಸರ ಕೀರ್ತನೆಯನ್ನು ಹಾಡಿ ಅದಕ್ಕೆ ಅರ್ಥವನ್ನೂ ಹೇಳುವ ಗಾಯನ ಪ್ರವಚನವಿದೆ. ‘ಗುರು–ಶಿಷ್ಯ ‘ಗೀತ ಸಂಗಮ’ದಲ್ಲಿ ಗುರು ಮತ್ತು ಅವರ ಶಿಷ್ಯ ವೃಂದ ಒಟ್ಟಾಗಿ ದೇವರನಾಮ ಹಾಡುತ್ತಾರೆ. ಹಿರಿಯ ವಿದ್ವಾಂಸರು ಸದಸ್ಯರಾಗಿರುವ ಕರ್ನಾಟಕ ಗಾನಕಲಾ ಪರಿಷತ್‌ ವತಿಯಿಂದ ‘ಪುರಂದರ ದೇವರನಾಮ ಗೋಷ್ಠಿ ಗಾಯನ’ವಿದೆ.

ವಿದ್ವಾಂಸರಾದ ವಿದ್ಯಾಭೂಷಣ, ವೆಂಕಟೇಶ್ ಕುಮಾರ್, ಆರ್. ಕೆ. ಪದ್ಮನಾಭ, ಎಂ.ಎಸ್. ಶೀಲಾ, ಜಯತೀರ್ಥ ಮೇವುಂಡಿ, ನೀಲಾ ರಾಂಗೋಪಾಲ್, ಸಂಗೀತಾ ಕಟ್ಟಿ, ವಾಣಿ ಸತೀಶ್, ಟಿ.ಎಸ್. ಸತ್ಯವತಿ, ಕೈವಲ್ಯ ಕುಮಾರ್, ವಿನಾಯಕ ತೊರವಿ, ಪರಮೇಶ್ವರ ಹೆಗಡೆ, ನಾಗರಾಜ ಹವಾಲ್ದಾರ, ಸುಮಾ ಸುಧೀಂದ್ರ, ವಿಜಯ ಪ್ರಕಾಶ್, ಎಸ್. ಶಂಕರ್, ಎಂ.ಜಿ. ವೆಂಕಟರಾಘವನ್, ರುದ್ರಪಟ್ಲಂ ಸಹೋದರರು ಹಾಗೂ ಇನ್ನೂ ಅನೇಕ ಕಲಾವಿದರಿಂದ ಒಟ್ಟಾರೆ 43 ಕಾರ್ಯಕ್ರಮಗಳು ನಡೆಯಲಿವೆ.

ಸಂಗೀತ ಕಾರ್ಯಕ್ರಮದೊಂದಿಗೆ ಪುರಂದರದಾಸರ ಬದುಕಿನ ಎಳೆಗಳನ್ನು ಬಿಚ್ಚಿಡುವ ಭರತನಾಟ್ಯ ನೃತ್ಯರೂಪಕ ಕೂಡ ಪ್ರದರ್ಶನವಾಗಲಿದೆ.

**

‘ಪುರಂದರ ದರ್ಶನ’ ಸಂಗೀತ ಕಾರ್ಯಕ್ರಮ: ಸಂಜೆ 6 ಗಂಟೆಗೆ ಕರ್ನಾಟಕ ಸಂಗೀತ ಗಾಯನ– ಎಂ.ಎಸ್.ಸುಶೀಲಾ. 6.35ಕ್ಕೆ ಹಿಂದೂಸ್ತಾನಿ ಸಂಗೀತ– ವಿನಾಯಕ ತೊರವಿ. 7.10ಕ್ಕೆ ಗಾನ ಪ್ರವಚನ– ಟಿ.ಎಸ್.ಸತ್ಯವತಿ. 7.45ಕ್ಕೆ ಹಿಂದೂಸ್ತಾನಿ ಸಂಗೀತ– ವೆಂಕಟೇಶ್ ಕುಮಾರ್. 8.20ಕ್ಕೆ ಕರ್ನಾಟಕ ಸಂಗೀತ– ಕಲಾವತಿ ಅವಧೂತ. ಸ್ಥಳ: ಕಾರಂಜಿ ಕೆರೆ ಆಂಜನೇಯ ಸ್ವಾಮಿ ದೇವಾಲಯ, ಗಾಂಧಿ ಬಜಾರ್ ರಸ್ತೆ. ಬಸವಗುಡಿ. 

ಪ್ರತಿಕ್ರಿಯಿಸಿ (+)